ಶಿರ್ವದ 8 ಮಂದಿ, ಮುದರಂಗಡಿಯ ಮೂವರಲ್ಲಿ ಕೊರೋನಾ ಸೋಂಕು ದೃಢ: 6 ಮನೆ ಸೀಲ್ ಡೌನ್
ಉಡುಪಿ: ಮಹಾರಾಷ್ಟ್ರದಿಂದ ಆಗಮಿಸಿ ಕ್ವಾರೆಂಟೈನ್ ನಲ್ಲಿದ್ದ ಶಿರ್ವ ಗ್ರಾಮ ಪಂಚಾಯತ್ ವ್ಯಾಪ್ತಿಯ 8 ಮಂದಿ ಮತ್ತು ಮುದರಂಗಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಮೂವರಲ್ಲಿ ಇಂದು ಕೊರೋನಾ ಸೋಂಕು ದೃಢಪಟ್ಟಿದೆ.
ಅವರು ವಾಸವಾಗಿದ್ದ ಒಟ್ಟು 6 ಮನೆಗಳನ್ನು ಉಡುಪಿ ಜಿಲ್ಲಾಡಳಿತ ಇಂದು ಸೀಲ್ ಡೌನ್ ಮಾಡಿದೆ.
ಶಿರ್ವದ 30 ವರ್ಷದ ವ್ಯಕ್ತಿ, ನಾಯ್ದಡ್ಡುವಿನ 38 ವರ್ಷದ ವ್ಯಕ್ತಿ, ಮಾಣಿಬೆಟ್ಟು 48 ವರ್ಷದ ಮಹಿಳೆ, 59 ವರ್ಷದ ಪುರುಷ, 55 ವರ್ಷದ ಮಹಿಳೆ ಹಾಗೂ 8 ವರ್ಷದ ಮಗು, ಅಟ್ಟಿಂಜೆ ಗುಡ್ಡೆಮಾರಿನ 55 ವರ್ಷದ ಮಹಿಳೆ ಮತ್ತು ಎಡ್ಮೇರ್ ಮೇಲ್ ಬೆಳಂಜಾಲೆಯ 49 ವರ್ಷದ ವ್ಯಕ್ತಿ ಸೇರಿದಂತೆ ಇವರಲ್ಲಿ ಕೋವಿಡ್ ಸೋಂಕು ಪಾಸಿಟಿವ್ ಪತ್ತೆಯಾದ ಕಾರಣ ಇವರಿದ್ದ ಮನೆಗಳನ್ನು ಕಂಟೈನ್ಮೆಂಟ್ ಪ್ರದೇಶಗಳೆಂದು ಘೋಷಿಸಲಾಗಿದೆ.
ಮುದರಂಗಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಪಿಲಾರುನ ಒಂದೇ ಕುಟುಂಬದ 39 ವರ್ಷದ ಪುರುಷ, 26 ವರ್ಷದ ಮಹಿಳೆ ಹಾಗೂ 3 ವರ್ಷದ ಮಗುವಿಗೆ ಕೋವಿಡ್ ಸೋಂಕು ತಗಲಿದ್ದು ಇಲ್ಲಿನ ಒಂದು ಮನೆಯನ್ನು ಸೀಲ್ ಡೌನ್ ಮಾಡಲಾಗಿದೆ.