ಕುಂದಾಪುರ: ಇಬ್ಬರು ಮಕ್ಕಳ ಸಹಿತ ದಂಪತಿಗಳು ನಾಪತ್ತೆ
ಅಮಾಸೆಬೈಲು: ಇಬ್ಬರು ಮಕ್ಕಳ ಸಹಿತ ದಂಪತಿಗಳು ಕಾಣೆಯಾಗಿರುವ ಘಟನೆ ಕುಂದಾಪುರದ ಅಮಾಸೆಬೈಲುವಿನ ಮಚ್ಚಟ್ಟು ಗ್ರಾಮದ ತೊಂಟು ಕಬ್ಬಿನಾಲೆಯಲ್ಲಿ ನಡೆದಿದೆ.
ಅಶೋಕ್ ಶೆಟ್ಟಿಗಾರ್(49), ಅವರ ಪತ್ನಿ ಶ್ರೀನಿಧಿ, ಮಗ ಅಶ್ವಿನ್(16) ಹಾಗೂ ಮಗಳು ಆಶಿಕಾ (14) ನಾಪತ್ತೆಯಾಗಿದ್ದಾರೆ. ಇವರು ಡಿ.15 ರಂದು ಮನೆಯಿಂದ ಕಾಣೆಯಾಗಿದ್ದು, ಈ ಬಗ್ಗೆ ಅಮಾಸೆಬೈಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.