ಕುಯಿಲಾಡಿ ಸಾರಿಗೆ ನೌಕರರ ಪ್ರತಿಭಟನೆಯಲ್ಲೂ ತಮ್ಮ ಲಾಭವನ್ನು ನೋಡುತ್ತಿದ್ದಾರೆ: ರಮೇಶ್ ಕಾಂಚನ್

ಉಡುಪಿ: ಅನೇಕ ಬೇಡಿಕೆಯನ್ನ ಮುಂದಿರಿಸಿ ರಾಜ್ಯ ರಸ್ತೆ ಸಾರಿಗೆ ನೌಕರರು ಕಳೆದ ನಾಲ್ಕು ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದಾರೆ.  ಈ ಮುಷ್ಕರದಿಂದ ಜನಸಾಮಾನ್ಯರು ತತ್ತರಿಸಿ ಹೋಗಿದ್ದಾರೆ ಎಂದು ರಾಜ್ಯ  ಬಸ್ಸು ಮಾಲಕರ ಸಂಘದ ಖಜಾಂಚಿ ಕುಯಿಲಾಡಿ ಸುರೇಶ್ ಕುಮಾರ್ ಹೇಳಿಕೆ ನೀಡಿದ್ದಾರೆ. ಈ ಹೇಳಿಕೆಗೆ ತಿರುಗೇಟು ನೀಡಿರುವ ಕಾಂಗ್ರೆಸ್ ಮುಖಂಡ ಹಾಗೂ ನಗರಸಭಾ ಸದಸ್ಯ ರಮೇಶ್ ಕಾಂಚನ್, ಪ್ರಮೋದ್ ಮಧ್ವರಾಜ್ ಸಚಿವರಾಗಿದ್ದ ಸಮಯದಲ್ಲಿ ಗ್ರಾಮೀಣ ಭಾಗಕ್ಕೂ ನರ್ಮ್  ಬಸ್ ಓಡಿಸುವ ಮೂಲಕ ಖಾಸಗಿ ಬಸ್ಸುಗಳು ಸಹ ಸೇವೆ ನೀಡದ ಪ್ರದೇಶದಲ್ಲಿ ಬಸ್ಸುಗಳು ಓಡಾಟ ನಡೆಸಿ ಗ್ರಾಮೀಣ ಭಾಗದ ಜನರಿಗೆ ಭಾರೀ ಅನುಕೂಲ ಮಾಡಿಕೊಟ್ಟಿತ್ತು.

ಆದ್ರೆ ಬಿಜೆಪಿ ಸರಕಾರ ಬಂದ‌ಮೇಲೆ  , ಜಿಲ್ಲೆಯ ಜನಪ್ರತಿನಿಧಿಗಳ ಕುಮ್ಮಕ್ಕು, ಜಿಲ್ಲಾಡಳಿತದ ಬೇಜವಾಬ್ದಾರಿಯಿಂದ ನರ್ಮ್ ಬಸ್ಸ್ ಗಳ ಓಡಾಟ ನಿಂತು ಹೋಗಿದೆ. ಇದರಲ್ಲಿ ಖಾಸಗೀ ಬಸ್ ಗಳ ಲಾಭಿ ಎದ್ದು ತೋರುತ್ತಿದ್ದು ಈಗಲೂ ಖಾಸಗೀ ಬಸ್ ಗಳು ಗ್ರಾಮೀಣ ಭಾಗದಲ್ಲಿ ಸರಿಯಾಗಿ ಸಂಚರಿಸದೇ ಜನರು ಪರದಾಡುತ್ತಿರುವುದು  ದುರದೃಷ್ಟಕರ ಎಂದು ರಮೇಶ್ ಕಾಂಚನ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕುಯಿಲಾಡಿ ಸುರೇಶ್ ನಾಯಕ್  ರಾಜ್ಯ ರಸ್ತೆ ಸಾರಿಗೆ ನೌಕರರ ಪ್ರತಿಭಟನೆಯಲ್ಲೂ ತಮ್ಮ ಲಾಭವನ್ನು ನೋಡುತ್ತಿದ್ದಾರೆ. ಸರಕಾರಿ ಬಸ್ಸುಗಳ ಓಡಾಟ ಇವರಿಗೆ ಬೇಕಿಲ್ಲ. ಈ ಪ್ರತಿಭಟನೆಯನ್ನೇ ಅಸ್ತ್ರ ಮಾಡಿಕೊಂಡು ರಾಜ್ಯದಾದ್ಯಂತ ಖಾಸಗೀ ಬಸ್ ಓಡಾಟ ಮಾಡುವ ಹುನ್ನಾರ ಅಡಗಿದ್ದು ಸರಕಾರ ತಕ್ಷಣ ನೌಕರರ ಎಲ್ಲಾ ಬೇಡಿಕೆಯನ್ನ ಇಡೇರಿಸಬೇಕು ಹಾಗೂ ಎಲ್ಲಾ ಜಿಲ್ಲೆಯ ಗ್ರಾಮೀಣ ಭಾಗಕ್ಕೂ ಸರಕಾರಿ ಬಸ್ಸುಗಳು ಓಡಾಡುವಂತೆ ಕ್ರಮ ಕೈಗೊಳ್ಳುವಂತೆ ರಮೇಶ್ ಕಾಂಚನ್ ಆಗ್ರಹಿಸಿದ್ದಾ

Leave a Reply

Your email address will not be published. Required fields are marked *

error: Content is protected !!