ಸಾಣೂರು ಯುವಕ ಮಂಡಳ 2019-20 ನೇ ರಾಜ್ಯ ಮಟ್ಟದ ಅತ್ಯುತ್ತಮ ಯುವ ಮಂಡಳ ಪ್ರಶಸ್ತಿಗೆ ಆಯ್ಕೆ
ಉಡುಪಿ, ಡಿ. 18: ಭಾರತ ಸರಕಾರದ ಯುವಕಾರ್ಯ ಹಾಗೂ ಕ್ರೀಡಾ ಸಚಿವಾಲಯದ
ನೆಹರು ಯುವ ಕೇಂದ್ರ ಸಂಘಟನೆಯು ನೀಡುವ ಜಿಲ್ಲಾ ಅತ್ಯುತ್ತಮ ಯುವ ಮಂಡಳ ಪ್ರಶಸ್ತಿಗೆ ಕಾರ್ಕಳ ತಾಲೂಕು ಸಾಣೂರು ಯುವಕ ಮಂಡಳವು 2019-20ನೇ ಸಾಲಿಗೆ ಆಯ್ಕೆಯಾಗಿ, ರಾಜ್ಯ ಮಟ್ಟದಲ್ಲಿ ಉಡುಪಿ ಜಿಲ್ಲೆಯನ್ನು ಪ್ರತಿನಿಧಿಸಲು ಆಯ್ಕೆಯಾಗಿದ್ದು, ಡಿ. 17 ರಂದು ಯುವ ವ್ಯವಹಾರ ಹಾಗೂ ಯುವ ಸಬಲಿಕರಣ ಇಲಾಖೆಯ
ಆಯುಕ್ತ ಕೆ. ಶ್ರೀನಿವಾಸ್ರವರ ಅಧ್ಯಕ್ಷತೆಯಲ್ಲಿ ನಡೆದ ರಾಜ್ಯ ಮಟ್ಟದ ಅತ್ಯುತ್ತಮ ಯುವ ಮಂಡಳ ಪ್ರಶಸ್ತಿ ಆಯ್ಕೆ ಸಭೆಯ ಅಂತಿಮ ಹಂತದ ಆಯ್ಕೆಯಲ್ಲಿ ಸಾಣೂರು ಯುವಕ ಮಂಡಳವು 2019-2020 ನೇ ಸಾಲಿಗೆರಾಜ್ಯಮಟ್ಟದ ಅತ್ಯುತ್ತಮ ಯುವ ಮಂಡಳ ಪ್ರಶಸ್ತಿಗೆ ಆಯ್ಕೆಗೊಂಡಿದೆ.
ಈ ಪ್ರಶಸ್ತಿಯು ರೂ. 75 ಸಾವಿರ ನಗದು ಹಾಗೂ ಪ್ರಶಂಸ ಪತ್ರವನ್ನು ಒಳಗೊಂಡಿದ್ದು, ಜನವರಿ 23 ರಂದು ನಡೆಯುವ ಕಾರ್ಯಕ್ರಮದಲ್ಲಿ ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ್ ಅವರು ಪ್ರಶಸ್ತಿಯನ್ನು ವಿತರಿಸಲಿರುವರು ಎಂದು ನೆಹರು ಯುವ ಕೇಂದ್ರದ ಜಿಲ್ಲಾ ಯುವಜನ ಅಧಿಕಾರಿ ವಿಲ್ಫ್ರೆಡ್ ಡಿ ಸೋಜಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.