ಆಯುರ್ವೇದಿಕ್ ವೈದ್ಯರಿಗೆ ಶಸ್ತ್ರಚಿಕಿತ್ಸೆಗೆ ಅನುಮತಿ ವಿರೋಧಿಸಿ ಡಿ.11 ಓಪಿಡಿ ಬಂದ್: ಐಎಂಎ
ಉಡುಪಿ: ಆಯುರ್ವೇದಿಕ್ ವ್ಯಾಸಂಗ ಮಾಡಿದ ವೈದ್ಯರು ಅಲೋಪತಿ ವೈದ್ಯರು ಮಾಡುವಂತಹ ಅನೇಕ ಶಸ್ತ್ರಚಿಕಿತ್ಸೆಗಳನ್ನು ಮಾಡಬಹುದು ಎಂದು ಕೇಂದ್ರ ಸರಕಾರ ಗಜೆಟ್ ನೋಟಿಫಿಕೇಶನ್ ಮೂಲಕ ಹೊರಡಿಸಿರುವ ಆದೇಶವನ್ನು ವಿರೋಧಿಸಿ ಡಿ.11 ರಂದು ಅಲೋಪತಿ ವೈದ್ಯರು ತುರ್ತು ಸೇವೆ ಹೊರತು ಪಡಿಸಿ ಉಳಿದ ಎಲ್ಲಾ ಓಪಿಡಿ ಸೇವೆಗಳನ್ನು ಸ್ಥಗಿತಗೊಳಿವುದಾಗಿ ಭಾರತೀಯ ವೈದ್ಯಕೀಯ ಸಂಘ ಹೇಳಿದೆ.
ಈ ಕುರಿತಂತೆ ಪತ್ರಿಕಾ ಪ್ರಕಟಣೆ ಹೊರಡಿಸಿರುವ ಸಂಘ, ಸೆಂಟ್ರಲ್ ಕೌನ್ಸಿಲ್ ಆಫ್ ಇಂಡಿಂಯನ್ ಮೆಡಿಸಿನ್ನ ಇತ್ತಿಚಿನ ನಡೆಯಿಂದ ಇಡೀ ದೇಶದ ಆದುನಿಕ ವೃತ್ತಿಯು ಕಷ್ಟಕ್ಕೆ ಒಳಗಾಗಿದೆ.
ವೈದ್ಯಕೀಯ ವ್ಯವಸ್ಥೆಯನ್ನು ಮಿಶ್ರಗೊಳಿಸುವುದನ್ನು ಭಾರತೀಯ ವೈದ್ಯಕೀಯ ಸಂಘ ತೀವ್ರವಾಗಿ ಖಂಡಿಸುತ್ತದೆ. ಇದು ಕೇವಲ ವೃತ್ತಿಯ ವಿಷಯವಲ್ಲ. ಇದು ಆರೋಗ್ಯ ರಕ್ಷಣೆ ಮತ್ತು ವಿತರಣಾ ವ್ಯವಸ್ಥೆಯ ಮೇಲೆ ಗಂಭೀರವಾದ ದುಷ್ಪರಿಣಾಮ ಉಂಟುಮಾಡುತ್ತದೆ.
ಅಲ್ಲದೆ ರೋಗಿಗಳ ಆರೋಗ್ಯ ರಕ್ಷಣೆಯ ಮಾಪನ ಬದಲಾಗಲಿದೆ. ಆದ್ದರಿಂದ ಅಸ್ತಿತ್ವ ಮತ್ತು ಆಸ್ಮಿತೆಗಾಗಿ ಧೀರ್ಘ ಕಾಲೀನ ಹೋರಾಟಕ್ಕೆ ಭಾರತೀಯ ವೈದ್ಯಕೀಯ ಸಂಘ ಸಿದ್ಧವಾಗಿದ್ದು, ಸ್ನಾತಕೋತ್ತರ ಆಯುರ್ವೇದ ಶಿಕ್ಷಣ ತಿದ್ದುಪಡಿ ನಿಯಮಾವಳಿಗಳ ಅಧಿಸೂಚನೆಯನ್ನು ಹಿಂಪಡೆಯಬೇಕೆಂದು ಭಾರತೀಯ ವೈದ್ಯಕೀಯ ಸಂಘ ಆಗ್ರಹಿಸಿದೆ.