ಉಡುಪಿ: ಸಾರಿಗೆ ಇಲಾಖೆಯ 26 ಸೇವೆಗಳು ಸಕಾಲದಡಿ

ಉಡುಪಿ, ಡಿ. 4: ಉಡುಪಿ ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ ಸಾರ್ವಜನಿಕರ
ಸಮ್ಮುಖದಲ್ಲಿ ಅಧೀಕ್ಷಕರು, ಕಾರ್ಯನಿರ್ವಾಹಕರುಗಳೊಂದಿಗೆ ಸಾರಿಗೆ ಸಕಾಲ ಸಪ್ತಾಹವನ್ನು ಆಚರಿಸಲಾಯಿತು. ಸಾರಿಗೆ ಇಲಾಖೆಯ ಸೇವೆಗಳಾದ ಕಲಿಕಾ ಲೈಸೆನ್ಸ್, ಚಾಲನಾ ಲೈಸೆನ್ಸ್, ವಾಹನಗಳ ನೋಂದಣಿ, ದ್ವಿಪ್ರತಿ ಲೈಸೆನ್ಸ್, ನೋಂದಣಿ ಪ್ರಮಾಣ ಪತ್ರದ ದ್ವಿಪ್ರತಿ, ಕಲಿಕಾ ಲೈಸೆನ್ಸ್ನಲ್ಲಿ ವಿಳಾಸ ಬದಲಾವಣೆ, ಚಾಲನಾ ತರಬೇತಿ ಶಾಲೆಯ
ಪರವಾನಿಗೆ ನವೀಕರಣ ಸೇರಿ ಒಟ್ಟು 26 ಸೇವೆಗಳು ಸಕಾಲದಡಿ ಬರಲಿದ್ದು, ಸಾರ್ವಜನಿಕರು ಅರ್ಜಿಗಳನ್ನು ಸಕಾಲದ ಅಡಿಯಲ್ಲಿ ಸಲ್ಲಿಸಬೇಕು.

ಅರ್ಜಿ ಸಲ್ಲಿಸಲು ಸಕಾಲದಡಿಯಲ್ಲಿ ಸ್ವೀಕೃತವಾದ ಅರ್ಜಿಗಳಿಗೆ 15 ಅಂಕಿಯ ಜಿ.ಎಸ್.ಇ ಸಂಖ್ಯೆಯನ್ನು ತಪ್ಪದೆ ನೀಡಬೇಕು. ಇದರ ಜೊತೆಗೆ ಅರ್ಜಿಯ ಪ್ರತಿಯೊಂದು ಹಂತದಲ್ಲಿಯೂ ಅರ್ಜಿ ವಿಲೇವಾರಿಗೆ ಅರ್ಜಿದಾರರ ಮೊಬೈಲ್ ಸಂಖ್ಯೆಗೆ ಸಂದೇಶ ರವಾನೆಯಾಗುತ್ತದೆ. ನಿಗದಿತ ಕಾಲಮಿತಿಯೊಳಗೆ ಅರ್ಜಿಗಳನ್ನು ಕಾನೂನಿನ ಪರಿಮಿತಿಯಲ್ಲಿ ಇತ್ಯರ್ಥಗೊಳಿಸಲಾಗುತ್ತದೆ. ಸಾರ್ವಜನಿಕರು ಸಕಾಲ ಯೋಜನೆಯ ಸದುಪಯೋಗ ಪಡಿಸಿಕೊಳ್ಳುವಂತೆ ಜಿಲ್ಲೆಯ ಪ್ರಭಾರ ಪ್ರಾದೇಶಿಕ ಸಾರಿಗೆ ಅಧಿಕಾರಿ
ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!