ಉಡುಪಿಗೆ ತಟ್ಟದ ಕರ್ನಾಟಕ ಬಂದ್ ಬಿಸಿ
ಉಡುಪಿ: ಮರಾಠ ಅಭಿವೃದ್ಧಿ ನಿಗಮ ಸ್ಥಾಪನೆಯನ್ನು ವಿರೋಧಿಸಿ ಇಂದು ಕನ್ನಡ ಪರ ಸಂಘಟನೆಗಳು ಕರೆ ನೀಡಿದ್ದ ಬಂದ್‌ನ ಬಿಸಿ ಉಡುಪಿಗೆ ತಟ್ಟಿಲ್ಲ.
ಉಡುಪಿ ನಗರದಲ್ಲಿ ಬಂದ್‌ಗೆ ಯಾವುದೇ ಬೆಂಬಲ ವ್ಯಕ್ತವಾಗಿಲ್ಲದ ಕಾರಣ ಇಂದು ಮುಂಜಾನೆಯಿಂದಲೆ ಬಸ್‌ಗಳು ರಸ್ತೆಗಿಳಿದ್ದು, ಅಂಗಡಿ ಮುಂಗಟ್ಟುಗಳು ಎಂದಿನಂತೆ ತೆರೆದುಕೊಂಡಿದೆ. ಸದ್ಯ ಉಡುಪಿ ನಗರದಲ್ಲಿ ಜನಜೀವನ ಯಥಾ ಸ್ಥಿತಿಯಲ್ಲಿದ್ದು, ಸಾರ್ವಜನಿಕರು ತಮ್ಮ ನಿತ್ಯದ ಕಾರ್ಯಗಳಲ್ಲಿ ಎಂದಿನಂತೆ ತೊಡಗಿಕೊಂಡದ್ದಾರೆ.