ಗುಜರಾತ್: 19 ಬಾರಿ ಅದುರಿದ ಭೂಮಿ – ಆತಂಕದಲ್ಲಿ ಜನ
ಅಹಮದಾಬಾದ್: ಗುಜರಾತ್ನಲ್ಲಿ ಇಂದು ನಸುಕಿನ ಜಾವ ಭೂಮಿ ಕಂಪಿಸಿದ್ದು, ಜನರು ಭಯಭೀತರಾಗಿದ್ದಾರೆ. ಈಗಾಗಲೆ ಮುಂಜಾನೆಯಿoದ 19 ಬಾರಿ ಭೂಮಿ ಕಂಪಿಸಿದ್ದು, ಗುಜರಾತಿನ ಗಿರ್ ಸೋಮನಾಥ್ ಜಿಲ್ಲೆಯ ಹಲವು ಭಾಗಗಳಲ್ಲಿ ಕಂಪನ 1.7 ರಿಂದ 3.3ರಷ್ಟು ತೀವ್ರತೆ ಹೊಂದಿತ್ತು ಎಂದು ಭೂವಿಜ್ಞಾನ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಕಳೆದ ಜೂನ್ನಿಂದ ಅನೇಕ ಬಾರಿ ಗುಜರಾತ್ನ ವಿವಿಧ ಪ್ರದೇಶಗಳಲ್ಲಿ ಭೂಮಿ ಕಂಪಿಸುತ್ತಿರುವ ಹಿನ್ನೆಲೆಯಲ್ಲಿ ಯಾವಾಗ ಏನು ಅನಾಹುತ ಆಗುವುದೋ ಎಂಬ ಆತಂಕ ಜನರಲ್ಲಿ ಮನೆಮಾಡಿದೆ. ಈ ನಡುವೆ, ಗುಜರಾತಿನ ಸೌರಾಷ್ಟ್ರ ಪ್ರದೇಶದಲ್ಲಿ ಕಳೆದ ಎರಡು ಮೂರು ತಿಂಗಳಿನಿoದ ಭಾರೀ ಮಳೆಯಾಗುತ್ತಿರುವುದರಿಂದ ಭೂ ಕಂಪನ ಸಂಭವಿಸಿರುವ ಸಾಧ್ಯತೆ ಇದ್ದು ಜನರು ಆತಂಕಕ್ಕೆ ಒಳಗಾಗುವ ಅವಶ್ಯಕತೆ ಇಲ್ಲ ಎಂದು ಅಧಿಕಾರಿಗಳು ಮನವಿ ಮಾಡಿಕೊಂಡಿದ್ದಾರೆ. ಇದರೊಂದಿಗೆ ಇಂದು ಘಟಿಸಿರುವ ಭೂಕಂಪನದಿoದ ಯಾವುದೇ ಪ್ರಾಣ ಹಾಗೂ ಆಸ್ತಿ ಹಾನಿ ಆದ ಬಗ್ಗೆ ವರದಿಯಾಗಿಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. |