ಶಿವಮೊಗ್ಗ: ನಿಷೇಧಾಜ್ಞೆ ಮತ್ತೆ ವಿಸ್ತರಣೆ

ಶಿವಮೊಗ್ಗ: ಶಿವಮೊಗ್ಗದಲ್ಲಿ ನಡೆದ ಗಲಾಟೆ ವಿಚಾರಕ್ಕೆ ಸಂಬoಧಿಸಿ ವಿಧಿಸಲಾಗಿದ್ದ ಸೆಕ್ಷನ್ 144 ನಿಷೇಧಾಜ್ಞೆಯನ್ನು ಮತ್ತೆ ವಿಸ್ತರಿಸಲಾಗಿದೆ. ಈ ನಿಷೇಧಾಜ್ಞೆಯನ್ನು ಡಿ. 9 ರ ಬುಧವಾರ ಬೆಳಗ್ಗೆ 10 ಗಂಟೆವರೆಗೆ ವಿಸ್ತರಿಸಿ ತಹಶೀಲ್ದಾರ್ ಆದೇಶ ನೀಡಿದ್ದಾರೆ.

ಕಳೆದ ಗುರುವಾರ (ಡಿ.3) ದಂದು ನಗರದಲ್ಲಿ ಬಜರಂಗದಳ ಕಾರ್ಯಕರ್ತನ ಮೇಲೆ ಹಲ್ಲೆ ನಡೆದಿತ್ತು. ಇದರ ಬೆನ್ನಲ್ಲೆ ಶಿವಮೊಗ್ಗದಲ್ಲಿ ಗಲಾಟೆಗಳು ಆರಂಭಗೊoಡವು. ಈ ಗಲಾಟೆ ನಿಯಂತ್ರಿಸಲು ಡಿ.3ರ ಮಧ್ಯಾಹ್ನದಿಂದ ಡಿ. 5ರ ಬೆಳಗ್ಗೆ 10 ವರೆಗೆ ನಿಷೇದಾಜ್ಞೆ ಜಾರಿಗೊಳಿಸಲಾಗಿತ್ತು. ಆದ್ರೆ ಪರಿಸ್ಥಿತಿಯನ್ನು ಹತೋಟಿಗೆ ತರುವ ಸಲುವಾಗಿ ಈ ಹಿಂದೆ  ನಿಷೇದಾಜ್ಞೆಯನ್ನು ಡಿ.7 ರವರೆಗೆ ವಿಸ್ತರಿಸಿ ಆದೇಶ ಹೊರಡಿಸಲಾಗಿತ್ತು.

ನಿಷೇಧಾಜ್ಞೆ ಮುಂದುವರಿಸುವoತೆ ಪೊಲೀಸ್ ಇಲಾಖೆಯಿಂದ ಪ್ರಸ್ತಾವನೆ ಬಂದ ಹಿನ್ನೆಲೆಯಲ್ಲಿ, ಶಿವಮೊಗ್ಗ ತಹಸೀಲ್ದಾರ್ ಎನ್ .ಜೆ.ನಾಗರಾಜ್ ಮುಂಜಾಗ್ರತಾ ಕ್ರಮವಾಗಿ ಇದೀಗ ಮತ್ತೆ ನಿಷೇಧಾಜ್ಞೆಯನ್ನು ಬುಧವಾರದವರೆಗೆ ವಿಸ್ತರಿಸುವಂತೆ ಸೂಚನೆ ನೀಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!