ಉಡುಪಿ ಡಾ.ಎ.ವಿ.ಬಾಳಿಗಾ ಸ್ಮಾರಕ ಆಸ್ಪತ್ರೆ: ಜ.1 ರಿಂದ 10 ರ ವರೆಗೆ ಮದ್ಯವ್ಯಸನ ವಿಮುಕ್ತಿ ಶಿಬಿರ
ಉಡುಪಿ: ಕಮಲ್ ಎವಿ ಬಾಳಿಗ ಚಾರಿಟೇಬಲ್ ಟ್ರಸ್ಟ್ ಮುಂಬಯಿ, ಡಾ. ಎ.ವಿ.ಬಾಳಿಗಾ ಸ್ಮಾರಕ ಆಸ್ಪತ್ರೆ ದೊಡ್ಡಣಗುಡ್ಡೆ ಉಡುಪಿ, ಭಾರತೀಯ ವೈದ್ಯಕೀಯ ಸಂಘ ಉಡುಪಿ- ಕರಾವಳಿ ಮತ್ತು ಹಾಜಿ ಅಬ್ದುಲ್ಲ ಚರಿಟೇಬಲ್ ಟ್ರಸ್ಟ್ ಉಡುಪಿ ಇವರ ಆಶ್ರಯದಲ್ಲಿ ಜನವರಿ 1 ರಿಂದ 10 ರ ವರೆಗೆ ಮಧ್ಯ ವ್ಯಸನದಿಂದಾಗುವ ದುಷ್ಪರಿಣಾಗಳ ಕುರಿತು ಅರಿವು ಮೂಡಿಸುವ ಸಲುವಾಗಿ ಮದ್ಯವ್ಯಸನ ವಿಮುಕ್ತಿ ಶಿಬಿರವನ್ನು ಉಡುಪಿಯ ಡಾ. ಎ.ವಿ.ಬಾಳಿಗಾ ಸ್ಮಾರಕ ಆಸ್ಪತ್ರೆಯಲ್ಲಿ ಆಯೋಜಿಸಲಾಗಿದೆ. ಈ ಶಿಬಿರವನ್ನು ಡಾ.ಟಿ.ಎಂ.ಎ.ಪೈ ಆಸ್ಪತ್ರೆಯ ಮೆಡಿಸಿನ್ ವಿಭಾಗದ ಮುಖ್ಯಸ್ಥ , ವೈದ್ಯಕೀಯ ಅಧೀಕ್ಷಕ ಡಾ.ಶಶಿಕಿರಣ ಉಮಾಕಾಂತ್ ಅವರು ಉದ್ಘಾಟಿಸಲಿದ್ದಾರೆ. ಶಿಬಿರದಲ್ಲಿ ಮಂಗಳೂರಿನ ಕೆ.ಎಸ್. ಹೆಗ್ಗೆ ವೈದ್ಯಕೀಯ ಮಹಾ ವಿದ್ಯಾಲಯದ ವಿಭಾಗ ಮುಖ್ಯಸ್ಥರು ಮತ್ತು, ಮನೋವೈದ್ಯ ಡಾ. ಶ್ರೀನಿವಾಸ್ ಭಟ್, ಭಾರತೀಯ ವೈದ್ಯಕೀಯ ಸಂಘ ಉಡುಪಿ-ಕರಾವಳಿ ಇದರ ಅಧ್ಯಕ್ಷ ಡಾ. ಉಮೇಶ್ ಪ್ರಭು ಮುಖ್ಯ ಅಥಿತಿಗಳಾಗಿ ಭಾಗವಹಿಸಲಿದ್ದಾರೆ. ಡಾ. ಎ.ವಿ.ಬಾಳಿಗಾ ಸಮೂಹ ಸಂಸ್ಥೆಗಳ ನಿರ್ದೇಶಕರಾದ ಡಾ.ಪಿ.ವಿ.ಭಂಡಾರಿಯವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ. ಸಭಾ ಕಾರ್ಯಕ್ರಮದಲ್ಲಿ ಮದ್ಯವ್ಯಸನ ದಿಂದ ಮುಕ್ತರಾದ 5 ಜನರಿಗೆ ಮತ್ತು ಈ ಬಾರಿ ಕೊರೋನ್ ಸಂದರ್ಭದಲ್ಲಿ ಸೇವೆ ಸಲ್ಲಿಸಿದ ಕೋವಿಡ್ ವಾರಿಯರ್ ಗಳಿಗೆ ಸನ್ಮಾನಿಸಲಾಗುವುದು. ಈ ಶಿಬಿರಕ್ಕೆ ದಾಖಲಾಗುವ ಶಿಬಿರಾರ್ಥಿಗಳಿದ 500/-ರೂ ಶುಲ್ಕವನ್ನು ಪಡೆಯುತ್ತಿದ್ದು ಶಿಬಿರಾರ್ಥಿಗಳಿಗೆ ತಗಲುವ ಊಟ, ವಸತಿ, ಚಿಕಿತ್ಸೆಯ ವೆಚ್ಚವನ್ನು ಕಮಲ್ ಎ. ಬಾಳಿಗಾ ಚ್ಯಾರಿಟೇಬಲ್ ಟ್ರಸ್ಟ್ ಭರಿಸುತ್ತಿದೆ. ಶಿಬಿರಾರ್ಥಿಗಳಲ್ಲಿ ಕಂಡುಬರುವ ದೈಹಿಕ ಸಮಸ್ಯೆಗಳನ್ನು ಗುರುತಿಸಿ ಅದಕ್ಕೆ ಅನುಗುಣವಾದ ಚಿಕಿತ್ಸೆಯನ್ನು ನೀಡಲಾಗುತ್ತದೆ. ಪ್ರತಿದಿನ ಶಿಬಿರಾರ್ಥಿಗಳಿಗೆ ಮದ್ಯ ಹಾಗೂ ಮಾದಕ ದ್ರವ್ಯಗಳಿಂದಾಗುವ ದುಷ್ಪರಿಣಾಮಗಳು ಮತ್ತು ಜೀವನ ಶೈಲಿ ಬದಲಾವಣೆ ಕುರಿತು ನುರಿತ ತಜ್ಞರಿಂದ ಮಾಹಿತಿ ಕಾರ್ಯಕ್ರಮ ನಡೆಯಲಿದೆ. ಈ ಶಿಬಿರದಲ್ಲಿ ಪಾಲ್ಗೊಳ್ಳಲು ಬಯಸುವ ಆಸಕ್ತರು ಡಿ. 26 ರ ಒಳಗೆ ಹೆಸರನ್ನು ನೋಂದಾಯಿಸತಕ್ಕದ್ದು ಹಾಗೂ ಡಿ.31 ರಂದು ಆಸ್ಪತ್ರೆಗೆ ಬಂದು ದಾಖಲಾಗಬೇಕು ಹಾಗೂ ಶಿಬಿರದಲ್ಲಿ ಎಲ್ಲ ರೀತಿಯ ಕೊರೋನ ಮುನ್ನೆಚರಿಕೆಯನ್ನು ತೆಗೆದುಕೊಳ್ಳ ಬೇಕೆಂದು ತಿಳಿಸಲಾಗಿದೆ. ಇನ್ನು ಶಿಬಿರದ ಸಮಾರೋಪ ಸಮಾರಂಭವು ಜನವರಿ 10 ರಂದು ಬೆಳಿಗ್ಗೆ 10 ಗಂಟೆಗೆ ಡಾ. ಎ.ವಿ.ಬಾಳಿಗಾ ಸ್ಮಾರಕ ಆಸ್ಪತ್ರೆಯಲ್ಲಿ ನಡೆಯಲಿದೆ. ಈ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ದಯಾನಂದ ಪಿ. ಕತ್ತಲ್ ಸಾರ್, ಎಸ್. ಡಿ. ಎಂ. ಆಯುರ್ವೇದ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರಾದ ಡಾ. ಮಮತಾ, ಹಿರಿಯ ವಕೀಲ ಉಡುಪಿ ದೇವರಾಜ್ ಶೆಟ್ಟಿಗಾರ್, ಭಾರತೀಯ ವೈದ್ಯಕೀಯ ಸಂಘ ,ಉಡುಪಿ-ಕರಾವಳಿ ಇದರ ಕಾರ್ಯದರ್ಶಿ ಉಡುಪಿ ಡಾ. ಪ್ರಕಾಶ್ ಭಟ್ ಭಾಗವಹಿಸಲಿದ್ದಾರೆ. ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಡಾ. ಎ.ವಿ.ಬಾಳಿಗಾ ಸಮೂಹ ಸಂಸ್ಥೆಗಳ ನಿರ್ದೇಶಕರಾದ ಡಾ.ಪಿ.ವಿ.ಭಂಡಾರಿಯವರು ವಹಿಸಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. |