ಉಡುಪಿಯ ‘ವಿಕ್ಕಿ ಮೊಬೈಲ್ಸ್’ ನಲ್ಲಿ ತುಳು ಲಿಪಿಯ ಬರವಣಿಗೆ
ಉಡುಪಿ: ಸದಾ ತನ್ನ ಉತ್ತಮ ಸೇವೆ ಮೂಲಕ ಜನಪ್ರಿಯತೆ ಪಡೆದಿರುವ ಉಡುಪಿಯ ಪ್ರಸಿದ್ದ ಮೊಬೈಲ್ ಶೋ ರೂಂಗಳಲ್ಲಿ ಒಂದಾದ ವಿಕ್ಕಿ ಮೊಬೈಲ್ಸ್ ಮತ್ತೊಂದು ವಿಷಯಕ್ಕೆ ಸುದ್ದಿಯಾಗಿದೆ. ಹೌದು ಉತ್ತಮ ಸೇವೆಯೊಂದಿಗೆ ವಿಶೇಷ ಕೊಡುಗೆಗಳ ಮೂಲಕ ಉಡುಪಿಗರ ಮನೆಮಾತಾಗಿರುವ ವಿಕ್ಕಿ ಮೊಬೈಲ್ಸ್ ನ ನಾಮ ಫಲಕದಲ್ಲಿ ತುಳು ಲಿಪಿಯಲ್ಲಿ ವಿಕ್ಕಿ ಮೊಬೈಲ್ಸ್ ಎಂದು ಬರೆದು ಅಳವಡಿಸಲಾಗಿದ್ದು ಭಾರೀ ಮೆಚ್ಚುಗೆಗೆ ಪಾತ್ರವಾಗಿದೆ. ಕರಾವಳಿಯಾದ್ಯಂತ ತುಳು ಲಿಪಿಯ ಬಳಕೆ ಹೆಚ್ಚಾಗುತ್ತಿದ್ದು, ಎಲ್ಲೆಡೆ ತುಳು ಲಿಪಿಯ ಫಲಕಗಳು, ಬರವಣಿಗೆ ಗಳು ಪ್ರಾಮುಖ್ಯತೆಯನ್ನು ಪಡೆದುಕೊಳ್ಳುತ್ತಿದೆ. ಇದೀಗ ವಿಕ್ಕಿ ಮೊಬೈಲ್ಸ್ ನ ನಾಮ ಫಲಕದಲ್ಲಿ ತುಳು ಲಿಪಿಯನ್ನು ಅಳವಡಿಸಿರುವುದು ಸಾರ್ವಜನಿಕ ವಲಯದಲ್ಲಿ ಭಾರೀ ಪ್ರಶಂಸೆಗೆ ಪಾತ್ರವಾಗಿದೆ. |