ಶೆಟ್ಟಿಬೆಟ್ಟು ಸರಕಾರಿ ಸಂಯುಕ್ತ ಪ್ರೌಢ ಶಾಲೆಗೆ 100% ಎಸ್‌ಎಸ್‌ಎಲ್‌ಸಿ ಫಲಿತಾಂಶ
ಇಂಗ್ಲಿಷ್ ಮತ್ತು ಕನ್ನಡ ಮಾಧ್ಯಮದಲ್ಲಿ ಮಿಂಚಿದ ವಿದ್ಯಾರ್ಥಿಗಳು –ನೇತ್ರ ಎಸ್ ಅರಳಿ ಶಾಲಾ ಟಾಪರ್
ಉಡುಪಿ: ಹೆರ್ಗ ಸಮೀಪದ ಶೆಟ್ಟಿಬೆಟ್ಟು ಸರಕಾರಿ ಸಂಯುಕ್ತ ಪ್ರೌಢ ಶಾಲೆ ಈ ವರ್ಷದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇಕಡಾ 100ರಷ್ಟು ಫಲಿತಾಂಶ ದಾಖಲಿಸಿ ಗಮನ ಸೆಳೆದಿದೆ. ಒಟ್ಟು 32 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಎಲ್ಲರೂ ಉತ್ತೀರ್ಣರಾಗಿದ್ದಾರೆ.
ಫಲಿತಾಂಶದಲ್ಲಿ 8 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್, 17 ಮಂದಿ ಫಸ್ಟ್ ಕ್ಲಾಸ್, 5 ಮಂದಿ ಸೆಕೆಂಡ್ ಕ್ಲಾಸ್ ಹಾಗೂ ಇಬ್ಬರು ಉತ್ತೀರ್ಣರಾಗಿದ್ದಾರೆ.
ಇಂಗ್ಲಿಷ್ ಮಾಧ್ಯಮ ಟಾಪರ್ಸ್:
ಪ್ರಥಮ ಸ್ಥಾನ -ನೇತ್ರ ಎಸ್ ಅರಳಿ (598 ಅಂಕಗಳು – 95.68%)
ದ್ವಿತೀಯ ಸ್ಥಾನ – ಮೇಘನ (595 – 95.2%)
ತೃತೀಯ ಸ್ಥಾನ – ತನ್ವಿ (592 – 94.97%)
ಕನ್ನಡ ಮಾಧ್ಯಮ ಟಾಪರ್ಸ್:
ಪ್ರಥಮ ಸ್ಥಾನ – ಸುಶ್ಮಿತಾ ಹಂಡೆನ್ನಾವರ್ (524 – 83.84%) ಹಾಗೂ ಮಣಿಕಾಂತ ರಗಾಣಿ (524 – 83.84%)
ದ್ವಿತೀಯ ಸ್ಥಾನ ರಾಜೇಶ್ವರಿ ಹನಮಪ್ಪ ಮಡಾರ್ (516- 82.56%)
ತೃತೀಯ ಸ್ಥಾನ-ದರ್ಶನ್ ಬಸವರಾಜ ಜಂಬಾಗಿ (505 – 80.8%)
ಡಿಸ್ಟಿಂಕ್ಷನ್ ಪಡೆದ ವಿದ್ಯಾರ್ಥಿಗಳು:
ನೇತ್ರ ಎಸ್ ಅರಳಿ, ಮೇಘನ, ತನ್ವಿ, ಭುವನ್ ಪಾಟೀಲ್, ದೀಕ್ಷಾ ಪ್ರಭು, ಸೌರಭ ಸಾಮಂತ, ಸಂಜನಾ ಹಾಗೂ ಗ್ರೀಷ್ಮ.
ಶಾಲೆಯ ಈ ಸಾಧನೆಗೆ ಮುಖ್ಯೋಪಾಧ್ಯಾಯರು, ಶಿಕ್ಷಕ ವೃಂದ ಹಾಗೂ ಪೋಷಕರು ಸಂತಸ ವ್ಯಕ್ತಪಡಿಸಿದ್ದು, ವಿದ್ಯಾರ್ಥಿಗಳ ಪರಿಶ್ರಮ ಮತ್ತು ಶಿಕ್ಷಕರ ಮಾರ್ಗದರ್ಶನವೇ ಈ ಯಶಸ್ಸಿಗೆ ಕಾರಣ ಎಂದು ಅಭಿಪ್ರಾಯಪಟ್ಟಿದ್ದಾರೆ.
ಈ ಸಂದರ್ಭದಲ್ಲಿ ಎಲ್ಲಾ ವಿದ್ಯಾರ್ಥಿಗಳಿಗೆ ಮತ್ತು ಶಿಕ್ಷಕ ವೃಂದದವರಿಗೆ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸುಕೇಶ್ ಕುಂದರ್ ಹೆರ್ಗ ಅಭಿನಂದನೆ ಸಲ್ಲಿಸಿದ್ದಾರೆ.





