ಉಡುಪಿ ಸಿಟಿ ಬಸ್ ನಿಲ್ದಾಣದ ಬಳಿ ಇಬ್ಬರು ಬಾಲಕರ ಅಪಹರಣ?

ಉಡುಪಿ: ಆಡುತ್ತಿದ್ದ ಇಬ್ಬರು ಬಾಲಕರು ನಾಪತ್ತೆಯಾಗಿರುವ ಘಟನೆ ಉಡುಪಿಯ ಸಿಟಿ ಬಸ್ ನಿಲ್ದಾಣದ ಬಳಿ ನಡೆದಿದೆ.

ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಚಿಕ್ಕಪೇಟೆಯ ನಿವಾಸಿ ನಾಗರಾಜ ಎಂಬವರ ಮಗ ಸಂತೋಷ (11) ಹಾಗೂ ನಾಗರಾಜ ಅವರ ಪತ್ನಿಯ ತಂಗಿ ಮಂಗಳ ಎಂಬವರ ಮಗ ವಿಷ್ಣು (9) ನಾಪತ್ತೆಯಾಗಿರುವ ಬಾಲಕರು.

ಶಾಲೆಗೆ ರಜೆ ಇದ್ದ ಕಾರಣ ಸಂತೋಷ್ ತನ್ನ ಚಿಕ್ಕಮ್ಮ ಮಂಗಳರವರ ಜೊತೆ ಉಡುಪಿಗೆ ಬಂದಿದ್ದ. ಈ ನಡುವೆ ಡಿ3 ರಂದು ಚಿಕ್ಕಮ್ಮನ ಮಗ ವಿಷ್ಣುವಿನೊಂದಿಗೆ ಉಡುಪಿಯ ಸಿಟಿ ಬಸ್ ನಿಲ್ದಾಣದ ಬಳಿ ಆಟವಾಡುತ್ತಿದ್ದ, ಬಳಿಕ ಸುಮಾರು 9 ಗಂಟೆ ವೇಳೆಗೆ ಪರಿಶೀಲಿಸಿದಾಗ ಸಂತೋಷ್ ಹಾಗೂ ವಿಷ್ಣು ಸ್ಥಳದಲ್ಲಿ ಇಲ್ಲದಿರುವುದು ತಿಳಿದು ಬಂದಿದೆ.

ಬಾಲಕರಿಬ್ಬರನ್ನು ಎಲ್ಲಾ ಕಡೆ ಹುಡುಕಾಡಿದರೂ ಎಲ್ಲೂ ಪತ್ತೆಯಾಗದ ಕಾರಣ ಬಾಲಕರನ್ನು ಯಾರೋ ಪುಸಲಾಯಿಸಿ ಕರೆದುಕೊಂಡು ಹೋಗಿರಬಹುದು ಅಥವಾ ಅಪಹರಿಸಿರಬಹುದು ಎಂದು ಶಂಕಿಸಲಾಗಿದೆ. ಈ ಬಗ್ಗೆ ನಾಗರಾಜ ಡಿ.7ರಂದು ನೀಡಿದ ದೂರಿನಂತೆ  ಉಡುಪಿ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

Leave a Reply

Your email address will not be published. Required fields are marked *

error: Content is protected !!