ಉಡುಪಿ: ಬಸ್ ಸ್ಟ್ಯಾಂಡಿನ ಅವ್ಯವಸ್ಥೆಗೆ ಐದು ವರ್ಷದಿಂದ ಆಳುತ್ತಿದ್ದ ಬಿಜೆಪಿಯೇ ಕಾರಣ- ಸುರೇಶ್ ಶೆಟ್ಟಿ ಬನ್ನಂಜೆ
ಉಡುಪಿ: ಇತಿಹಾಸದಲ್ಲಿ ಅತ್ಯಧಿಕ ಬಾರಿ ಬಿಜೆಪಿಯ ಆಡಳಿತವೇ ನಗರಸಭೆಯನ್ನು ಆಡಳಿತ ನಡೆಸಿದ್ದು ಇಡೀ ಉಡುಪಿಯ ಜನತೆಗೆ ಇವರ ಆಡಳಿತ ವೈಫಲ್ಯವೇ ಇಂದು ಆಗುತ್ತಿರುವ ಪ್ರಮುಖ ನಗರದ ಸಮಸ್ಯೆಗಳಿಗೆ ಸಾಕ್ಷಿ. ಉಡುಪಿಯ ನಗರದ ಬಸ್ ನಿಲ್ದಾಣದ ಅವ್ಯವಸ್ಥೆ ಬಗ್ಗೆ ಬಿಜೆಪಿಯ ನಾಯಕರಿಗೆ ಕಳೆದ ಐದು ವರ್ಷಗಳಿಂದ ಗೋಚರದಲ್ಲಿ ಇರಲಿಲ್ಲವೇ ಎಂದು ನಗರಸಭಾ ಮಾಜಿ ನಾಮ ನಿರ್ದೇಶಕ ಸದಸ್ಯ ಸುರೇಶ್ ಶೆಟ್ಟಿ ಬನ್ನಂಜೆ ಪ್ರಶ್ನಿಸಿದ್ದಾರೆ.
ಈ ಹಿಂದೆ ರಾಜ್ಯವನ್ನು ಆಡಳಿತ ಮಾಡಿದ್ದು ಬಿಜೆಪಿಯ ಸರ್ಕಾರವಲ್ಲವೇ ಇವರ ಆಡಳಿತ ಇರುವಾಗ ಏಕೆ ಆಗಲೇ ಅನುದಾನವನ್ನು ತರಿಸಿಕೊಂಡು ಇದನ್ನು ಅಭಿವೃದ್ಧಿ ಮಾಡಲಿಲ್ಲ. ಬಿಜೆಪಿಯ ನಗರಸಭಾ ಆಡಳಿತ 5 ವರ್ಷದಲ್ಲಿ ನಗರದ ಸರ್ವಿಸ್ ಬಸ್ ಸ್ಟ್ಯಾಂಡ್ ಬಗ್ಗೆ ಕಾಳಜಿ ಇಲ್ಲದೆ ಸುಮ್ಮನೆ ಕುಳಿತಿದೆ. ಇವರಿಗೆ ಜನಸಾಮಾನ್ಯರ ಬಗ್ಗೆ ಕಾಳಜಿ ಇಲ್ಲ. ಬಿಜೆಪಿಯವರು ಇಂದು ರಾಜ್ಯ ಸರಕಾರದ ವಿರುದ್ಧ ಮಾತನಾಡುತ್ತಿದ್ದಾರೆ ಬಿಜೆಪಿ ಶಾಸಕರೇ ಹಾಗೂ ನಾಯಕರೇ ನಿಮ್ಮ ಸರಕಾರ ಉಡುಪಿ ಸರ್ವಿಸ್ ಬಸ್ ಸ್ಟ್ಯಾಂಡಿಗೆ ಏಕೆ ಅನುದಾನ ತಂದು ಸರಿಪಡಿಸಲಿಲ್ಲ. ಎಲ್ಲಾ ಸಮಸ್ಯೆಗೆ ಮೂಲ ಕಾರಣವೇ ಬಿಜೆಪಿ. ನಗರಸಭೆಯನ್ನು ಆಡಳಿತ ನಡೆಸಿದ ಬಿಜೆಪಿ ಆಡಳಿತ ಹಾಗೂ ಉಡುಪಿಯ ಶಾಸಕರು ಹಾಗೂ ಸಂಸದರು ಮತ್ತು ಬಿಜೆಪಿಯ ಉಸ್ತುವಾರಿ ಸಚಿವರು ಎಂಬುದನ್ನು ಬಿಜೆಪಿಯ ನಾಯಕರು ನೆನಪಿಟ್ಟುಕೊಳ್ಳಬೇಕು.
ಇಂದು ನಮ್ಮ ಉಡುಪಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ನಾಯಕ ಪ್ರಸಾದ್ ರಾಜ್ ಕಾಂಚನ್ ಸವಿಸ್ ಬಸ್ ಸ್ಟ್ಯಾಂಡ್ ನಿಲ್ದಾಣಕ್ಕೆ ಭೇಟಿ ನೀಡಿ ಜನಸಾಮಾನ್ಯರ ಸಮಸ್ಯೆ ಹಾಗೂ ಸ್ಥಳೀಯವಾಗಿ ವ್ಯವಹಾರ ಮಾಡುತ್ತಿರುವ ಎಲ್ಲರನ್ನು ಭೇಟಿಯಾಗಿ ಅವರ ಸಮಸ್ಯೆಯ ಬಗ್ಗೆ ಕಾಳಜಿ ವಹಿಸಲು ನಗರಸಭೆಯ ಕಮಿಷನರ್ ಬಳಿ ಕೂಡಲೇ ಸಮಸ್ಯೆ ಪರಿಹರಿಸುವಂತೆ ಸೂಚಿಸಿರುತ್ತಾರೆ. ಕಳೆದ ಐದು ವರ್ಷಗಳಿಂದ ಆಡಳಿತ ನಡೆಸಿದ ಬಿಜೆಪಿಯವರು ಹಾಗೂ ಉಡುಪಿಯ ಶಾಸಕರು ಇವರುಗಳ ನಿರ್ಲಕ್ಷದಿಂದ ಇಲ್ಲಿ ಸಮಸ್ಯೆ ಆಗಿದೆ. ಎಂದು ಉಡುಪಿ ನಗರಸಭಾ ಮಾಜಿ ನಾಮ ನಿರ್ದೇಶಕ ಸದಸ್ಯ ಸುರೇಶ್ ಶೆಟ್ಟಿ ಬನ್ನಂಜೆ ಇವರು ತಿಳಿಸಿರುತ್ತಾರೆ.





