ಪಡುಬಿದ್ರೆ: ಬಾರ್ ಮ್ಯಾನೇಜರ್ ಲಾಡ್ಜಿನಲ್ಲಿ ನೇಣು ಬಿಗಿದು ಆತ್ಮಹತ್ಯೆ
ಪಡುಬಿದ್ರೆ: (ಉಡುಪಿ ಟೈಮ್ಸ್ ವರದಿ) ಅಡ್ವೆ ಲಾಡ್ಜಿನಲ್ಲಿ ಪಡುಬಿದ್ರಿಯ ಬಾರಿನ ಮ್ಯಾನೇಜರ್ವೊರ್ವರು ಆತ್ಮಹತ್ಯೆ ಮಾಡಿಕೊಂಡ ಘಟನೆ ಇಂದು ಬೆಳಕಿಗೆ ಬಂದಿದೆ.
ಪಡುಬಿದ್ರೆ ಪೇಟೆಯಲ್ಲಿರು ಡೌನ್ ಟೌನ್ ಬಾರಿನ ಮ್ಯಾನೇಜರ್ ಸುರೇಶ್ ಶೆಟ್ಟಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡವರು ಎಂದು ತಿಳಿದುಬಂದಿದೆ.
ಇವರು ಮೂಲತಹ ನಿಟ್ಟೆಯವರಾಗಿದ್ದು, ಸಾವಿಗೆ ಸ್ಪಷ್ಟ ಕಾರಣ ತಿಳಿದುಬಂದಿಲ್ಲ.
ಪಡುಬಿದ್ರಿ ಪೊಲೀಸರು ತನಿಖೆ ಮುಂದುವರಿಸಿದ್ದಾರೆ