ಉಡುಪಿ – ಮಣಿಪಾಲ: ಮೂರು ಕಡೆಗಳಲ್ಲಿ ಮಹಿಳೆಯರ ಚಿನ್ನಾಭರಣ ಕಸಿದು ಪರಾರಿ!
ಉಡುಪಿ: ದ್ವಿಚಕ್ರ ವಾಹನದಲ್ಲಿ ಬಂದ ದುಷ್ಕರ್ಮಿಯೊರ್ವ ಚಿನ್ನದ ಸರ ಸೆಳೆದು ಪರಾರಿಯಾದ ಸರಣಿ ಘಟನೆ ಮಣಿಪಾಲ ಮತ್ತು ಉಡುಪಿ ನಗರದಲ್ಲಿ ಇಂದು ಮುಂಜಾನೆ ನಡೆದಿದೆ. ಅಂಬಾಗಿಲು ಕಕ್ಕುಂಜೆಯ ಮಹಿಳೆಯೊಬ್ಬರು, ಕಕ್ಕುಂಜೆಯಲ್ಲಿ ದೇವಸ್ಥಾನಕ್ಕೆ ಹೋಗುತ್ತಿದ್ದ ಸಂದರ್ಭ, ಆಕ್ಟೀವಾ ವಾಹನದಲ್ಲಿ ಮೊಬೈಲ್‌ನಲ್ಲಿ ಮಾತನಾಡುತ್ತಾ ಕುಳಿತಿದ್ದ ದುರ್ಷ್ಕರ್ಮಿ, ಮಹಿಳೆ ಮುಂದೆ ಹೋಗುತ್ತಿದ್ದಂತೆ, ನಡೆದುಕೊಂಡು ಹಿಂಬಾಲಿಸಿದಾತ ಮಹಿಳೆಯ ಕುತ್ತಿಗೆಯಲ್ಲಿದ್ದ ಚಿನ್ನದ ಸರ ಎಗರಿಸಲು ಯತ್ನಿಸಿದ್ದಾನೆ. ಈ ವೇಳೆ ತಕ್ಷಣ ಎಚ್ಚೆತ್ತ ಮಹಿಳೆ ಸರವನ್ನು ಗಟ್ಟಿಯಾಗಿ ಹಿಡಿದುಕೊಂಡಿದ್ದ ಪರಿಣಾಮ ಅರ್ಧ ಸರ ಮಾತ್ರ ಎಳೆದು ದುರ್ಷ್ಕರ್ಮಿ ಪರಾರಿಯಾಗಿದ್ದಾನೆ. ಇನ್ನೊಂದೆಡೆ ಇಂದ್ರಾಳಿ ಕಾಮಾಕ್ಷಿ ದೇವಸ್ಥಾನ ಬಳಿ ಮಹಿಳೆಯೊರ್ವರ ಸರವನ್ನು ಕೂಡ ಸೆಳೆದು ಕಳ್ಳ ಪರಾಯಾಗಿರುವ ಕುರಿತು ಮಣಿಪಾಲ ಠಾಣೆಯಲ್ಲಿ ದೂರು ದಾಖಲಾಗಿದೆ. ಮತ್ತೊಂದು ಪ್ರಕರಣದಲ್ಲಿ, ಕಾಪುವಿನಿಂದ ಬ್ರಹ್ಮಗಿರಿಗೆ ಅಪಾರ್ಟ್ಮೆಂಟ್‌ವೊ0ದಕ್ಕೆ ಕೆಲಸಕ್ಕೆಂದು ಬರುತ್ತಿದ್ದ ವೇಳೆ ಕಳ್ಳನೋರ್ವ ಮಹಿಳೆಯೋರ್ವರ ಚಿನ್ನದ ಸರ ಎಳೆದು ಪರಾರಿಯಾಗಿರುವ ಘಟನೆ ಉಡುಪಿ ಠಾಣಾ ವ್ಯಾಪ್ತಿಯ ಬ್ರಹ್ಮಗಿರಿಯಲ್ಲಿ ನಡೆದಿದೆ. ಇದೀಗ ಈ ಮೂರು ಪ್ರಕರಣಗಳು ಒಂದರ ಹಿಂದೆ ಮತ್ತೊಂದರoತೆ ನಡೆದಿದ್ದು, ಎಲ್ಲಾ ಮೂರು ಪ್ರಕರಣದಲ್ಲಿ ಒಬ್ಬನೇ ಭಾಗಿಯಾಗಿರುವ ಶಂಕೆ ವ್ಯಕ್ತವಾಗಿದೆ. ಇದೇ ನಿಟ್ಟಿನಲ್ಲಿ ಪರಾರಿಯಾಗಿರುವ ಸರಗಳ್ಳನ ಪತ್ತೆಗೆ ಪೊಲೀಸರು ತನಿಖೆ ನಡೆಸುತಿದ್ದಾರೆ. |