ಕ್ವಾರಂಟೈನ್ ಸ್ಥಳದಿಂದ ಹೊರ ಬಂದರೆ ಕ್ರಿಮಿನಲ್ ಮೊಕದ್ದಮೆ: ಡಿಸಿ ಎಚ್ಚರಿಕೆ

ಉಡುಪಿ: ಕ್ವಾರಂಟೈನ್‌ನಲ್ಲಿದ್ದವರು ಹೊರಗಿನ ಜನರ ಸಂಪರ್ಕಕ್ಕೆ ಬರುವ ದೂರು ಬಂದಿದ್ದು, ಇಂತಹವರ ಕ್ರಿಮಿನಲ್ ಪ್ರಕರಣ ದಾಖಲಿಸುವುದಾಗಿ ಜಿಲ್ಲಾಧಿಕಾರಿ ಎಚ್ಚರಿಸಿದ್ದಾರೆ.


ಉಡುಪಿ ಜಿಲ್ಲೆಗೆ ವಿದೇಶ ಮತ್ತು ಹೊರ ರಾಜ್ಯದಿಂದ ಸುಮಾರು ಆರು ಸಾವಿರಕ್ಕೂ ಹೆಚ್ಚು ಮಂದಿ ಆಗಮಿಸಿದ್ದು, ಅವರೆಲ್ಲ ಹೊಟೇಲ್, ಹಾಸ್ಟೆಲ್, ಶಾಲೆಗಳಲ್ಲಿ ಕ್ವಾರಂಟೈನ್ ಮಾಡಲಾಗಿದೆ. ಈಗ ಹೆಚ್ಚಿನವರು ಕ್ವಾರಂಟೈನ್ ಸ್ಥಳದಿಂದ ಹೊರಗೆ ಬರುವ ದೂರು ಬರುತ್ತಿದ್ದು ಅಂತವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮಕೈಗೊಳ್ಳುವುದಾಗಿ ಜಿಲ್ಲಾಧಿಕಾರಿ ಜಿ. ಜಗದೀಶ ಎಚ್ಚರಿಸಿದ್ದಾರೆ.

ನಿಮ್ಮನ್ನು ಕರೆಸಿಕೊಂಡಿದ್ದೇವೆ ಅದನ್ನು ಸದುಪಯೋಗಪಡಿಸಿಕೊಳ್ಳಿ, ಇಲ್ಲಿನ ಜನರ , ಮನೆಯವರ ಸಂಪರ್ಕಕ್ಕೆ ಬರಬೇಡಿ ಇದರಿಂದ ಇಲ್ಲಿನ ಜನರಿಗೆ ರೋಗ ಹರಡಿಸಬೇಡಿ ಎಂಬ ಎಚ್ಚರಿಕೆ ಜಿಲ್ಲಾಧಿಕಾರಿ ನೀಡಿದ್ದಾರೆ.

1 thought on “ಕ್ವಾರಂಟೈನ್ ಸ್ಥಳದಿಂದ ಹೊರ ಬಂದರೆ ಕ್ರಿಮಿನಲ್ ಮೊಕದ್ದಮೆ: ಡಿಸಿ ಎಚ್ಚರಿಕೆ

  1. Strict action should be taken against the people who are coming out from the Corantine.

Leave a Reply

Your email address will not be published. Required fields are marked *

error: Content is protected !!