ಉಡುಪಿ ನಗರಕ್ಕೆ ಇನ್ನೊಂದು ಗರಿ ‘ವಿಶಾಲ್ ಮೆಗಾಮಾರ್ಟ್’ನ 407ನೇ ಶಾಖೆ ಉದ್ಘಾಟನೆ

ಉಡುಪಿ: ಜನಪ್ರಿಯ ವಿಶಾಲ್ ಮೆಗಾ ಮಾರ್ಟ್ ನ ನೂತನ ಶಾಖೆ ಉಡುಪಿಯಲ್ಲಿ ಇಂದು ಶುಭಾರಂಭಗೊಂಡಿದೆ. ಉಡುಪಿಯ ಗುಂಡಿ ಬೈಲ್ ನಲ್ಲಿರುವ  ಈ ಸುಸಜ್ಜಿತ ಶೋ ರೂಂ ನ್ನು ಕಟ್ಟಡದ ಮಾಲಿಕ ರಾಮಚಂದ್ರ ಆಚಾರ್ಯ ಅವರು ಉದ್ಘಾಟಿಸಿದರು. 

19000 ಚರದ ವಿಸ್ತೀರ್ಣ ದ ಈ ಸುಸಜ್ಜಿತ ಮಳಿಗೆಯಲ್ಲಿ ಗ್ರಾಹಕರಿಗೆ ಬೇಕಾದ ಗೃಹೋಪಯೋಗಿ ವಸ್ತುಗಳು, ಆಹಾರ ಮತ್ತು ಗ್ರೋಸರಿಗಳು, ಎಲೆಕ್ಟ್ರಾನಿಕ್ ಐಟೆಮ್ ಗಳು ಒಂದೇ ಸೂರಿನಡಿಯಲ್ಲಿ ಸಿಗಲಿದೆ.

ಈಗಾಗಲೇ ಬೆಂಗಳೂರಿನಲ್ಲಿ ಜನಪ್ರಿಯ ವಿಶಾಲ್ ಮೆಗಾ ಮಾರ್ಟ್ ನ 20 ಶಾಖೆಗಳು ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ಕರ್ನಾಟಕದಾದ್ಯಂತ ಉಡುಪಿಯಲ್ಲಿ ಇಂದು ಉದ್ಘಾಟನೆಗೊಂಡ 407ನೇ ಶಾಖೆಯಾಗಿದೆ.

ಇಲ್ಲಿ ಗ್ರಾಹಕರ ಅನುಕೂಲಕ್ಕಾಗಿ ವಸ್ತುಗಳನ್ನು ಅವುಗಳ ಉಪಯೋಗಕ್ಕನುಗುಣವಾಗಿ ವರ್ಗೀಕರಿಸಲಾಗಿದೆ. ಇನ್ನು ಇಂದು ನಡೆದ ಶೋ ರೂಂನ ಉದ್ಘಾಟನಾ ಸಮಾರಂಭದಲ್ಲಿ ವಿಶಾಲ್ ಮೆಗಾ ಮಾರ್ಟ್ ನ ಮ್ಯಾನೇಜರ್ ಅಜಿತ್, ಸಹಾಯಕ ಅಸಿಸ್ಟೆಂಟ್ ಮ್ಯಾನೇಜರ್ ಸಚಿನ್, ಏರಿಯಾ ಮ್ಯಾನೇಜರ್ ನವೀನ್ ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು.

ಈ ಮಳಿಗೆಯಲ್ಲಿ ಬಟ್ಟೆಗಳು ವಿಶೇಷ ರಿಯಾಯಿತಿ ದರದಲ್ಲಿ ಸಿಗುತ್ತಿದೆ. ವಿಶಾಲ್ ಮೆಗಾ ಮಾರ್ಟ್ ನ ದೆಹಲಿಯ ಫ್ಯಾಕ್ಟರಿಯಲ್ಲಿ ತಯಾರಿಸುವ ಅವರದ್ದೆ ಆದ ಸ್ವಾಯತ್ತ ಬ್ರಾಂಡ್ ನ ಬಟ್ಟೆಗಳು ಇಲ್ಲಿ ಅತ್ಯಂತ ಕಡಿಮೆ ಬೆಲೆಯಲ್ಲಿ ಸಿಗುತ್ತದೆ.

ಇದರೊಂದಿಗೆ ಅನ್ ಸ್ಪಾಪೇಬಲ್ ಎಂಬ ಸ್ಪೋರ್ಟ್ಸ್ ವೇರ್ ಮಾರುಕಟ್ಟೆ ಗೆ ಬಂದಿದ್ದು ಇಲ್ಲಿ  ಪಾದರಕ್ಷೆಗಳು ರೀಸನೇಬಲ್ ಪ್ರೈಸ್ ನಲ್ಲಿ ಸಿಗಲಿದೆ. 

ಇನ್ನು ಇಲ್ಲಿ ಉದ್ಘಾಟನೆಯ ಸಂಭ್ರಮ ವಸಗಿ  ಗ್ರಾಹಕರಿಗೆ ವಿಶೇಷ ಉಚಿತ ಉಡುಗೊರೆಗಳೂ ಸಿಗುತ್ತಿದೆ.  1500 ಮೌಲ್ಯದ ಖರೀದಿ ಮೇಲೆ ಗ್ರಾಹಕರಿಗೆ 1ಕೆಜಿ ಸಕ್ಕರೆ, ರೂ. 5000 ಮೇಲಿನ ಖರೀದಿ ಗೆ 5 ಕೆ.ಜಿ ಬಾಸುಮತಿ ಅಕ್ಕಿ ಹಾಗೂ ರೂ. 3000 ದ ಖರೀದಿಗೆ 2 ಡಿಶ್ ವಾಶ್ ಜೆಲ್ , 2 ಹ್ಯಾಂಡ್ ವಾಶ್ ಮತ್ತು 7,500 ರೂ ಮೇಲಿನ ಖರೀದಿಗೆ 3ಲೀ. ಪ್ರೆಶರ್ ಕುಕ್ಕರ್ ಉಚಿತವಾಗಿ ಸಿಗಲಿದೆ. ಹಾಗಾದ್ರೆ ಈಗಲೇ ಭೇಟಿ ನೀಡಿ ಈ ಸೀಮಿತ ಅವಧಿಯ ವಿಶೇಷ ರಿಯಾಯಿತಿಯನ್ನು ನಿಮ್ಮದಾಗಿಸಿಕೊಳ್ಳಿ.

Leave a Reply

Your email address will not be published. Required fields are marked *

error: Content is protected !!