ಬಂದ್ ವಾಪಸ್ ಖಾಸಗಿ ಶಾಲಾ ಒಕ್ಕೂಟ: ಇಂದಿನಿಂದ ಆನ್ ಲೈನ್ ಕ್ಲಾಸ್ ಶುರು
ಬೆಂಗಳೂರು: ಅನುದಾನ ರಹಿತ ಖಾಸಗಿ ಶಾಲಾ ಒಕ್ಕೂಟ ರುಪ್ಸಾ ತನ್ನ ಬಂದ್ ವಾಪಸ್ ಪಡೆದಿದ್ದು, ಇಂದಿನಿಂದ ಆನ್ಲೈನ್ ತರಗತಿಗಳು ಮತ್ತೆ ಆರಂಭವಾಗಲಿದೆ. ಅನುದಾನ ರಹಿತ ಖಾಸಗಿ ಶಾಲಾ ಒಕ್ಕೂಟವು ಶಿಕ್ಷಣ ಸಚಿವರ ಜೊತೆ ಸಭೆ ನಡೆಸಿದ ಬೆನ್ನಲ್ಲೇ ಬಂದ್ ವಾಪಸ್ ಪಡೆದು ಆನ್ಲೈನ್ ತರಗತಿಗಳನ್ನು ಆರಂಭಿಸಲು ನಿರ್ಧರಿಸಿದೆ.
ಬೇಡಿಕೆ ಈಡೇರಿಸುವ ಸಂಬಂಧ ಬುಧವಾರ ನಡೆದ ಸಭೆಯಲ್ಲಿ ಸರಕಾರ ಭರವಸೆ ನೀಡಿರುವ ಹಿನ್ನಲೆಯಲ್ಲಿ ಆನ್ ಲೈನ್ ತರಗತಿಗಳನ್ನು ಪುನರ್ ಆರಂಭಿಸಲಿದ್ದೇವೆ ಎಂದು ರುಪ್ಸಾ ಹೇಳಿದೆ. ಖಾಸಗಿ ಶಿಕ್ಷಣ ಸಂಸ್ಥೆಗಳು ಮತ್ತು ಅಲ್ಲಿನ ಶಿಕ್ಷಕರ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ಆನ್ ಲೈನ್ ತರಗತಿ ಬಂದ್ ಮಾಡಲಾಗಿತ್ತು. ಇದೀಗ ಸರಕಾರ ಬೇಡಿಕೆ ಈಡೇರಿಕೆಯ ಭರವಸೆ ನೀಡಿದ ಹಿನ್ನೆಲೆ ಮತ್ತೆ ಆನ್ಲೈನ್ ಕ್ಲಾಸ್ಗಳನ್ನು ಆರಂಭಿಸುವುದಾಗಿ ಅನುದಾನ ರಹಿತ ಖಾಸಗಿ ಶಾಲೆಗಳ ಸಂಘ ತಿಳಿಸಿದೆ.