ಹತ್ರಾಸ್ ಪ್ರಕರಣ: ಯುವತಿಯ ಸಾಮೂಹಿಕ ಅತ್ಯಾಚಾರ ವೆಸಗಿ ಕೊಲೆಗಯ್ಯಲಾಗಿದೆ: ಸಿಬಿಐ ಚಾರ್ಜ್ ಶೀಟ್

ಹತ್ರಾಸ್: ದೇಶಾದ್ಯಂತ ಬಾರೀ ಸಂಚಲನ ಮೂಡಿಸಿದ್ದ ಉತ್ತರ ಪ್ರದೇಶದ ಹತ್ರಾಸ್‌ನ ಯುವತಿಯ ಅತ್ಯಾಚಾರ ಹಾಗೂ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಸಿಬಿಐ ವರದಿ ಸಲ್ಲಿಸಿದೆ. ಪ್ರಕರಣ ನಡೆದು ಮೂರು ತಿಂಗಳಾದ ಬಳಿಕ ಸಿಬಿಐ ಈ ಕುರಿತು ಚಾರ್ಜ್ ಶೀಟ್ ಸಲ್ಲಿಸಿದ್ದು, ಯುವತಿಯನ್ನು ಸಾಮೂಹಿಕ ಅತ್ಯಾಚಾರ ಮಾಡಿ ಕೊಲೆಗೈಯಲಾಗಿದೆ ಎಂದು ಹೇಳಿದ್ದಾಗಿ ರಾಷ್ಟ್ರೀಯ ಮಾಧ್ಯಮವೊಂದು ವರದಿ ಮಾಡಿದೆ.

ಯುವತಿಯನ್ನು ದಾಖಲಿಸಲಾಗಿದ್ದ ಆಸ್ಪತ್ರೆಯ ವೈದ್ಯರ ಹೇಳಿಕೆಗಳನ್ನೂ ಪಡೆದು, ಫೊರೆನ್ಸಿಕ್ ಪರೀಕ್ಷೆಗಳನ್ನೂ ನಡೆಸಿರುವ ತನಿಖಾ ತಂಡವು ದೆಹಲಿಯಿಂದ ೨೦೦ಕಿ.ಮೀ ದೂರದಲ್ಲಿರುವ ಹತ್ರಾಸ್‌ನ ನ್ಯಾಯಾಲಯದಲ್ಲಿ ಚಾರ್ಜ್ ಶೀಟ್ ಸಲ್ಲಿಸಿದೆ. ಆರೋಪಿಗಳ ವಿರುದ್ಧ ಪರಿಶಿಷ್ಟ ಜಾತಿ/ಪಂಗಡ ದೌಜರ್ನ್ಯ ಕಾಯ್ದೆಯಡಿ ಪ್ರಕರಣವನ್ನು ದಾಖಲಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. 

ಸೆ.14ರಂದು ನಾಲ್ವರು ಯುವಕರು ಯುವತಿಯೋರ್ವಳನ್ನು ಅತ್ಯಾಚಾರ ಮಾಡಿ ಕೊಲೆಗೈದಿದ್ದರು. ಯುವತಿಯ ಮೃತದೇಹವನ್ನು ಪೊಲೀಸರು ತರಾತುರಿಯಲ್ಲಿ, ಕುಟುಂಬದ ಅನುಮತಿಯನ್ನೂ ಪಡೆಯದೇ ಸಂಸ್ಕಾರ ಮಾಡಿದ್ದರು. ಈ ಪ್ರಕರಣ ಸುದ್ಧಿಯಾಗುತ್ತಿದ್ದಂತೆ ದೇಶಾದ್ಯಂತ ಭಾರೀ ಆಕ್ರೋಶಕ್ಕೆ ಕಾರಣವಾಗಿತ್ತು.

Leave a Reply

Your email address will not be published. Required fields are marked *

error: Content is protected !!