ಜೆಡಿಎಸ್-ಬಿಜೆಪಿ ವಿಲೀನದ ಬಗ್ಗೆ ಯಾರೂ ಮಾತನಾಡಬಾರದು: ಸಿಎಂ ಬಿಎಸ್‌ವೈ ತಾಕೀತು

ಬೆಂಗಳೂರು: ಜೆಡಿಎಸ್-ಬಿಜೆಪಿ ವಿಲೀನದ ಬಗ್ಗೆ ಯಾರೂ ಮಾತನಾಡಬಾರದು ಎಂದು ಸಿಎಂ ಬಿಎಸ್ ಯಡಿಯೂರಪ್ಪ ಅವರು ಹೇಳಿದ್ದಾರೆ. ಈ ಕುರಿತಂತೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜೆಡಿಎಸ್, ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಕಟ್ಟಿರುವ ಪಕ್ಷ. ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಆ ಪಕ್ಷದ ಮುಖಂಡರಾಗಿದ್ದು, ಆ ಪಕ್ಷವನ್ನು ಬೆಳೆಸಿ ಅಧಿಕಾರಕ್ಕೆ ತರಲು ಪ್ರಯತ್ನ ಮಾಡುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಆ ಪಕ್ಷ ವಿಲೀನ ಆಗುತ್ತದೆ ಎಂದು ಮಾತನಾಡುವುದು ದೇವೇಗೌಡರು ಮತ್ತು ಕುಮಾರಸ್ವಾಮಿಗೆ ಅಪಮಾನ ಮಾಡಿದಂತೆ ಎಂದರು.

ಈ ಕುರಿತು ಮಾತು ಮುಂದುವರೆಸಿದ ಅವರು, ಈ ರೀತಿ ನಾನೂ ಮಾತಾಡಲು ಸಿದ್ಧವಿಲ್ಲ. ಬೇರೆ ಯಾರೂ ಕೂಡಾ ಮಾತಾಡಬಾರದು. ವಿಧಾನ ಪರಿಷತ್‌ನಲ್ಲಿ ಸಭಾಪತಿ ಇಳಿಸುವ ವಿಚಾರದಲ್ಲಿ ಸಹಕಾರ ಕೇಳಿದ್ದೆವು, ಜೆಡಿಎಸ್ ನವರು ಸಹಕಾರ ಕೊಟ್ಟಿದ್ದಾರೆ, ಇನ್ನು ಮುಂದೆಯೂ ಅಗತ್ಯವಿದ್ದ ಸಮಯದಲ್ಲಿ ನಮಗೆ ಸಹಕಾರ ಕೊಡಬಹುದು. ಅವರು ಅವರ ಪಕ್ಷವನ್ನು ಕಟ್ಟುತ್ತಿರುವ ಸಂದರ್ಭದಲ್ಲಿ ವಿಲೀನ ಆಗುತ್ತದೆ ಎಂದು ಹೇಳುವುದು ಶೋಭೆ ತರುವುದಿಲ್ಲ. ಆ ಪ್ರಶ್ನೆ ಈಗ ಉದ್ಭವಿಸುವುದೇ ಇಲ್ಲ. ಇನ್ನೂ ಚುನಾವಣೆಗೆ ಎರಡೂವರೆ ವರ್ಷ ಇದೆ, ನಮ್ಮ ಪಾಡಿಗೆ ನಾವು ಪಕ್ಷ ಕಟ್ಟುತ್ತೇವೆ, ಅವರ ಪಾಡಿಗೆ ಅವರು ಪಕ್ಷ ಕಟ್ಟುತ್ತಾರೆ, ನಮ್ಮ ಪಕ್ಷದಲ್ಲಿಯೂ ಯಾರೂ ಆ ರೀತಿ ಮಾತಾಡಬಾರದು ಎಂದು ತಾಕೀತು ಮಾಡಿದರು.

Leave a Reply

Your email address will not be published. Required fields are marked *

error: Content is protected !!