ಶ್ರೀಕೃಷ್ಣಮಠ: ‘ಪ್ರಮಾ ಪ್ರಶಸ್ತಿ 2020 ‘ ಪ್ರದಾನ
ಉಡುಪಿ: ಶ್ರೀಕೃಷ್ಣಮಠದ ರಾಜಾಂಗಣದ ನರಹರಿತೀರ್ಥ ವೇದಿಕೆಯಲ್ಲಿ,ಪರ್ಯಾಯ ಶ್ರೀ ಅದಮಾರು ಮಠ, ಶ್ರೀಕೃಷ್ಣ ಮಠದ ಆಶ್ರಯದಲ್ಲಿ, ಡಾ.ಪಳ್ಳತಡ್ಕ ಕೇಶವ ಭಟ್ ಮೆಮೋರಿಯಲ್ ಟ್ರಸ್ಟ್ , ಮಣಿಪಾಲ ಪ್ರಸ್ತುತ ಪಡಿಸುವ ‘ಪ್ರಮಾ ಪ್ರಶಸ್ತಿ 2020 ‘ ಕಾರ್ಯಕ್ರಮ ಭಾನುವಾರ ನಡೆಯಿತು.
ಪರ್ಯಾಯ ಅದಮಾರು ಪೀಠಾಧೀಶರಾದ ಶ್ರೀ ಈಶಪ್ರಿಯತೀರ್ಥ ಶ್ರೀಪಾದರು ವೀಣೆಯನ್ನು ವಿವಿಧ ದೇವತಾಸ್ವರೂಪಗಳಾಗಿ ತಿಳಿದುಕೊಂಡು ಇದೂ ಒಂದು ದೇವರ ಪೂಜೆಯೆಂದು ಆರಾಧಿಸುತ್ತಿರುವ ‘ಕಲಾಸ್ಪಂದನ’ದ ಸದಸ್ಯರು ತಮ್ಮ ಸಂಸ್ಥೆಯ ರಜತವರ್ಷಾಚರಣೆಯ ಸಂದರ್ಭದಲ್ಲಿ ಮಾಡುತ್ತಿರುವುದು ದೇವರಿಗೆ ಪ್ರೀತಿಯಾಗಲಿ ಎಂದು ಹರಸಿದರು.
ಈ ಸಂದರ್ಭದಲ್ಲಿ ಪ್ರತಿಭಾನ್ವಿತರಿಗೆ ಪ್ರಶಸ್ತಿ ಪ್ರಧಾನ ಮಾಡಲಾಯಿತು.ಪುರಸ್ಕೃತರು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದರು. ನಂತರ ಸಂಸ್ಥೆಯ ವಿದ್ಯಾರ್ಥಿಗಳಿಂದ 28 ವೀಣಾವಾದನ ಕಾರ್ಯಕ್ರಮ ನಡೆಯಿತು. ಸಂಸ್ಥೆಯ ನಿರ್ದೇಶಕರಾದ ಪಾವನಾ ಬಾಲಚಂದ್ರ ಆಚಾರ್ಯ ದಂಪತಿಗಳು ಪಾಲ್ಗೊಂಡಿದ್ದರು.