ಬಿಜೆಪಿ ನಾಯಕರ ಹೆಸರು ಹೇಳಿ ವಂಚಿಸುತ್ತಿದ್ದವ ಸಿಸಿಬಿ ಬಲೆಗೆ!

ಬೆಂಗಳೂರು: ಆರ್ ಎಸ್ ಎಸ್ ನಾಯಕ ಹಾಗೂ ಅಮಿತ್ ಶಾ, ಜೆಪಿ ನಡ್ಡಾ ಸೇರಿ ‌ಇತರೆ ಬಿಜೆಪಿ ನಾಯಕರ ಹೆಸರು ಹೇಳಿಕೊಂಡು ಜನರನ್ನು ವಂಚಿಸುತ್ತಿದ್ದ ಯುವರಾಜ್ ಎಂಬಾತನ ನಿವಾಸದ ಮೇಲೆ ಸಿಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಯುವರಾಜ್, ಬಿಜೆಪಿ ನಾಯಕರೊಂದಿಗೆ ಭಾವಚಿತ್ರ ತೆಗೆಸಿಕೊಂಡು ತಾನು ಬಹಳಷ್ಟು ಮಂದಿ ಬಿಜೆಪಿ ನಾಯಕರೊಂದಿಗೆ ಆತ್ಮೀಯನಾಗಿದ್ದೇನೆ ಎಂದು ನಂಬಿಸುತ್ತಿದ್ದ‌ನು. 

ಕೆಎಸ್ ಆರ್ ಟಿಸಿ ಅಧ್ಯಕ್ಷ ಸ್ಥಾನ ಕೊಡಿಸುವುದಾಗಿ ಹೇಳಿ ನನ್ನಿಂದ ಹಣ ಪಡೆದಿದ್ದು, ನಂತರ ಯಾವುದೇ ಹುದ್ದೆ ಕೊಡಿಸದೇ ವಂಚಿಸಿದ್ದಾನೆ ಎಂದು ಆರೋಪಿಸಿ ಯುವರಾಜ್ ವಿರುದ್ಧ ಇತ್ತೀಚಿಗೆ ಉದ್ಯಮಿ ಸುಧೀಂದ್ರ ರೆಡ್ಡಿ ಎಂಬುವವರು ಸಿಸಿಬಿ ಗೆ ದೂರು ನೀಡಿದ್ದರು.

ಈ ಕುರಿತು ಮಾಹಿತಿ ಪಡೆದ ಸಿಸಿಬಿ ಪೊಲೀಸರು, ಯುವರಾಜ್ ನಾಗರಭಾವಿ ನಿವಾಸದ ಮೇಲೆ ದಾಳಿ ಮಾಡಿ ಪರಿಶೀಲನೆ ನಡೆಸಿದ್ದಾರೆ.

ತನಿಖೆ ವೇಳೆ ಈತ ಬಹುತೇಕ ಜನರಿಂದ ಕೋಟ್ಯಂತರ ರೂ. ಹಣ ಪಡೆದು ವಂಚನೆ ಮಾಡಿರುವ ವಿಚಾರ ಬೆಳಕಿಗೆ ಬಂದಿದೆ ಎನ್ನಲಾಗಿದೆ. ಸದ್ಯ ಆತನನ್ನು ವಶಕ್ಕೆ ಪಡೆದು ಅಧಿಕಾರಿಗಳು ತನಿಖೆ ಮುಂದುವರೆಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!