ಬ್ರಹ್ಮಾವರ: ಮೂರು ಮಕ್ಕಳೊಂದಿಗೆ ಗ್ರಹಿಣಿ ನಾಪತ್ತೆ!
ಬ್ರಹ್ಮಾವರ: ಇಲ್ಲಿನ ಹಾರಾಡಿ ಗ್ರಾಮ ಹೊನ್ನಾಳ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ಮಹಿಳೆಯೊರ್ವರು ತನ್ನ ಮೂರು ಮಕ್ಕಳೊಂದಿಗೆ ನಾಪತ್ತೆಯಾಗಿರುವ ಬಗ್ಗೆ ಬ್ರಹ್ಮಾವರ ಠಾಣೆಯಲ್ಲಿ ದೂರು ದಾಖಲಾಗಿದೆ.
ರಾಸಿಯಾ (32) ಎಂಬಾಕೆ ತನ್ನ ಮೂರು ಮಕ್ಕಳಾದ ಪಾತಿಮಾ ನಶ್ರಾ (11), ಅಬ್ದುಲ್ ಮುತ್ತಾಹೀರ್ (7) ಹಾಗೂ ಚಿಕ್ಕ ಮಗಳಾದ ಆಯಿಷಾ ಝಿಫ್ರಾ (3) ಡಿ. 18 ರಂದು ತನ್ನ ತವರು ಮನೆಯಾದ ಕುಂದಾಪುರದ ಕಂಡ್ಲೂರಿಗೆ ಹೋಗುವುದಾಗಿ ಪತಿ ಮಹಮ್ಮದ್ ಖಲೀಲ್ ಅವರಲ್ಲಿ ಹೇಳಿದ್ದರು.
ಮಧ್ಯಾಹ್ನ ಪತಿ ಮಹಮ್ಮದ್ ಖಲೀಲ್ ಹೆಂಡತಿಯ ಮೊಬೈಲ್‌ಗೆ ಕರೆ ಮಾಡಿದಾಗ ಮೊಬೈಲ್ ಸ್ವಿಚ್ ಆಫ್ ಆಗಿತ್ತು, ನಂತರ ಹೆಂಡತಿಯ ತಂದೆಗೆ ಕರೆ ಮಾಡಿ ಕೇಳಿದಾಗ ಅವರು ಮನೆಗೆ ಬಂದಿಲ್ಲವಾಗಿ ತಿಳಿಸಿರುತ್ತಾರೆ. ಬಳಿಕ ಸಂಬಂಧಿಕರ ಮನೆಯನ್ನೆಲ್ಲ ಹುಡುಕಾಡಿದ್ದಲ್ಲಿ ಪತ್ತೆ ಆಗಿರುವುದಿಲ್ಲ. ಈ ಬಗ್ಗೆ ಪತಿ ಬ್ರಹ್ಮಾವರ ಠಾಣೆಯಲ್ಲಿ ಪತ್ನಿ ಮತ್ತು ಮೂರು ಮಕ್ಕಳು ನಾಪತ್ತೆಯಾಗಿರುವ ಬಗ್ಗೆ ದೂರು ದಾಖಲಿಸಿದ್ದಾರೆ.