ಶೈಕ್ಷಣಿಕ ಶೂನ್ಯ ವರ್ಷ ಎಂದು ಘೋಷಿಸಿ: ಶ್ರೀರಾಮಸೇನೆಯ ಜಿಲ್ಲಾಧ್ಯಕ್ಷ ಜಯರಾಂ ಆಗ್ರಹ
ಉಡುಪಿ: ಈಗಾಗಲೇ ಕೊರೋನಾದಿಂದ ತತ್ತರಿಸಿರುವ ವಿಧ್ಯಾರ್ಥಿಗಳು ಮತ್ತು ಪೋಷಕರು, ಜನವರಿ 1 ರಿಂದ ಶಾಲೆಗಳು ಆರಂಭವಾಗುವ ಸರಕಾರದ ಆದೇಶದ ಬಗ್ಗೆ ದಿಗ್ಭ್ರಾಂತರಾಗಿದ್ದಾರೆ. ಶಾಲೆ ಇಲ್ಲದಿದ್ದರೂ ಖಾಸಾಗಿ ಶಾಲೆಯವರು ಪೋಷಕರಿಂದ ಶಾಲಾ ಶುಲ್ಕವನ್ನು ಬಲವಂತವಾಗಿ ಸಂಗ್ರಹಿಸುತ್ತಿರುವುದು ತಿಳಿದುಬಂದಿದೆ.
SSLC ಮತ್ತು PUC ಜೀವನದ ಮೆಟ್ಟಿಲ್ಲಾಗಿರುವುದರಿಂದ , ವಿಧ್ಯಾರ್ಥಿಗಳಿಗೆ ಸರಿಯಾದ ಸಮಯ ಕೊಡುವುದು ಸೂಕ್ತ. ಖಾಸಾಗಿ ಶಾಲೆಗಳ ಲಾಬಿಗೆ ಮಣಿದು ಸರಕಾರ ಶಾಲೆಗಳನ್ನು ಪ್ರಾರಂಭಿಸುವ ಬದಲು, ವಿಧ್ಯಾರ್ಥಿಗಳ ಭವಿಷ್ಯದ ಹಿತದೃಷ್ಟಿಯಿಂದ ಈ ವರ್ಷವನ್ನು ಶೈಕ್ಷಣಿಕ ಶೂನ್ಯ ವರ್ಷ ಎಂದು ಘೋಷಿಸಲು ಶ್ರೀ ರಾಮಸೇನೆಯ ಉಡುಪಿ ಜಿಲ್ಲಾಧ್ಯಕ್ಷ ಜಯರಾಂ ಅಂಬೆಕಲ್ಲು ಸರಕಾರವನ್ನು ಆಗ್ರಹಿಸಿದ್ದಾರೆ.