ಬ್ರಿಟನ್ ನಿಂದ ಉಡುಪಿಗೆ ಬಂದಿದ್ದ 8 ಮಂದಿಯ ಪರೀಕ್ಷಾ ವರದಿಯಲ್ಲಿ ನೆಗೆಟಿವ್

ಉಡುಪಿ: ಜಿಲ್ಲೆಯಲ್ಲಿ ಕಾಡಿದ್ದ ಬ್ರಿಟನ್ ವೈರಸ್ ಹರಡುವ ಭೀತಿ  ದೂರವಾಗಿದೆ. ಈಗಾಲೆ   ಬ್ರಿಟನ್ ನಿಂದ ಉಡುಪಿ ಜಿಲ್ಲೆಗೆ ಬಂದಿದ್ದ ಎಂಟು ಮಂದಿಯ ಪರೀಕ್ಷಾ ವರದಿಯಲ್ಲಿ ನೆಗೆಟಿವ್ ಬಂದಿದ್ದು, ವೈರಸ್ ಕುರಿತ  ಜಿಲ್ಲೆಯ ಜನತೆಯ ಆತಂಕ ದೂರವಾದಂತಾಗಿದೆ. 

ಈ ಬಗ್ಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಸುಧೀರ್ ಚಂದ್ರ ಸೂಡ ಅವರು ಮಾಹಿತಿ ನೀಡಿ, ಡಿಸೆಂಬರ್ 21ರಂದು  ಕಾರ್ಕಳ ತಾಲೂಕಿನ ನಾಲ್ವರು, ಉಡುಪಿ ತಾಲೂಕಿನ ಮೂವರು ಮತ್ತು ಕುಂದಾಪುರ ತಾಲೂಕಿನ ಒಬ್ಬರು ಸೇರಿ ಒಟ್ಟು 8 ಮಂದಿ ಇಂಗ್ಲೆಂಡ್ ನಿಂದ ಜಿಲ್ಲೆಗೆ ಬಂದಿದ್ದರು. ಇದರಿಂದ ಉಡುಪಿ ಜಿಲ್ಲೆಯಾದ್ಯಂತ ಬ್ರಿಟನ್ ವೈರಸ್ ಹರಡುವ ಭೀತಿ‌ ಸೃಷ್ಟಿಯಾಗಿತ್ತು.

ಸದ್ಯ ಜಿಲ್ಲೆಗೆ ಆಗಮಿಸಿದ ಎಲ್ಲಾ 8 ಮಂದಿಯ  ಗಂಟಲ ದ್ರವದ ಮಾದರಿಯ ಪರೀಕ್ಷಾ ವರದಿ ನೆಗೆಟಿವ್ ಬಂದಿರೋದು ಜಿಲ್ಲೆಯ ಜನತೆ ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ. ಆದರೆ ಮುಂಜಾಗ್ರತಾ ಕ್ರಮವಾಗಿಎಂಟು ಮಂದಿಯ ಹೋಮ್ ಕ್ವಾರಂಟೈನ್ ಅವಧಿ ಮುಂದುವರಿಯಲಿದ್ದು, 7 ದಿನಗಳ ಬಳಿಕ ಮತ್ತೆ ಗಂಟಲ ದ್ರವದ ಪರೀಕ್ಷೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!