ಹೊಸ ಪ್ರಭೇದದ ಕೊರೋನಾ: ಬ್ರಿಟನ್ ವಿಮಾನಗಳಿಗೆ ಡಿ.31 ರವರೆಗೆ ನಿಷೇಧ ಹೇರಿದ ಕೇಂದ್ರ

ನವದೆಹಲಿ: ಬ್ರಿಟನ್ ನಲ್ಲಿ ರೂಪಾಂತರಗೊಂಡ ಮಹಾಮಾರಿ ಕೊರೋನಾ ವೈರಸ್ ನ ಹೊಸ ಪ್ರಭೇದ ಪತ್ತೆಯಾಗಿದ್ದು, ಹಲವು ದೇಶಗಳು ಬ್ರಿಟನ್ ನಿಂದ ಬರುವ ಮತ್ತು ಹೋಗುವ ವಿಮಾನಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಈಗ ಭಾರತ ಸಹ ಬ್ರಿಟನ್‌ನ ಎಲ್ಲಾ ವಿಮಾನಗಳನ್ನು ನಿಷೇಧಿಸಿದೆ.

ಬ್ರಿಟನ್ ನಲ್ಲಿ ಚಾಲ್ತಿಯಲ್ಲಿರುವ ಕೊರೋನಾ ಪರಿಸ್ಥಿತಿಯನ್ನು ಪರಿಗಣಿಸಿ ಯುಕೆ ಯಿಂದ ಭಾರತಕ್ಕೆ ಬರುವ ಎಲ್ಲಾ ವಿಮಾನಗಳನ್ನು 2020 ಡಿಸೆಂಬರ್ 31 ರವರೆಗೆ ಸ್ಥಗಿತಗೊಳಿಸಲು ಭಾರತ ಸರ್ಕಾರ ನಿರ್ಧರಿಸಿದೆ ಎಂದು ವಿಮಾನಯಾನ ಸಚಿವಾಲಯ ಸೋಮವಾರ ಟ್ವೀಟ್ ಮಾಡಿದೆ.

ಬ್ರಿಟನ್ ವಿಮಾನ ನಿಷೇಧ ಮಂಗಳವಾರ ರಾತ್ರಿ 11:59 ರಿಂದ ಜಾರಿಗೆ ಬರಲಿದೆ ಎಂದು ವಿಮಾನಯಾನ ಸಚಿವಾಲಯ ತಿಳಿಸಿದೆ.

ಮುನ್ನೆಚ್ಚರಿಕೆಯ ಕ್ರಮವಾಗಿ, ವಿಮಾನಗಳಲ್ಲಿ ಬ್ರಿಟನ್‌ನಿಂದ ಆಗಮಿಸುವ ಎಲ್ಲಾ ಪ್ರಯಾಣಿಕರು ಕಡ್ಡಾಯವಾಗಿ ಕೋವಿಡ್-19 ಪರೀಕ್ಷೆಗೆ ಒಳಪಡಿಸಲಾಗುವುದು.

ಬ್ರಿಟನ್ ಬೃಹತ್ ಭಾರತೀಯ ವಲಸೆಗಾರರ ನೆಲೆಯಾಗಿದ್ದು, ಲಂಡನ್ ಮತ್ತು ನವದೆಹಲಿ ಮತ್ತು ಲಂಡನ್ – ಮುಂಬೈ ನಡುವೆ ನಿತ್ಯ ನೂರಾರು ಜನರನ್ನು ಕರೆದೊಯ್ಯುವ ಹಲವಾರು ವಿಮಾನಗಳಿವೆ.

Leave a Reply

Your email address will not be published. Required fields are marked *

error: Content is protected !!