ಮೀನುಗಾರರ ಸಂಕಷ್ಟ ಪರಿಹಾರ ನಿಧಿಯ ಮೊತ್ತವನ್ನು ಕನಿಷ್ಟ 10 ಲಕ್ಷ ರೂ.ಗೆ ಏರಿಸುವಂತೆ ಪ್ರಮೋದ್ ಮಧ್ವರಾಜ್ ಒತ್ತಾಯ

ಮಂಗಳೂರಿನ ಮೀನುಗಾರಿಕಾ ದೋಣಿಯು ಮೀನುಗಾರಿಕೆ ಮುಗಿಸಿ ವಾಪಾಸ್ಸಾಗುವ ಸಂದರ್ಭ, ಸಮುದ್ರದ ಅಲೆಗೆ ದೋಣಿ ಮಗುಚಿ ಬಿದ್ದು ದೋಣಿಯಲ್ಲಿದ್ದ 25 ಜನರು ನೀರುಪಾಲಾಗಿದ್ದರು, ಅವರಲ್ಲಿ 19 ಮೀನುಗಾರರನ್ನು ಇತರ ದೋಣಿಯ ಮೀನುಗಾರರು ರಕ್ಷಿಸಿದ್ದು, ಕಾಣೆಯಾಗಿದ್ದ 6 ಮೀನುಗಾರರಲ್ಲಿ 4 ಮೀನುಗಾರರ ಮೃತ ದೇಹ ಪತ್ತೆಯಾಗಿದೆ, ನಾಪತ್ತೆಯಾಗಿರುವ ಇಬ್ಬರ ಪತ್ತೆಗೆ ಕಾರ್ಯಾಚರಣೆ ನಡೆಸಲಾಗುತ್ತಿರುವ ಮಾಹಿತಿ ಸಿಕ್ಕಿರುತ್ತದೆ. 

ಈ ಘಟನೆ ತೀವೃ ನೋವಿನ ಸಂಗತಿಯಾಗಿದ್ದುಇಂತಹ ಘಟನೆ ಮುಂದೆಂದು ನಡೆಯದಿರಲಿ ಮತ್ತು ಯಾವ ಮೀನುಗಾರನ ಜೀವಕ್ಕೂ ಪ್ರಾಣಾಪಾಯ ಸಂಭವಿಸದಿರಲಿ ಎಂದು ನಾವೆಲ್ಲರೂ ಸಮುದ್ರ ದೇವರಲ್ಲಿ ಪ್ರಾರ್ಥಿಸೋಣ.. 
ಅಗಲಿದ ಜೀವಕ್ಕೆ ಬೆಲೆ ಕಟ್ಟಲಾಗದು , ಸಂಕಷ್ಟದಲ್ಲಿ ಹೊಟ್ಟೆಪಾಡಿಗೆ ಸಮುದ್ರದಲ್ಲಿ ಜೀವಪಣಕಿಟ್ಟು ಹೋರಾಡಿ ಸಮುದ್ರದಲ್ಲಿ ಮಡಿದ ಜೀವವನ್ನೇ ನಂಬಿಕೊಂಡಿದ್ದ ಕುಟುಂಬಕ್ಕೆ ಸರಕಾರ ಗರಿಷ್ಟ ಪರಿಹಾರ ಧನ ಮಂಜೂರು ಮಾಡಿ ಅವರ ತಾತ್ಕಾಲಿಕ ಜೀವನೋಪಾಯಕ್ಕೆ ಸಹಾಯಮಾಡುವಂತೆ ಮನವಿ ಮಾಡುತ್ತೇನೆ.

ನಾನು ಮೀನುಗಾರಿಕಾ ಸಚಿವನಾಗಿದ್ದ ಸಂದರ್ಭ ಇಂತಹ ಪರಿಸ್ಥಿತಿಯಲ್ಲಿ ಕುಟುಂಬದವರ ಬೆಂಬಲಕ್ಕಾಗಿ 2 ಲಕ್ಷ ರೂಪಾಯಿದ್ದ ಮೀನುಗಾರರ ಸಂಕಷ್ಟ ಪರಿಹಾರ ನಿಧಿಯನ್ನು   6 ಲಕ್ಷ ರೂಪಾಯಿಗೆ ಏರಿಸಿ   ಸರಕಾರದ ವತಿಯಿಂದ ಆದೇಶ ಮಾಡಿಸಿ ನೊಂದ ಮೀನುಗಾರರ ಕುಟುಂಬಕ್ಕೆ ಆಧಾರ ನೀಡುವ ವ್ಯವಸ್ಥೆ ಮಾಡಿಸಿದ್ದೆನು..  ಮತ್ಸ್ಯಕ್ಷಾಮ ಮತ್ತು ಕೋರೊನಾ ಲಾಕ್ಡೌನ್ ನಂತಹ ಪರಿಸ್ಥಿತಿಯಲ್ಲಿ ಸಂಪೂರ್ಣ ನೆಲಕಚ್ಚಿರುವ ಉದ್ಯಮಗಳಲ್ಲಿ ಮೀನುಗಾರಿಕೆಯು ಒಂದು, ಮೀನುಗಾರರಿಗೆ ವಿಶೇಷ ಪ್ಯಾಕೇಜ್ ಘೋಷಣೆ ಮತ್ತು ಅನುದಾನ ಬಿಡುಗಡೆಯ ಜೊತೆಗೆ, ಮೀನುಗಾರರ ಸಂಕಷ್ಟ ಪರಿಹಾರ ನಿಧಿಯ ಮೊತ್ತವನ್ನು ಇನ್ನು ಮಂದೆ ಕನಿಷ್ಟ 10 ಲಕ್ಷ ರೂಪಾಯಿಗಳಿಗೆ ಏರಿಸುವಂತೆ ಮಾನ್ಯ ಮೀನುಗಾರಿಕಾ ಮಂತ್ರಿಗಳು ಮತ್ತು ಮಾನ್ಯ ಮುಖ್ಯಮಂತ್ರಿಯವರಲ್ಲಿ ವಿನಮ್ರ ಮನವಿ ಮಾಡುತ್ತೇನೆ.

ಪ್ರಮೋದ್ ಮಧ್ವರಾಜ್ , ಮಾಜಿ ಯುವಜನ ಸಬಲೀಕರಣ, ಕ್ರೀಡೆ ಮತ್ತು ಮೀನುಗಾರಿಕಾ ಸಚಿವರು ಕರ್ನಾಟಕ ಸರಕಾರ

Leave a Reply

Your email address will not be published. Required fields are marked *

error: Content is protected !!