ಉಡುಪಿ: ‘ಗೋ ಗ್ರೀನ್ – ಸಾವಯವ’ ದ್ವಿತೀಯ ಶಾಖೆ ಉದ್ಘಾಟನೆ

ಉಡುಪಿ: (ಉಡುಪಿ ಟೈಮ್ಸ್ ವರದಿ)ನಗರದ ಹೆಸರಾಂತ “ಗೋ ಗ್ರೀನ್-ಸಾವಯವ ” ಮಳಿಗೆಯ ದ್ವಿತೀಯ ಶಾಖೆ ಡಿ.26 ಬೆಳಿಗ್ಗೆ ಕಡಿಯಾಳಿ ಮುಖ್ಯ ರಸ್ತೆಯ ಸಚ್ವಿದಾನಂದ ಬಿಲ್ಡಿಂಗ್‌ನಲ್ಲಿ ಶುಭಾರಂಭ ಗೊಳ್ಳಲಿದೆ.


ಪ್ರಸ್ತುತ ಉಡುಪಿಯ ಮದರ್ ಆಫ್ ಸಾರೋ ಚರ್ಚ್‌ನ ವಿದ್ಯಾ ಜ್ಯೋತಿ ಕಟ್ಟಡದಲ್ಲಿರುವ ‘ಗೋ ಗ್ರೀನ್’ ಕೃಷಿಗೆ ಸಂಬಂಧಿಸಿದ ಪರಿಕರಗಳನ್ನು, ಮನೆಯ ಗಾರ್ಡ್‌ನ್‌ನ ಅಂದ ಹೆಚ್ಚಿಸುವ ಗಿಡಗಳನ್ನು ಹಲವಾರು ವರ್ಷಗಳಿಂದ ಮಾರಾಟ ಮಾಡುತ್ತ, ನಗರದಲ್ಲಿ ಪ್ರಸಿದ್ದಿ ಪಡೆದಿತ್ತು.ಇವರ ಎರಡನೇ ಶಾಖೆ ನಾಳೆ ಕಡಿಯಾಳಿಯಲ್ಲಿ ಉದ್ಘಾಟನೆಗೊಳ್ಳಲಿದೆ.

ಗೋ ಗ್ರೀನ್‌ನಲ್ಲಿ ಸಾವಯವ ಮಳಿಗೆಯಲ್ಲಿ ಗ್ರೋ ಬ್ಯಾಗ್ಸ್, ಫ್ಲವರ್ ಪಾಟ್ಸ್, ಕೋಕೊ ಪೀಟ್ಸ್, ಸೀಡ್ಸ್, ಪಾಟ್ ಮಿಕ್ಸ್, ವರ್ಮಿ ಕಂಪೋಸ್ಟ್, ಇಂಡೋರ್ ಆಂಡ್ ಔಟ್ ಡೋರ್ ಪ್ಲಾಂಟ್ಸ್, ಸ್ಪ್ರೇಯರ್ಸ್, ನೀಮ್ ಆಯಿಲ್, ನೀಮ್ ಕೇಕ್ , ಟೆರೆಸ್ ಗಾರ್ಡನ್, ಹೈಡ್ರೋಪೋನಿಕ್, ಗಾರ್ಡನ್ ಮೈಂಟೆನೆನ್ಸ್, ಹೌಸ್ ಗಾರ್ಡನಿಂಗ್ ಮೊದಲಾದವುಗಳು ಸಿಗಲಿದೆ.

ಮಾತ್ರವಲ್ಲದೆ ಕೃಷಿಗೆ ಸಂಬಂಧಿಸಿದ ಸಾವಯ ಗೊಬ್ಬರ, ರೈತರಿಗೆ ಬೇಕಾದ ಕೃಷಿ ಸಂಬಂಧಿಸಿದ ಸಲಕರಣೆಗಳು ಅತೀ ಕಡಿಮೆ ಬೆಲೆಯಲ್ಲಿ ದೊರೆಯುತ್ತದೆಂದು ಸಂಸ್ಥೆಯ ಮಾಲಕ ಫೆಲೀಕ್ಸ್ ಆಳ್ವ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!