ಹಲವು ಕಳ್ಳತನ ಪ್ರಕರಣ – ಮಂಚಿಯ ದಂಪತಿಗಳ ಬಂಧನ

ಮಂಗಳೂರು: ದೇವಾಲಯ, ಮನೆ, ಮತ್ತು ವ್ಯಾಪಾರ ಕೇಂದ್ರಗಳಲ್ಲಿ ಕಳ್ಳತನ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಆರೋಪಿಗಳನ್ನು ಮುಲ್ಕಿ ಪೊಲೀಸರು ಬಂಧಿಸಿದ್ದಾರೆ.

ರಾಜೇಶ್ ನಾಯಕ್ ಅಲಿಯಾಸ್ ರಾಜು ಪಮುದಿ (42) ಹಾಗೂ ಪದ್ಮಾ ಪಮುದಿ (37) ಬಂಧಿತ ದಂಪತಿ ಆರೋಪಿಗಳು. ಈ ದಂಪತಿಗಳು ಮಂಚಿ, ಮಣಿಪಾಲ ಮತ್ತು ಕರಾವಳಿ ಕರ್ನಾಟಕದ ಇತರ ಸ್ಥಳಗಳಲ್ಲಿ ವಾಸವಾಗಿದ್ದು, ಈ ಸ್ಥಳಗಳಲ್ಲಿ ವಾಸವಿದ್ದ ಸಂದರ್ಭ ಕಳ್ಳತನದಲ್ಲಿ ತೊಡಗಿದ್ದರು.

ಇದೀಗ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಗಳಿಬ್ಬರನ್ನು ಧಾರವಾಡದ ಜನತಾ ಕಾಲೋನಿಯಲ್ಲಿ ಪೊಲೀಸರು ಬಂಧಿಸಿದ್ದಾರೆ. ಇವರಿಬ್ಬರ ಮೇಲೆ, ಮುಲ್ಕಿಯಲ್ಲಿರುವ ಸೋಮನಸುಂದರ್ ಅಂಚನ್ ಮತ್ತು ಹಸನಬ್ಬ ಅವರ ಮನೆ, ಚರಂತಿ ಪೇಟೆ ಮುಲ್ಕಿಯ ಪ್ರಕಾಶ್ ಜ್ಯುವೆಲ್ಲರಿ, ಮಾರಿಯಮ್ಮ ದೇವಸ್ಥಾನ, ಮೂಕಾಂಬಿಕಾ ದೇವಸ್ಥಾನ ಮತ್ತು ಇತರ ಸ್ಥಳಗಳಲ್ಲಿ ಕಳ್ಳತನ ಮಾಡಿದ್ದಾರೆ ಎಂಬ ಆರೋಪವಿದೆ.

ಇದೀಗ ಈ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು  ರೋಪಿಗಳನ್ನು ಪೊಲೀರು ಬಂಧಿಸಿದ್ದು,   ಬಂಧಿತರಿಂದ 62 ಗ್ರಾಂ ಚಿನ್ನದ ಆಭರಣಗಳು, ಎರಡೂವರೆ ಕಿಲೋಗ್ರಾಂಗಳಷ್ಟು ಬೆಳ್ಳಿ ವಸ್ತುಗಳು ಮತ್ತು ಇತರ ವಸ್ತು ಸೇರಿ ಸುಮಾರು ನಾಲ್ಕು ಲಕ್ಷ ರೂ ಮೌಲ್ಯದ ಸೊತ್ತುಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

Leave a Reply

Your email address will not be published. Required fields are marked *

error: Content is protected !!