15 ದಿನದಲ್ಲಿ 12 ಬಾರಿ ಪೆಟ್ರೋಲ್ – ಡೀಸೆಲ್ ಬೆಲೆ ಏರಿಕೆ
ನವದೆಹಲಿ: ದೇಶದ ಪ್ರಮುಖ ತೈಲ ಕಂಪನಿಗಳು ಶುಕ್ರವಾರ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಮತ್ತೆ ಹೆಚ್ಚಿಸಿದ್ದು, ಕಳೆದ 15 ದಿನಗಳಲ್ಲಿ 12 ಬಾರಿ ತೈಲ ಬೆಲೆ ಏರಿಕೆಯಾಗಿದೆ. ಇದರೊಂದಿಗೆ ದೆಹಲಿಯಲ್ಲಿ ಡೀಸೆಲ್ ಬೆಲೆ 73 ರೂ.ಗೆ ಹಾಗೂ ಪೆಟ್ರೋಲ್ ಬೆಲೆ 83.50 ರೂ.ಗೆ ತಲುಪಿದೆ.
ಇಂದು ಡೀಸೆಲ್ ಬೆಲೆಯನ್ನು ಪ್ರತಿಲೀಟರ್ ಗೆ 23 ಪೈಸೆ ಹಾಗೂ ಪೆಟ್ರೋಲ್ ಬೆಲೆಯನ್ನು ಪ್ರತಿ ಲೀಟರ್‌ಗೆ 20 ಪೈಸೆ ಹೆಚ್ಚಿಸಲಾಗಿದೆ.
ಸುಮಾರು ಎರಡು ತಿಂಗಳವರೆಗೆ ಸ್ಥಿರವಾಗಿದ್ದ ಎರಡೂ ಇಂಧನಗಳ ಬೆಲೆ ನವೆಂಬರ್ 20 ಮೊದಲ ಬಾರಿಗೆ ಹೆಚ್ಚಳವಾಯಿತು. ನವೆಂಬರ್ 20 ರಿಂದು 12 ಬಾರಿ ತೈಲ ಬೆಲೆ ಏರಿಕೆಯಾಗಿದೆ. ಪರಿಣಾಮ ದೆಹಲಿಯಲ್ಲಿ ಪೆಟ್ರೋಲ್ 82.86 ಮತ್ತು ಡೀಸೆಲ್ 73.07 ರೂ.ಗೆ ಏರಿಕೆಯಾಗಿದೆ.
ಇನ್ನು ದೇಶದ ವಾಣಿಜ್ಯ ನಗರಿ ಮುಂಬೈಯಲ್ಲಿ ಪೆಟ್ರೋಲ್ ಲೀಟರ್‌ಗೆ 89.52 ರೂ. ಹಾಗೂ ಡೀಸೆಲ್ ಲೀಟರ್‌ಗೆ 77.42 ರೂ.ಗೆ ಏರಿಕೆಯಾಗಿದೆ.