ಮೂಳೂರು ಮಸೀದಿ: ಎಂಜೆಎಂ ಆ್ಯಪ್ ಬಿಡುಗಡೆ
ಪಡುಬಿದ್ರಿ: ಜಿಲ್ಲೆಯ ಪ್ರತಿಷ್ಠಿತ ಜಮಾಅತ್‌ಗಳಲ್ಲಿ ಒಂದಾಗಿರುವ ಮೂಳೂರು ಜುಮ್ಮಾ ಮಸೀದಿ ಜಮಾಅತ್‌ನವರಿಗಾಗಿ ಅಧಿಕೃತ ಮೊಬೈಲ್ ಅಪ್ಲಿಕೇಶನ್ (ಆ್ಯಪ್) ಎಂಜೆಎಂ ಆ್ಯಪ್ ಪರಿಚಯಿಸಿದೆ. ಮೂಳೂರು, ಉಚ್ಚಿಲ, ಪಯ್ಯಾರ್, ಕೊಪ್ಪಲಂಗಡಿ, ಪಣಿಯೂರು ಒಳಗೊಂಡು ಜಿಲ್ಲೆಯಲ್ಲಿ ಅತೀ ದೊಡ್ಡ ಜಮಾಅತ್‌ಗಳಲ್ಲಿ ಮೂಳೂರು ಜಮಾಅತ್ ಒಂದು. ಜಮಾಅತ್ ವ್ಯಾಪ್ತಿಯಲ್ಲಿ 624 ಮನೆಗಳಿವೆ. ಎಲ್ಲ ವಿವರಗಳ ಡಿಜಿಟಲೀಕರಣ ಆಗಿದೆ. ಇದೀಗ ಮಸೀದಿಯ ಎಂಜೆಎಂ ಆ್ಯಪ್ ಸಜ್ಜಾಗಿದೆ. ಜಮಾತರು ಎಲ್ಲಿದ್ದರೂ ತಮ್ಮ ಮಸೀದಿ ಚಂದಾ ವಿವರವನ್ನು ಆ್ಯಪ್ ಮೂಲಕ ಪಡೆಯಬಹುದು. ಜಮಾತಿನ ಸಂಪೂರ್ಣ ಮಾಹಿತಿ, ಯೋಜನೆಗಳು, ಸಮಿತಿ, ಸಿಬ್ಬಂದಿ ವಿವರ ಮತ್ತು ಸಂಪರ್ಕ ಸಂಖ್ಯೆ, ಸಮಯ, ಹಿಜರಿ ದಿನ ಹಾಗೂ ಐದು ವಕ್ತ್ ನಮಾಜಿನ ಸಮಯ ಲಭ್ಯವಿದೆ’ ಎಂದು ಪ್ರಧಾನ ಕಾರ್ಯದರ್ಶಿ ವೈಬಿಸಿ ಬಶೀರ್ ಅಲಿ ವಿವರಿಸಿದರು. ಆ್ಯಪ್ ಅನ್ನು ಮತ್ತಷ್ಟು ಸಂಪರ್ಕ ಸಾಧನ ಮಾಡಲಾಗುವುದು . ಜಮಾ ಅತಿನ ಮುಖ್ಯಸದಸ್ಯ (ಯಜಮಾನ) ತನ್ನ ಅಂಡ್ರಾಯ್ಡ್ ಮೊಬೈಲ್‌ನಲ್ಲಿ ಈ ಆ್ಯಪ್ ಅಳವಡಿಸಿದರೆ ಅವರ ಜಮಾತ್ ದಾಖಲಾತಿ ಸಂಖ್ಯೆ, ಮಸೀದಿಗೆ ನೀಡಿದ ಮೊಬೈಲ್ ಸಂಖ್ಯೆಯನ್ನು ಪಾಸ್‌ವರ್ಡ್ ಆಗಿ ಉಪಯೋಗಿಸಿ ಸೈನ್‌ಇನ್ ಆಗಬೇಕು. ನಂತರ ಬೇಕಿದ್ದಲ್ಲಿ ಮೊಬೈಲ್ ಸಂಖ್ಯೆಯ ಪಾಸ್‌ವರ್ಡ್ ಬದ ಲಾವಣೆ ಮಾಡಬಹುದು. ಆ್ಯಪ್ ಮೂಲಕ ಸಂಪೂರ್ಣ ಮಾಹಿತಿ ಪಡೆದುಕೊಳ್ಳಬಹುದು’ ಎಂದು ಅಪ್ಲಿಕೇಶನ್ ತಯಾರಿಸಿದ ಜಮಾತ್ ಸದಸ್ಯ ಫಾರೂಕ್ ಉಚ್ಚಿಲ ತಿಳಿಸಿದರು. ಮಸೀದಿ ಸಮಿತಿಯ ಉಪಾಧ್ಯಕ್ಷ ಸೈಯ್ಯದ್ ಮುರಾದ್ ಅಲಿ ಆ್ಯಪ್‌ನು ಬಿಡುಗಡೆಗೊಳಿಸಿದರು. ಮುದರ್ರಿಸ್ ಅಬ್ದುಲ್ಹಾ ರಹಿಮಾನ್ ಮದನಿ ಉಸ್ತಾದ್ , ಹೈದರ್ ಅಲಿ ಅಹ್ಸನಿ ಉಸ್ತಾದ್, ಉಪಾಧ್ಯಕ್ಷ ಜಿ.ಎಂ. ಉಮ್ಮರಬ್ಬ , ಗೌರವಾಧ್ಯಕ್ಷ ಮೊಯಿದಿನ್ ದರ್ಕಾಸ್, ಕೋಶಾಧಿಕಾರಿ ಅಬ್ಬು ಹಾಗೂ ಇಬ್ರಾಹಿಂ ನಹೀಮಿ ಉಸ್ತಾದ್, ಕಾರ್ಯದರ್ಶಿಗಳಾದ ಅಬ್ದುಲ್ ಹಮೀದ್ ಯೂಸುಫ್ ಮತ್ತು ಫೈಝಲ್ ಇಬ್ರಾಹಿಂ ಇದ್ದರು. |