ಮಹಿಳೆಯೊಬ್ಬರ ದೂರು ಸ್ವೀಕರಿಸದ ಇನ್ಸ್ ಪೆಕ್ಟರ್ ಗೆ 1 ವಾರ ಬೀದಿ ಗುಡಿಸುವ ಶಿಕ್ಷೆ ನೀಡಿದ ಹೈಕೋರ್ಟ್!

ಬೆಂಗಳೂರು: ಮಹಿಳೆಯೊಬ್ಬರು ತನ್ನ ಪುತ್ರನ ಕಾಣೆಯಾದ ವಿಚಾರದ ಬಗ್ಗೆ ನೀಡಿದ ದೂರು ಸ್ವೀಕರಿಸಲು ಹಾಗೂ ಎಫ್ಐಆರ್ ದಾಖಲಿಸಿ ತನಿಖೆ ನಡೆಸಲು ವಿಫಲವಾದ ಕಲಬುರಗಿಯ ಸ್ಟೇಷನ್ ಬಜಾರ್ ಪೊಲೀಸ್ ಠಾಣೆಯ ಇನ್ಸ್’ಪೆಕ್ಟರ್’ಗೆ ಠಾಣೆಯ ಮುಂದಿನ ರಸ್ತೆಯನ್ನು ಒಂದು ವಾರ ಸ್ವಚ್ಛಗೊಳಿಸುವ ಶಿಕ್ಷೆ ವಿಧಿಸಿ ಅಪರೂಪದ ಆದೇಶ ಹೊರಡಿಸಿದೆ. 

ಮಿಣಜಗಿ ತಾಂಡದ ಕೂಲಿ ಮಹಿಳೆ ತಾರಾಬಾಯಿ ಸಲ್ಲಿಸಿದ್ದ ಹೇಬಿಯಸ್ ಕಾರ್ಪಸ್ ಅರ್ಜಿ ವಿಚಾರಣೆ ನಡೆಸಿದ ನ್ಯಾ.ಎಸ್.ಸುನೀಲ್ ದತ್ ಯಾದವ್ ಮತ್ತು ನ್ಯಾ.ಪಿ.ಕೃಷ್ಣಭಟ್ ಅವರಿದ್ದ ಕಲಬುರಗಿ ನ್ಯಾಯಪೀಠ ಈ ಆದೇಶ ನೀಡಿದೆ. 

ತಮ್ಮ ಮಗ ಸುರೇಶ 2020ರ ಅ.20ರಿಂದ ನಾಪತ್ತೆಯಾಗಿದ್ದಾನೆಂದು ತಿಳಿಸಿ ತಾಯಿ ತಾರಾಬಾಯಿ ದೂರು ನೀಡಲು ಹೋಗಿದ್ದರು. ಆದರೆ, ಆ ದೂರನ್ನು ಪೊಲೀಸರು ಸ್ವೀಕರಿಸಲಿಲ್ಲ. ಮಗನನ್ನೂ ಮತ್ತೆ ಮಾಡಿಕೊಡಲಿಲ್ಲ. ಇದರಿಂದ ಆಕೆ ಹೈಕೋರ್ಟ್’ನಲ್ಲಿ ಹೇಬಿಯಸ್ ಕಾರ್ಪಸ್ ಅರ್ಜಿ, ಮಗನನ್ನು ಪತ್ತೆ ಮಾಡಿ ನ್ಯಾಯಾಲಯದ ಮುಂದೆ ಹಾಜರುಪಡಿಸಲು ಪೊಲೀಸರಿಗೆ ನಿರ್ದೇಶಿಸುವಂತೆ ಕೋರಿದ್ದರು. ನ್ಯಾಯಾಲಯದ ಆದೇಶದ ಮೇರೆಗೆ ಪೊಲೀಸರು ಸುರೇಶನನ್ನು ಪತ್ತೆ ಹಚ್ಚಿ ನ.3ರಂದು ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದರು. 

ಕಾಣೆಯಾದ ಮಗನಿಗಾಗಿ ಕೋರ್ಟ್ ಮೆಟ್ಟಿಲೇರಬೇಕಾದ ಸ್ಥಿತಿ ಸೃಷ್ಟಿಸಿದ ಪೊಲೀಸರ ಕ್ರಮಕ್ಕೆ ಹೈಕೋರ್ಟ್ ತೀವ್ರ ಬೇಸರ ವ್ಯಕ್ತಪಡಿಸಿತು. ತಾರಾಬಾಯಿ ದೂರು ನೀಡಲು ಠಾಣೆಗೆ ಬಂದಿದ್ದರು ಎಂಬುದನ್ನು ಪೊಲೀಸರೇ ಒಪ್ಪಿಕೊಳ್ಲುತ್ತಾರೆ. ಇದು ಕರ್ತವ್ಯ ಲೋಪವಾಗುತ್ತದೆ ಎಂದು ಹೈಕೋರ್ಟ್ ತೀಕ್ಷ್ಣವಾಗಿ ನುಡಿಯಿತು.

Leave a Reply

Your email address will not be published. Required fields are marked *

error: Content is protected !!