ಮಾನವ ಹಕ್ಕುಗಳ ಪ್ರತಿಷ್ಟಾನ: 72ರ ವಸಂತವನ್ನು ಪೂರೈಸಿದ ಸಂಭ್ರಮ

ಸಮಾಜದಲ್ಲಿ ಮಾನವೀಯತೆ, ಮನುಷತ್ವಗಳು ತಮ್ಮ ಪ್ರಾಮುಖ್ಯತೆ, ಅಸ್ಥಿತ್ವವನ್ನು ಕಳೆದುಕೊಳ್ಳುತ್ತಿರುವ ಇಂತಹ ಸಂದರ್ಭದಲ್ಲಿ ಆಫ್ರಿಕಾದ ಗಾಂಧಿ ಎಂದೇ ಪ್ರಸಿದ್ಧಿ ಪಡೆದ ನೆಲ್ಸನ್ ಮಂಡೇಲ ಅವರ ಮಾತೊಂದು ನೆನಪಿಗೆ ಬರತ್ತದೆ. ಮಾನವ ಹಕ್ಕುಗಳ ಕುರಿತಾಗಿ ಅವರು, `ಜನರ ಹಕ್ಕುಗಳನ್ನು ನಿರಾಕರಿಸಿದರೆ ಅದು ಅವರ ಮನುಷ್ಯತ್ವವನ್ನೇ ತಿರಸ್ಕರಿಸಿದಂತೆ’ ಎಂದು ಹೇಳಿದ್ದರು. ಅದರಂತೆ ಯಾವುದೇ ಒಬ್ಬ ಮನುಷ್ಯ ಹಕ್ಕಿಲ್ಲದೇ ಬದುಕಲು ಸಾಧ್ಯವಿಲ್ಲ. ಬದುಕಲು ಹಾಗೂ ತನ್ನ ಅಭಿಪ್ರಾಯ ವ್ಯಕ್ತಪಡಿಸಲು ಪ್ರತಿಯೊಬ್ಬರಿಗೆ ಹಕ್ಕುಗಳು ಅವಶ್ಯಕವಾಗಿವೆ. ಅದಕ್ಕಾಗಿಯೆ, ಭಾರತದ ಸಂವಿಧಾನವು ಭೂಮಿಯಲ್ಲಿ ಮಾನವನಿಗೆ ಆಹಾರ, ಉಡುಪು ಮತ್ತು ವಸತಿ ಎಂಬ ಮೂಲಭೂತ ಹಕ್ಕುಗಳ ಜೊತೆಗೆ ಬದುಕುವ, ಸ್ವತಂತ್ರವಾಗಿ ಜೀವಿಸುವ, ತಿನ್ನುವ, ಮಾತನಾಡುವ, ಓಡಾಡುವ ಹಕ್ಕುಗಳನ್ನು ನೀಡಿದೆ.

ಈ ನಿಟ್ಟಿನಲ್ಲಿ ಮಾನವ ಹಕ್ಕುಗಳ ಪ್ರತಿಷ್ಟಾನ ಸಮಾಜದಲ್ಲಿ ಉಲ್ಲಂಘನೆಯಾಗುತ್ತಿರುವ ಮಾನವ ಹಕ್ಕುಗಳ ರಕ್ಷಣೆಯ ಹೊಣೆ ಹೊತ್ತುಕೊಂಡಿದೆ. ಮಾನವ ಹಕ್ಕುಗಳ ಪ್ರತಿಷ್ಟಾನಕ್ಕೆ 72 ರ ವಸಂತವನ್ನು ಪೂರೈಸಿದ ಸಂಭ್ರಮ. ಈ ಮಾನವ ಹಕ್ಕುಗಳ ಪ್ರತಿಷ್ಟಾನ ಜಗತಿನಾದ್ಯಂತ ನಡೆಯುತ್ತಿರುವಂತಹ ತಾರತಮ್ಯಕ್ಕೆ ಅಂತ್ಯ ಹಾಡುವ ನಿಟ್ಟಿನಲ್ಲಿ ವಿಶ್ವ ಸಂಸ್ಥೆಯ ಮುಂದಾಳತ್ವದಲ್ಲಿ 1948ರಲ್ಲಿ ಡಿ. 10 ರಂದು ಅಸ್ಥಿತ್ವಕ್ಕೆ ಬಂದಿದ್ದು, ಅಂದಿನಿಂದ ಇಂದಿನವರೆಗೆ ವಿಶ್ವದೆಲ್ಲೆಡೆ ವಿಶ್ವ ಮಾನವ ಹಕ್ಕು ದಿನವನ್ನಾಗಿ ಆಚರಿಸಲಾಗುತ್ತದೆ.

ಪ್ರತಿಯೊಬ್ಬ ಪ್ರಜೆಗೆ ಗೌರವಯುತವಾಗಿ ಜೀವಿಸುವ ಹಕ್ಕುಗಳನ್ನು ಎತ್ತಿ ಹಿಡಿಯುವುದು ಈ ದಿನದ ಉದ್ದೇಶವಾಗಿದೆ. ಆದರೆ ಮರ್ಯಾದೆಗೇಡು ಹತ್ಯೆ, ಜೀತ ಪದ್ಧತಿ ಹಾಗೂ ರೈತರ ಆತ್ಮಹತ್ಯೆ, ಮಹಿಳೆಯರು ಹಾಗೂ ಮಕ್ಕಳ ಮೇಲಿನ ಅತ್ಯಾಚಾರ ಮುಂತಾದ ಘಟನೆಗಳಿಂದಾಗಿ ದಿನದಿಂದ ದಿನಕ್ಕೆ ಮಾನವ ಎಲ್ಲೋ ಮಾನವ ಹಕ್ಕುಗಳು ಕುಸಿಯುತ್ತಿಯೆನೋ ಎಂದರೂ ತಪ್ಪಾಗಲಾರದು. ಯಾಕೆಂದರೆ ಪ್ರಸ್ತುತ ಸಮಾಜದಲ್ಲಿ ನಡೆಯುವಂತಹ ಕೆಲವೊಂದು ಘಟನೆಗಳು ಮಾನವ ಹಕ್ಕುಗಳ ಅಸ್ಥಿತ್ವವನ್ನು ನಾಶಗೊಳಿಸುವಂತೆ ಕಾಣುತ್ತಿದೆ. ಇದೆಲ್ಲದರ ನಡುವೆಯೂ ಸಮಧಾನಕರ ಸಂಗತಿ ಅಂದರೆ, ಸಮಾಜದ ಇಂತಹ ನೀಚ ಕೃತ್ಯಗಳನ್ನು ನಿರ್ಮೂಲನೆ ಗೊಳಿಸುವಲ್ಲಿ ಮಾನವ ಹಕ್ಕುಗಳ ಪ್ರತಿಷ್ಟಾನ ಪ್ರಮುಖ ಪಾತ್ರ ವಹಿಸುತ್ತಿದೆ.

ಅದೊಂದು ಸರ್ವೈವಲ್ ಆಫ್ ಫಿಟ್ಟೆಸ್ಟ್ ಎಂಬ ಕ್ರಮವಿತ್ತು, ಆ ಅವಧಿಯಲ್ಲಿ ಮಾನವ ಹಕ್ಕು ಎಂಬ ಪರಿಕಲ್ಪನೆಯೇ ಶೂನ್ಯವಾಗಿತ್ತು, ಕ್ರಮೇಣ ನಾಗರಿಕತೆ ಬೆಳೆದಂತೆ ಮಾನವ ತನ್ನ ಜೀವಿಸುವ ಹಕ್ಕನ್ನು ಪ್ರತಿಪಾದಿಸಲು ಆರಂಬಿಸುತ್ತಿದ್ದಂತೆ ನಿಧಾನವಾಗಿ ಮಾನವ ಹಕ್ಕುಗಳ ಪರಿಕಲ್ಪನೆ ಜೀವ ಪಡೆಯಲಾರಂಭಿಸಿತು. ಇದರಿಂದ ಸ್ವಾತಂತ್ಯ ಪೂರ್ವ ಮತ್ತು ನಂತರ ಹಲವಾರು ರೀತಿಯಲ್ಲಿ ಶೋಷಣೆಗೆ ಒಳಗಾಗಿದ್ದರೂ ನಂತರದ ಅವಧಿಯಲ್ಲಿ ಅನೇಕ ರೀತಿಯ ಪ್ರಮುಖ ಬದಲಾವಣೆಗಳು ನಡೆದಿದೆ. ಮಾನವ ಹಕ್ಕುಗಳ ಕುರಿತು ಅರಿವು ಮೂಡತೊಡಗಿದ್ದು, ಇದರಿಂದ  ಸಮಾಜದಲ್ಲಿದ್ದಂತಹ ಅನೇಕ ಪಿಡುಗುಗಳು ನಿರ್ಮೂನೆ ಗೊಂಡಿವೆ ಇದರ ಜೊತೆಗೆ ಭಾರತೀಯರ ಪಾಲಿಗೆ ಸಂತಸದ ವಿಚಾರ ಅಂದ್ರೆ ವಿಶ್ವ ಸ್ವಾತಂತ್ಯ ವರದಿಯಲ್ಲಿ ಭಾರತದ ರಾಜಕೀಯ ಹಕ್ಕು ಹಾಗೂ ನಾಗರಿಕ ಸ್ವಾತಂತ್ರ್ಯಕ್ಕೆ ಉನ್ನತ ದರ್ಜೆಯ ಸ್ಥಾನವಿದೆ.

ಇದರೊಂದಿಗೆ ಸರ್ವೋಚ್ಚನ್ಯಾಯಾಲಯವು ಹಲವು ಪ್ರಕರಣಗಳ ತೀರ್ಪಿನಲ್ಲಿ ಮಾನವ ಹಕ್ಕುಗಳ ಮೂಲ ತತ್ವವನ್ನು ಎತ್ತಿ ಹಿಡಿದಿದೆ. ತನ್ನ ಸಂವಿಧಾನದ ಮೂಲಕ ಮಾನವ ಹಕ್ಕುಗಳನ್ನು ರಕ್ಷಸಿಸುವ ರಾಷ್ಟçಗಳಲ್ಲಿ ಭಾರತವೂ ಒಂದು. ಭಾರತದ ರಾಷ್ಟ್ರೀಯ ಮಾವ ಹಕ್ಕುಗಳ ಆಯೋಗವು ತನ್ನದೇ ಆಧಿಕಾರ, ಪ್ರಾಕಾರ್ಯ ಹೊಂದಿದ್ದು, ಮಾನವ ಹಕ್ಕುಗಳ ಉಲ್ಲಂಘನೆಗೆ ಸಂಬಂಧಿಸಿ ವಿಚಾರಣೆ, ಕಾರಾಗೃಹದಲ್ಲಿರವ ವ್ಯಕ್ತಿಗೆ ಸಿಗಬೇಕಾದ ಮಾನವ ಹಕ್ಕುಗಳ ಬಗೆಗಿನ ವಿಚಾರ,  ಮತ್ತು ಮಾನವ ಹಕ್ಕುಗಳ ಕ್ಷೇತ್ರದಲ್ಲಿ ನಡೆಯಬೇಕಾಗಿರುವ ಸಂಶೋಧನೆ ಬಗ್ಗೆ ಕಾಳಜಿ ವಹಿಸುತ್ತಿದೆ. ಹಾಗೆಯೇ ಮಾನವ ಹಕ್ಕುಗಳ ಕ್ಷೇತ್ರದಲ್ಲಿ ದುಡಿಯುತ್ತಿರುವ ಸರಕರೇತರ ಸಂಘ ಸಂಸ್ಥೆಗಳನ್ನು ಉತ್ತೇಜಿಸುವಂತಹ ಕಾರ್ಯಗಳು ನಡೆಯಬೆಕಾಗಿದೆ.

ರಾಜ್ಯ ಮಾನವ ಹಕ್ಕುಗಳ ಆಯೋಗವನ್ನು ರಚಿಸುವ ಮುಖಾಂತರ ಪ್ರಾದೇಶಿಕ ಮಟ್ಟದಲ್ಲಿ ಮಾನವ ಹಕ್ಕುಗಲ ಉಲ್ಲಂಘನೆಯಾಗದಂತೆ ಎಚ್ಚರ ವಹಿಸುವುದರೊಂದಿಗೆ ಮಾನವ ಹಕ್ಕುಗಳ ನ್ಯಾಯಾಲಯಗಳ ಸ್ಥಾಪನೆ ಉಲ್ಲಂಘನೆಯಿಂದ ಉಂಟಾಗುವ ಅಪರಾಧಗಳ ಶೀಘ್ರ ವಿಚಾರಣೆಗೆ ಅನುಕೂಲವಾಗುತ್ತದೆ. ವಿಶ್ವ ಮಾನವ ಹಕ್ಕು ಆಯೋಗಕ್ಕೆ ಭಾರತ, ನಾರ್ವೆ, ಸ್ವೀಡನ್, ಯುರೋಪ್, ಅಮೇರಿಕಾ, ನೆದರ್ ಲ್ಯಾಂಡ್, ಧನ ಸಹಾಯ ನೀಡುವ ಅಗ್ರ ರಾಷ್ಟ್ರಗಳಾಗಿವೆ. ಮಾನವ ಹಕ್ಕುಗಳನ್ನು ಗೌರವಿಸುವುದು ಮತ್ತು ರಕ್ಷಸುವುದುಪ್ರತಿ ಯೊಬ್ಬ ವ್ಯಕ್ತಿಯ ಜವಬ್ದಾರಿಯಾಗಿದ್ದು, ಮಾನವ ಹಕ್ಕುಗಳ ಪ್ರಾಮುಖ್ಯತೆ ಸಾರುವಂತಹ ಕೆಲಸ ಕೇವಲ ಒಂದು ದಿನಕ್ಕೆ ಸೀಮಿತವಾಗಿರದೆ ಅದು, ನಿತ್ಯ ನಿರಂತರ ಕಾರ್ಯವಾಗಬೇಕು.

Leave a Reply

Your email address will not be published. Required fields are marked *

error: Content is protected !!