ಉಡುಪಿ: ಸಂಭ್ರಮದ ಕ್ರಿಸ್ ಮಸ್ ಆಚರಣೆ

ಉಡುಪಿ: ಕ್ರೈಸ್ತ ಬಾಂಧವರ ಪ್ರಮುಖ ಹಬ್ಬವಾದ ಕ್ರಿಸ್ ಮಸ್ ನ ಸಂಭ್ರಮ ಉಡುಪಿ ಜಿಲ್ಲೆಯಾದ್ಯಂತ ಮನೆ ಮಾಡಿದೆ. ಕ್ರಿಸ್ ಮಸ್ ದಿನದಂದು ಸಾಮಾನ್ಯವಾಗಿ ಚರ್ಚ್ ಗಳಲ್ಲಿ ವಿಶೇಷ ಪ್ರಾರ್ಥನೆ ನಡೆಸುವ ಮೂಲಕ ಏಸುವನ್ನು ಆರಾಧಿಸಲಾಗುತ್ತದೆ.   

ಕ್ರಿಸ್ಮಸ್ ಎಂದರೆ ಕ್ರಿಸ್ತ ಜಯಂತಿ ಅಥವಾ ಯೇಸುಕ್ರಿಸ್ತನು ಹುಟ್ಟಿದ ಸಂಭ್ರಮದ ದಿನ. ಜಗತ್ತಿನಾದ್ಯಂತ ಪ್ರತಿ ವರ್ಷದ ಡಿಸೆಂಬರ್ ತಿಂಗಳ ಇಪ್ಪತ್ತೈದನೇ ದಿನವನ್ನು ಯೇಸು ಕ್ರಿಸ್ತನ ಹುಟ್ಟುಹಬ್ಬವಾಗಿ ಸಂಭ್ರಮದಿಂದ ಆಚರಿಸಲಾಗುತ್ತದೆ. ಈ ದಿನದಂದು ಎಲ್ಲೆಡೆ ಮನೆಯಲ್ಲಿ ಪುಟ್ಟದಾದ ಕೊಟ್ಟಿಗೆ ಕಟ್ಟಿ ಅದರಲ್ಲಿ  ಕ್ರಿಸ್ತ ಜನನದ ಗೊಂಬೆಗಳು, ಕ್ರಿಸ್ಮಸ್ ವೃಕ್ಷ ಇಟ್ಟು ಅಲಂಕರಿಸುವುದು.ಮಿಸಲ್ಟೋ ಮೊದಲಾದ ಮರಗಳ ಎಲೆಗಳ ತೋರಣ ಕಟ್ಟುವುದುಕ್ರಿಸ್ಮಸ್ಸಿಗೆಂದೇ ತಯಾರಿಸಿದ ವಿಶಿಷ್ಟ ತಿಂಡಿಗಳನ್ನು ಹಾಗೂ ಉಡುಗೊರೆಗಳನ್ನು ಹಂಚುವ ಸಂಪ್ರದಾಯವೂ ಇದೆ. 

ಕ್ರಿಸ್ ಮದ್ ಕ್ರಿಸ್ತನ ಜನ್ಮವನ್ನು ಎದುರು ನೋಡುವ ಹಬ್ಬವಾಗಿದ್ದು, ಈ ಹಬ್ಬಕ್ಕೆ  ಸಂಬಂಧಪಟ್ಟ ಆಚರಣೆಗಳು ಡಿಸೆಂಬರ್ ತಿಂಗಳ ಆರಂಭದಲ್ಲಿ ಅಡ್ವೆಂಟ್ ನಿಂದ ಆರಂಭವಾಗುತ್ತವೆ.  ಅಡ್ವೆಂಟ್ ಶುರುವಾಗುತ್ತಿದ್ದಂತೆ ಚರ್ಚುಗಳು ಕ್ರಿಸ್ಮಸ್ಸಿಗೆ ತೆರೆದುಕೊಳ್ಳುತ್ತವೆ. ಕ್ರಿಸ್ಮಸ್ ಗೆ ಸ್ವಲ್ಪವೇ ಮೊದಲು ಚರ್ಚ್ ಮೊದಲಾದ ಸ್ಥಳಗಳಲ್ಲಿ ಕೆಲವು ಧಾರ್ಮಿಕ ಆಚರಣೆಗಳು ನಡೆಯುತ್ತವೆ. ಕ್ರಿಸ್ಮಸ್ ಈವ್ ಮತ್ತು ಕ್ರಿಸ್ಮಸ್ ದಿನಗಳಲ್ಲಿ ವಿಶೇಷ ಪೂಜೆ ಪುನಸ್ಕಾರಗಳು ಚರ್ಚ್ ಗಳಲ್ಲಿ ನಡೆಯುತ್ತವೆ. ಇನ್ನು ಕ್ರಿಸ್ಮಸ್ ಹಬ್ಬವನ್ನು ಕ್ರೈಸ್ತ ಬಾಂಧವರು ಉಡುಪಿ ಜಿಲ್ಲೆಯಾದ್ಯಂತ ಸಂಭ್ರಮದಿಂದ ಆಚರಣೆ ಮಾಡಲು ಸಿದ್ದತೆಗಳನ್ನು ಮಾಡಿಕೊಳ್ಳುತ್ತಿದ್ದಾರೆ.

ಕ್ರಿಸ್ ಮಸ್ ಹಿನ್ನೆಲೆ ವಿಶೇಷ ಪ್ರಾರ್ಥನೆ, ಪೂಜೆ ನಡೆಯಲಿದ್ದು ಪೂಜೆಯ ವೇಳೆ ಸಿಂಗರಿಸಿಟ್ಟ ಗೋದಲಿಯಲ್ಲಿ ಬಾಲ ಯೇಸುಮೂರ್ತಿಯನ್ನು ಇಟ್ಟು ದೇವರ ಸ್ತುತಿ, ಜೋಗುಳದ ಮೂಲಕ ಏಸುವನ್ನು  ಭಕ್ತಾದಿಗಳು ಆರಾಧಿಸುತ್ತಾರೆ. ಮೇಣದ ಬತ್ತಿಗಳನ್ನು ಬೆಳಗಿ ಹೂವು ಸುಗಂಧ ಗಳನ್ನು ಅರ್ಪಿಸುವುದರ ಮೂಲಕ ಯೇಸುವಿನ  ಜನನವನ್ನು ಕ್ರೈಸ್ತ ಭಾಂದವರು ಸ್ವಾಗತಿಸುತ್ತಾರೆ.ಇನ್ನು ಕ್ರಿಸ್ ಮಸ್ ಹಬ್ಬದಲ್ಲಿ ಮಕ್ಕಳ ಪ್ರೀತಿಗೆ ಪಾತ್ರನಾದ ಸಾಂತಾಕ್ಲಾಸ್ ನ ಪ್ರಾತ್ರವೂ ಪ್ರಮುಖವಾದವು ಹಬ್ಬದ ದಿನ ಸಾಂತಾ ಕ್ಲಾಸ್ ಬಂದು ಉಡುಗೊರೆ ನೀಡಲಿದ್ದಾರೆ ಎಂಬ ನoಬಿಕೆಯೂ ಇದೆ.

ಕ್ರಿಸ್ ಮಸ್ ನ ವಿಶೇಷತೆಯಾದ ಬಲಿಪೂಜೆಯ ಬಳಿಕ ಕ್ರೈಸ್ತ ಭಾಂದವರು ಪರಸ್ಪರ ಕ್ರಿಸ್ಮಸ್ ಹಬ್ಬದ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡು ಹಬ್ಬವನ್ನು ಸಡಗರದಿಂದ ಆಚರಿಸುತ್ತಾರೆ. ಆದರೆ, ಈ ಭಾರಿ ಕೋವಿಡ್ ನ ರೂಪಾಂತರದ ಭೀತಿ ಹಿನ್ನೆಲೆ ಸಂಭ್ರಮದ ಕ್ರಿಸ್ ಮಸ್ ಆಚರಣೆಗೆ ಕೊಂಚ ತಡೆಯಾಗಿದೆ. ಈ ಹಿನ್ನೆಲೆ ಮುಂಜಾಗೃತಾ ಕ್ರಮವಾಗಿ ಜಿಲ್ಲೆಯಾದ್ಯಂತ ಮನೆಗಳಲ್ಲಿ  ಸರಳವಾಗಿ ಹಬ್ಬ ಆಚರಣೆ ಮಾಡಲು ಕ್ರೈಸ್ತ ಬಾಂಧವರು ನಿರ್ಧರಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!