ಸ್ವತಃ ರೈತರಿಗೆ ಬೇಡವಾದ ಕಾಯ್ದೆಗಳ ಜಾರಿಗೆ ಸರ್ಕಾರದ ಇಷ್ಟೊಂದು ಹಠವೇಕೆ?: ದಿನೇಶ್ ಗುಂಡೂರಾವ್

ಬೆಂಗಳೂರು: “ಕಾಣದ ಕೈಗಳ ಪ್ರಭಾವವಿಲ್ಲದೆ ಇಂತಹ ಮನೆಹಾಳು ಕಾಯ್ಧೆ ತರಲು ಕೇಂದ್ರಕ್ಕೆ ಸಾಧ್ಯವೆ..? ಎಂದು  ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಕೇಳಿದ್ದಾರೆ.  

ಈ ಬಗ್ಗೆ ಟ್ವೀಟ್ ಮಾಡಿರುವ ಅವರು, “ಕೇಂದ್ರ ತಂದಿರುವ ೩ ಕೃಷಿ ಕಾಯ್ಧೆಗಳು ಯಾರ ಹಿತಕ್ಕೆ ತಂದ ಕಾಯ್ಧೆಗಳು ಎಂದು ತಿಳಿಯದಷ್ಟು ಮುಗ್ಧರಲ್ಲ ದೇಶದ ರೈತರು. ಸ್ವತಃ ರೈತರಿಗೆ ಬೇಡವಾದ ಕಾಯ್ಧೆಗಳ ಜಾರಿಗೆ ಸರ್ಕಾರದ ಇಷ್ಟೊಂದು ಹಠವೇಕೆ?. ಕಾಣದ ಕೈಗಳ ಪ್ರಭಾವವಿಲ್ಲದೆ ಇಂತಹ ಮನೆಹಾಳು ಕಾಯ್ಧೆ ತರಲು ಕೇಂದ್ರಕ್ಕೆ ಸಾಧ್ಯವೆ?ಕೇಂದ್ರ ರೈತರ ತಾಳ್ಮೆ ಪರೀಕ್ಷಿಸುವ ಬದಲು ಸಮಸ್ಯೆ ಬಗೆಹರಿಸಲಿ” ಎಂದು ಬರೆದುಕೊಂಡು ಟ್ವೀಟ್ ಪೋಸ್ಟ್ ಮಾಡಿದ್ದಾರೆ.

ಸಾರಿಗೆ ನೌಕರರ ಮುಷ್ಕರದ ಬಗ್ಗೆ ಟ್ವೀಟ್ ಮಾಡಿರುವ ಅವರು, “ಸಾರಿಗೆ ನೌಕರರ ಮುಷ್ಕರದಿಂದ ಲಕ್ಷಾಂತರ ಪ್ರಯಾಣಿಕರು ತೊಂದರೆಗೀಡಾಗಿದ್ದಾರೆ. ಮುಷ್ಕರ ನಿರತರ ಮೇಲೆ ಕಾನೂನಿನ ಅಸ್ತ್ರ ಪ್ರಯೋಗಿಸುವ ಸಾರಿಗೆ ಸಚಿವರ ಮಾತು ಪ್ರಬುದ್ಧ ನಡೆಯಲ್ಲ. ಸರ್ಕಾರ ಎಲ್ಲವೂ ತನ್ನ ಮೂಗಿನ ನೇರಕ್ಕೆ ನಡೆಯಬೇಕೆಂಬ ಸರ್ವಾಧಿಕಾರಿ ಧೋರಣೆ ಬಿಟ್ಟು ಸಮಸ್ಯೆ ಬಗೆಹರಿಸುವತ್ತ ಚಿತ್ತ ಹರಿಸಲಿ” ಎಂದು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!