ಬ್ರಹ್ಮಾವರ: ಹಣಕಾಸಿನ ಮುಗ್ಗಟ್ಟು ಯುವಕ ಆತ್ಮಹತ್ಯೆ
ಮಣಿಪಾಲ: ಬ್ರಹ್ಮಾವರ ವ್ಯವಸಾಯ ಸೊಸೈಟಿ ಉದ್ಯೋಗಿಯೊರ್ವ ಇಂದು ಮುಂಜಾನೆ ಜಿಮ್ಗೆಂದು ಹೊದಾತ ಪೆರಂಪಳ್ಳಿಯ ಹಾಡಿಯಲ್ಲಿ ನೇಣು ಬೀಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.
ಆತ್ಮಹತ್ಯೆ ಮಾಡಿಕೊಂಡ ಯುವಕನನ್ನು ಉಪ್ಪಿನಕೋಟೆಯ ಪೃಥ್ವಿ ಶೆಟ್ಟಿ (27) ಎಂದು ಗುರುತಿಸಲಾಗಿದೆ. ಇತ ಇಂದು ಮುಂಜಾನೆ ತನ್ನ ಮಾವನಿಗೆ ವಾಟ್ಸ್ಆಪ್ ಸಂದೇಶದಲ್ಲಿ ತಾನು ವಿಪರೀತ ಸಾಲ ಮಾಡಿದ್ದು, ನನಗೆ ಬದುಕಲು ಸಾಧ್ಯವಾಗುತ್ತಿಲ್ಲ, ನನ್ನ ತಾಯಿಯನ್ನು ಚೆನ್ನಾಗಿ ನೋಡಿಕೊಳ್ಳಿ ಎಂಬ ಸಂದೇಶ ಕಳುಹಿಸಿದ್ದ. ಇದನ್ನು ನೋಡಿದ ಮಾವ ತಕ್ಷಣ ಬ್ರಹ್ಮಾವರ ಪೊಲೀಸರಿಗೆ ಮಾಹಿತಿ ನೀಡಿದ್ದರು.
ಮೊಬೈಲ್ ಟವರ್ ಸಿಗ್ನಲ್ ಆಧಾರದಲ್ಲಿ ಬ್ರಹ್ಮಾವರ ಪೊಲೀಸರು ಯುವಕನು ಮಣಿಪಾಲ ನಯ್ಯಂಪಳ್ಳಿಯಲ್ಲಿ ಇರುವುದು ಪತ್ತೆ ಹಚ್ಚಿದ್ದರು. ಆಗ ಅಲ್ಲಿ ಪೃಥ್ವಿಯ ಬೈಕ್ ಮತ್ತು ಸ್ವಿಚ್ ಆಫ್ ಆದ ಮೊಬೈಲ್ ಪತ್ತೆಯಾಗಿತ್ತು. ಆದರೆ ಯುವಕ ಪೆರಂಪಳ್ಳಿಯ ಕಕ್ಕುಂಜೆ ಹಾಡಿಯೊಂದರಲ್ಲಿ ಬಂದು ಆತ್ಮಹತ್ಯೆ ಮಾಡಿಕೊಂಡಿದ್ದ. ತಕ್ಷಣ ನೋಡಿದ ಸ್ಥಳೀಯರು ಯುವಕನನ್ನು ನೇಣಿನಿಂದ ರಕ್ಷಿಸಿ ಮಣಿಪಾಲ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು. ಆದರೆ ಅಷ್ಟೋತ್ತಿಗಾಗಲೇ ಪೃಥ್ವಿ ಶೆಟ್ಟಿಯ ಪ್ರಾಣಪಕ್ಷಿ ಹಾರಿಹೋಗಿತ್ತೆಂದು ವೈದ್ಯರು ತಿಳಿಸಿದ್ದಾರೆ.
ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.