ಕಾಂಗ್ರೆಸ್ ಜೊತೆಗಿನ ಮೈತ್ರಿಯಿಂದ ನನ್ನ ಹೆಸರು ಹಾಳಾಗಿದೆ: ಎಚ್‌ಡಿಕೆ

ಮೈಸೂರು: ಕಾಂಗ್ರೆಸ್ ಜತೆಗಿನ ಮೈತ್ರಿ ಸರಕಾರದಿಂದ ನನಗಿದ್ದ ಒಳ್ಳೆಯ ಹೆಸರು, ವರ್ಚಸ್ಸು ಸರ್ವನಾಶವಾಯಿತು ಎಂದು ಮಾಜಿ ಮುಖ್ಯ ಮಂತ್ರಿ ಎಚ್‌ಡಿ ಕುಮಾರ ಸ್ವಾಮಿ ಹೇಳಿದ್ದಾರೆ. ಈ ಬಗ್ಗೆ ಇಂದು ಮೈಸೂರಿನಲ್ಲಿ ಮಾತನಾಡಿದ ಅವರು, ಸಿದ್ಧರಾಮಯ್ಯ ಅವರ ಕುತಂತ್ರ ಹಾಗೂ ಹೆಚ್ ಡಿ ದೇವೇಗೌಡರ ಭಾವನಾತ್ಮಕ ಮಾತಿಗೆ ಕಟ್ಟುಬಿದ್ದು ನಾನು ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಂಡೆ. ಇದರಿಂದ ಕಾಂಗ್ರೆಸ್- ಜೆಡಿಎಸ್ ಮೈತ್ರಿ ಸರ್ಕಾರದಲ್ಲಿ ಮುಖ್ಯಮಂತ್ರಿಯಾಗಿ ಹೆಸರು ಕೆಡಿಸಿಕೊಂಡೆ.


 2006ರಲ್ಲಿ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ರಾಜ್ಯದಲ್ಲಿ ನಾನು ಒಳ್ಳೆಯ ಹೆಸರು ಸಂಪಾದಿಸಿದ್ದೆ, ಆದರೆ, ನನ್ನ ಹೆಸರು ಕೆಡಿಸಲೆಂದು ಕಾಂಗ್ರೆಸ್ ಕುತಂತ್ರ ಮಾಡಿ, ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರಕಾರ ರಚಿಸುವಂತೆ ಮಾಡಿತು. ಕಾಂಗ್ರೆಸ್ ಜೊತೆಗಿನ ಮೈತ್ರಿ ಸರಕಾರದ ಕುರಿತು ಅವರ ಮಾತನ್ನು ಕೇಳದೆ ಇರುತ್ತಿದ್ದರೆ ನಾನು ಈಗಲೂ ಮುಖ್ಯಮಂತ್ರಿಯಾಗಿರುವ ಅವಕಾಶ ಇರುತ್ತಿತ್ತು. ಬಿಜೆಪಿ ಜೊತೆ ಮೈತ್ರಿಯಿಂದಲೂ ನನಗೆ ಇಷ್ಟೊಂದು ದ್ರೋಹ ಆಗಿರಲಿಲ್ಲ. ನಾನು ಮತ್ತೆಂದೂ ಇಂಥ ತಪ್ಪು ಮಾಡುವುದಿಲ್ಲ ಎಂದು ಹೇಳಿದ್ದಾರೆ.

Leave a Reply

Your email address will not be published. Required fields are marked *

error: Content is protected !!