ಕೃಷಿ ಕಾಯ್ದೆಗಳನ್ನು ರದ್ದುಪಡಿಸುವ ಪ್ರಶ್ನೆಯೇ ಇಲ್ಲ- ಪ್ರಧಾನಿ ಮೋದಿ ಸ್ಪಷ್ಟನೆ
ನವದೆಹಲಿ: ಒಂದೆಡೆ ಕೇಂದ್ರ ಸರ್ಕಾರದ ಮೂರು ಕೃಷಿ ಕಾಯ್ದೆಗಳನ್ನು ರದ್ದುಪಡಿಸುವಂತೆ ಒತ್ತಾಯಿಸಿ ಕಳೆದ 21 ದಿನಗಳಿಂದ ನಡೆಯುತ್ತಿರುವ ರೈತರ ಪ್ರತಿಭಟನೆ ದಿನೇ ದಿನೇ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ರೆ, ಮತ್ತೊಂದೆಡೆ, ಕೃಷಿ ಕ್ಷೇತ್ರದ ಸುಧಾರಣೆಗಾಗಿ ಜಾರಿಗೆ ತಂದಿರುವ ಮೂರು ಕಾಯ್ದೆಗಳನ್ನು ರದ್ದುಪಡಿಸುವ ಪ್ರಶ್ನೆಯೇ ಇಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಈ ಬಗ್ಗೆ ಗುಜರಾತ್‌ನ ಧೋರ್ಡೊದಲ್ಲಿ ಮಾತನಾಡಿದ ಅವರು, ವಿರೋಧ ಪಕ್ಷಗಳು ರಾಜಕೀಯ ಲಾಭಕ್ಕಾಗಿ ರೈತರನ್ನು ದಾರಿತಪ್ಪಿಸುತ್ತಿದ್ದು ಕೃಷಿ ಕಾಯ್ದೆಗಳನ್ನು ರದ್ದುಪಡಿಸುವ ಪ್ರಶ್ನೆಯೇ ಇಲ್ಲ, ಈ ಕಾಯ್ದೆಗಳು ರೈತರಿಗೆ ಅತ್ಯಂತ ಪ್ರಯೋಜನಕಾರಿಯಾಗಿದ್ದು ಇಂತಹ ಕಾಯ್ದೆ ಜಾರಿಗೊಳಿಸಲು ರೈತ ಸಂಘಟನೆಗಳು ಹಾಗೂ ವಿರೋಧ ಪಕ್ಷಗಳು ಹಲವು ವರ್ಷದಿಂದ ಬೇಡಿಕೆ ಇಟ್ಟಿದ್ದರು. ವಿರೋಧ ಪಕ್ಷ ಆಡಳಿತದಲ್ಲಿದ್ದಾಗ ಇದೇ ಕಾನೂನನ್ನು ಜಾರಿಗೆ ತರಲು ಮುಂದಾಗಿದ್ದರು. ಆದರೆ ಈಗ ಸುಮ್ಮನ್ನೇ ವಿರೋಧ ಮಾಡುತ್ತಾರೆ” ಎಂದು ದೂರಿದರು.
ಇದೆ ವೇಳೆ ಮಾತು ಮುಂದುವರಿಸಿದ ಅವರು, ರೈತರಿಗೆ ವಿಪಕ್ಷಗಳು ಈ ಹೊಸ ಕಾಯ್ದೆ ಜಾರಿಗೆ ಬಂದರೆ ನಿಮ್ಮ ಭೂಮಿ ಕಳೆದುಕೊಳ್ಳುತ್ತೀರಿ ಎಂದೆಲ್ಲಾ ಹೇಳುತ್ತಿದ್ದಾರೆ. ಆದರೆ ನಾನು ನಿಮ್ಮಲ್ಲಿ ಒಂದು ಪ್ರಶ್ನೆ ಕೇಳುತ್ತೇನೆ, ನೀವು ಹಾಲು ಕೊಡುತ್ತೀರಿ ಎಂಬ ಕಾರಣಕ್ಕೆ ಡೈರಿ ಮಾಲೀಕರು ನಿಮ್ಮಿಂದ ಹಸುವನ್ನೇ ವಶಕ್ಕೆ ಪಡೆದುಕೊಳ್ಳುತ್ತಾರಾ” ಎಂದು ರೈತರನ್ನು ಪ್ರಶ್ನಿಸಿದ್ದಾರೆ.