ಶಿರ್ವ: “ಅಲೆಕ್ಸ್ ಟೆಕ್ಸ್ ಟೈಲ್ಸ್”ಗೆ 60 ರ ಸಂಭ್ರಮ – 10% ರಿಂದ 50% ರವರೆಗೆ ವಿಶೇಷ ಡಿಸ್ಕೌಂಟ್!

ಶಿರ್ವ(ಉಡುಪಿ ಟೈಮ್ಸ್ ವರದಿ):ಜಿಲ್ಲೆಯ ಅತಿ ದೊಡ್ಡ ಗ್ರಾಮಗಳಲ್ಲಿ ಶಿರ್ವ ಕೂಡ ಒಂದು. ಸಾಮಾಜಿಕ, ರಾಜಕೀಯ, ಧಾರ್ಮಿಕ, ಶೈಕ್ಷಣಿಕ ಎಲ್ಲದರಲ್ಲೂ ಈ ಗ್ರಾಮ ಸದಾ ಮುಂದು. ಅಭಿವೃದ್ಧಿಯ ಪಥದತ್ತ ಸಾಗುತ್ತಿರುವ ಶಿರ್ವದಲ್ಲಿ ಹಲವಾರು ಉದ್ಯಮಗಳಿಂದ, ನೂರಾರು ಜನ ಉದ್ಯೋಗದಲ್ಲಿದ್ದಾರೆ. ಶಿರ್ವ ಗ್ರಾಮದ ಅಭಿವೃದ್ಧಿಗೆ ಉದ್ಯಮಿಗಳ ಪಾಲು ಅತಿ ದೊಡ್ಡದು, ಗ್ರಾಮದ ಅಭಿವೃದ್ಧಿಗೆ ಮತ್ತು ಹಲವಾರು ಯುವಕ ಯುವತಿಯರಿಗೆ ಉದ್ಯೋಗವನ್ನು ನೀಡಿದ ಪ್ರಖ್ಯಾತ ಬಟ್ಟೆ ಮಳಿಗೆ “ಅಲೆಕ್ಸ್ ಟೆಕ್ಸ್ ಟೈಲ್ಸ್” ಗೆ 60ರ ಸಂಭ್ರಮ. ಎಲ್ಲಾ ಸವಾಲುಗಳನ್ನು ಮೆಟ್ಟಿನಿಂತು, ಕ್ರಿಸ್‌ಮಸ್ ಹಾಗೂ ಹೊಸ ವರ್ಷದ ಈ ಪರ್ವಕಾಲದಲ್ಲಿ ಈ ಬಟ್ಟೆ ಮಳಿಗೆ ತನ್ನ ವಿಶೇಷ ಕೊಡುಗೆಯನ್ನು ಗ್ರಾಹಕರಿಗೆ ನೀಡುತ್ತಿದೆ.

ತನ್ನ ಹಲವು ಪ್ರಖ್ಯಾತ ಕಂಪೆನಿಗಳ ಮತ್ತು ವಿಶೇಷ ವಿನ್ಯಾಸದ ಬಟ್ಟೆಗಳನ್ನು ಗ್ರಾಹಕರಿಗೆ ಕೈಗೆಟಕುವ ದರದಲ್ಲಿ ನೀಡಿದಂತಹ ಅಲೆಕ್ಸ್ ಟೆಕ್ಸ್ ಟೈಲ್ಸ್ ಗೆ ವಿಶೇಷವಾದ ಇತಿಹಾಸವಿದೆ. 1960 ರಲ್ಲಿ ಆರಂಭವಾದ ಈ ಪುಟ್ಟ ಸಂಸ್ಥೆ ಈಗ ಹೆಮ್ಮರವಾಗಿ ಬೆಳೆದು ನಿಂತಿದೆ. ಇದರ ಬೆಳವಣಿಗೆಗೆ ಗ್ರಾಹಕರ ಪ್ರೋತ್ಸಾಹವೇ ಕಾರಣ. ಅಂದು ದಿವಂಗತ ಅಲೆಕ್ಸ್ ಡಿಸೋಜರವರು ಟೈಲರಿಂಗ್ ವೃತ್ತಿಯನ್ನು ಆರಂಭಿಸುವುದರೊಂದಿಗೆ ಈ ಸಂಸ್ಥೆಯ ಆರಂಭಕ್ಕೆ ಕಾರಣರಾಗಿದ್ದರು. ಶಿರ್ವ ಆಸುಪಾಸಿನ ಬಹಳಷ್ಟು ಗ್ರಾಹಕರು ಇವರಲ್ಲಿಗೆ ಬಂದು ಟೈಲರಿಂಗ್ ಮಾಡಿಸಿಕೊಂಡು ಸಂತುಷ್ಟಗೊಂಡಿದ್ದರು. ಬಳಿಕ ಇವರ ಪುತ್ರ ಆಲ್ವಿನ್ ಡಿಸೋಜರವರು ಈ ಸಂಸ್ಥೆಯನ್ನು ಮುನ್ನಡೆಸಿ ಗ್ರಾಹಕರ ವಿಶ್ವಾಸಕ್ಕೆ ಪಾತ್ರರಾಗಿಸಿ, ಇಂದು ಹೆಮ್ಮರವಾಗಿ ಬೆಳೆಸಿದ್ದಾರೆ.

ಶಿರ್ವ ಬಸ್ಸು ನಿಲ್ದಾಣದ ಬಳಿಯಲ್ಲಿಯೇ ಕಾರ್ಯಾಚರಿಸುತ್ತಿರುವ 11,000 ಚದರ ಅಡಿಯಷ್ಟು ಸುಸಜ್ಜಿತ ಮತ್ತು ವಿಶಾಲವಾದ ಸ್ಥಳವಿರುವ ಈ ಮಳಿಗೆ, ಸಂಪೂರ್ಣ ಹವಾನಿಯಂತ್ರಿತವಾಗಿದೆ. ಗ್ರಾಹಕರ ವಿಶ್ವಾಸಕ್ಕೆ ಪಾತ್ರವಾಗಿರುವ ಅಲೆಕ್ಸ್ ಟೆಕ್ಸ್ ಟೈಲ್ಸ್ ನಲ್ಲಿ ಗ್ರಾಹಕರಿಗೆ ಬೇಕಾದಂತಹ ಎಲ್ಲಾ ಬಗೆಯ ಬಟ್ಟೆಬರೆಗಳು ಸಿಗುತ್ತಿವೆ. ಗ್ರಾಹಕರಿಗೆ ನೀಡಿದ ಉತ್ತಮ ಸೇವೆ ಮತ್ತು ಗ್ರಾಹಕರು ನೀಡಿದ ಪ್ರೀತಿ ವಿಶ್ವಾಸದಿಂದ ಬೆಳೆದ ಅಲೆಕ್ಸ್ ಟೆಕ್ಸ್ ಟೈಲ್ಸ್ ಶಿರ್ವ ಬಸ್ಸು ನಿಲ್ದಾಣದ ಬಳಿ ತನ್ನ ಸ್ವಂತ ಕಟ್ಟಡದಲ್ಲಿಕಾರ್ಯಾಚರಿಸುತ್ತಿದೆ. ಮಕ್ಕಳ, ಪುರುಷರ, ಮಹಿಳೆಯರ ಮತ್ತು ಎಲ್ಲರಿಗೂ ಸಮನಾದ ಬಟ್ಟೆಗಳನ್ನು ಯಾವುದೇ ಗೊಂದಲವಿಲ್ಲದೆ ಗ್ರಾಹಕರಿಗೆ ನೀಡುವ ವ್ಯವಸ್ಥೆ ಅಲೆಕ್ಸ್ ಟೆಕ್ಸ್ ಟೈಲ್ಸ್ ನಲ್ಲಿದೆ.

ಶಿರ್ವ ಜನತೆಯ ಮತ್ತು ಗ್ರಾಹಕರ ವಿಶ್ವಾಸಕ್ಕೆ ಪಾತ್ರವಾಗಿರುವ ಅಲೆಕ್ಸ್ ಟೆಕ್ಸ್ ಟೈಲ್ಸ್  ಹಂತ ಹಂತಕ್ಕೆ ವಿವಿಧ ದೂರದ ಊರುಗಳ ಗ್ರಾಹಕರ ಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ. ಹಲವಾರು ವರ್ಷಗಳಿಂದ ವಸ್ತ್ರ ವೈವಿಧ್ಯಗಳ ವ್ಯವಹಾರದಲ್ಲಿ ಅನುಭವವುಳ್ಳ ಸಂಸ್ಥೆಯ ಏಕೈಕ ಮಳಿಗೆ ಇದಾಗಿದ್ದು ಕೋವಿಡ್-19ಗೆ ಸಂಬಂಧಿಸಿದಂತೆ ಸರಕಾರದ ಆದೇಶದ ಅನ್ವಯ ಎಲ್ಲಾ ನಿಯಮಗಳನ್ನು ಈ ಮಳಿಗೆಯಲ್ಲಿ ಪಾಲಿಸಲಾಗುತ್ತಿದೆ.

ಸರಳ ಸ್ವಭಾವದ ಮಾಲಕರಾಗಿರುವ ಆಲ್ವಿನ್ ಡಿಸೋಜಾ ತಮ್ಮ ತಂದೆ ಆರಂಭಿಸಿದ ಸಂಸ್ಥೆಯಲ್ಲಿ ಇಂದು ತಾನು ಬೆಳೆದದ್ದಲ್ಲದೆ ಹಲವಾರು ಯುವಕ ಯುವತಿಯರಿಗೆ ಉದ್ಯೋಗವನ್ನು ನೀಡಿ ಅವರ ಕುಟುಂಬಗಳಿಗೆ ನಂದಾ ದೀಪವಾಗಿದ್ದಾರೆ. ಕಾಲಕ್ಕೆ ತಕ್ಕಂತೆ ಮತ್ತು ಗ್ರಾಹಕರ ಮನಸ್ಸಿಗೆ ಒಪ್ಪುವಂತಹ ಹಲವಾರು ವಿವಿಧ ಉನ್ನತ ಶ್ರೇಣಿಯ ಬಟ್ಟೆಬರೆಗಳನ್ನು ತನ್ನ ಮಳಿಗೆಯಲ್ಲಿ ಜೋಡಣೆ ಮಾಡುವುದಕ್ಕೆ ಮಾಲಕ ಆಲ್ವಿನ್ ಪ್ರಯತ್ನ ಅವಿರತವಾದುದು.

ಪ್ರಸ್ತುತ 60ನೇ ವರ್ಷದ ಸಂಭ್ರಮದಲ್ಲಿ ಅಲೆಕ್ಸ್ ಟೆಕ್ಸ್ ಟೈಲ್ಸ್, ಗ್ರಾಹಕರಿಗೆ ಅತ್ಯುನ್ನತ ಕೊಡುಗೆ ಮತ್ತು ಆಫರ್ ನೀಡಲು ಸಿದ್ಧಗೊಂಡಿದೆ. ಗ್ರಾಹಕರಿಗೊಸ್ಕರ ಕ್ರಿಸ್‌ಮಸ್ ಹಾಗೂ ಹೊಸ ವರ್ಷದ ಪ್ರಯುಕ್ತ ವಿಶೇಷವಾದ ಬಿಗ್ ಆಫರ್‌ಗಳನ್ನು ಇಡಲಾಗಿದೆ. ಪ್ರಖ್ಯಾತ ಕಂಪೆನಿಗಳ ಮತ್ತು ಗ್ರಾಹಕರಿಗೆ ಸಂತುಷ್ಟಗೊಳಿಸಬಲ್ಲ ವಿವಿಧ ವಿನ್ಯಾಸದ ಬಟ್ಟೆಗಳನ್ನು 10% ರಿಂದ 50% ರವರೆಗೆ ವಿಶೇಷ ಡಿಸ್ಕೌಂಟ್‌ನೊಂದಿಗೆ ನೀಡಲು ಅಲೆಕ್ಸ್ ಟೆಕ್ಸ್ ಟೈಲ್ಸ್  ಸಿದ್ಧಗೊಂಡಿದೆ.

ರೆಡಿಮೇಡ್ ಡ್ರೆಸ್, ಮದುವೆ ಸೀರೆಗಳು, ಉನ್ನತ ಶ್ರೇಣಿಯ ಕಾಟನ್, ಕಾಂಜೀವರಂ ಸಿಲ್ಕ್, ಡಿಸೈನರ್ ಸೀರೆಗಳು, ಸಲ್ವಾರ್, ಶೆರ್ವಾನಿ, ಟೀ ಶರ್ಟ್ಸ್, ಬ್ರೈಡಲ್‌ಗೌನ್, ಗಾಗ್ರಾ ಮೆಟೀರಿಯಲ್ಸ್ ಕಿಡ್ಸ್ ವೇರ್, ಗೌನ್, ಜೀನ್ಸ್, ಟಾಪ್ಸ್,  ಕುರ್ತಾ ಹಾಗೂ ಎಲ್ಲಾ ವಿಧದ ಡ್ರೆಸ್ ಮೆಟೀರಿಯಲ್ಸ್ ಸಹಿತ ಗ್ರಾಹಕರಿಗೆ ಬೇಕಾಗುವ ಎಲ್ಲಾ ವಿಧದ ಉನ್ನತ ಶ್ರೇಣಿಯ ಬಟ್ಟೆಬರೆಗಳು ಕೈಗೆಟಕುವ ದರದಲ್ಲಿ ಲಭ್ಯವಿದೆ.

ಯುವಕ-ಯುವತಿಯರ ಹೊಸ ಹೊಸ ಫ್ಯಾಶನ್ ಉಡುಪುಗಳ ವಿಶೇಷ ವಿನ್ಯಾಸದ ಫ್ಯಾಮಿಲಿ ಶಾಪ್ ಇದಾಗಿದೆ.ಮನೆಗೆ ಬೇಕಾಗುವಂತಹ ಬೆಡ್, ಬೆಡ್‌ಶೀಟ್‌ಗಳು, ತಲೆದಿಂಬುಗಳು, ಕರ್ಟನ್ಸ್, ಸೂಟ್‌ಕೇಸ್ ಟ್ರಾವೆಲಿಂಗ್ ಬ್ಯಾಗ್, ಪರ್ಸ್, ವ್ಯಾನಿಟಿ ಬ್ಯಾಗ್, ಡೋರ್ ಮ್ಯಾಟ್ಸ್, ಚಾಪೆಗಳು ಲಭ್ಯವಿದೆ.

ಈ ಬಾರಿಯ ಕ್ರಿಸ್‌ಮಸ್ ಹಾಗೂ ಹೊಸ ವರ್ಷವನ್ನು ಅಲೆಕ್ಸ್ ಟೆಕ್ಸ್ ಟೈಲ್ಸ್ ನಲ್ಲಿ  ವಿವಿಧ, ಹೊಸಹೊಸ ಪ್ರಖ್ಯಾತ ಕಂಪೆನಿಗಳ ಬಟ್ಟೆಗಳನ್ನು – ಖರೀದಿಸುವುದರೊಂದಿಗೆ ಸಂಭ್ರಮಿಸೋಣ 60ರ ಸಂವತ್ಸರಗಳನ್ನು ಗ್ರಾಹಕರ ವಿಶ್ವಾಸದೊಂದಿಗೆ ತಲುಪಿರುವ ಈ ಸಂಸ್ಥೆಯು, ವಿಶೇಷ ಆಫರ್‌ಗಳನ್ನು ನೀಡಿದ್ದಾರೆ. 60 ವರುಷಗಳಿಂದ ಗ್ರಾಹಕರು ನೀಡಿದ ವಿಶ್ವಾಸ ಮತ್ತು ಸಹಕಾರಕ್ಕೆ ಕೃತಜ್ಞತೆಗಳು, ಈ ಬಾರಿಯ ಕ್ರಿಸ್‌ಮಸ್ ಹಾಗು ಹೊಸ ವರುಷಕ್ಕೆ ನೀಡಿದ ವಿಶೇಷ ಆಫರ್‌ಗಳ ಸದುಪಯೋಗ ಪಡೆಯಬೇಕೆಂಬುದು ಅಲೆಕ್ಸ್ ಟೆಕ್ಸ್ ಟೈಲ್ಸ್ ನ ಮಾಲಕರಾದ ಆಲ್ವಿನ್ ಡಿಸೋಜರವರು ವಿನಂತಿಸಿಕೊಂಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!