ಉದ್ಯಾವರ: ಖಾಸಗಿ ಬಸ್ ಡಿಕ್ಕಿ, ಅಂಕುದ್ರು ನಿವಾಸಿ ಸ್ಥಳದಲ್ಲೇ ದಾರುಣ ಸಾವು
ಕಾಪು: (ಉಡುಪಿ ಟೈಮ್ಸ್ ವರದಿ) ರಾಷ್ಟ್ರೀಯಾ ಹೆದ್ದಾರಿ ಉದ್ಯಾವರ ಪೆಟ್ರೋಲ್ ಪಂಪು ಬಳಿ ನಿಂತಿದ್ದ ವ್ಯಕ್ತಿಯೊರ್ವರಿಗೆ ಮಂಗಳೂರಿನಿಂದ ಬರುತ್ತಿದ್ದ ಖಾಸಗಿ ಬಸ್ಸೊಂದು ಡಿಕ್ಕಿ ಹೊಡೆದ ಪರಿಣಾಮ ಅಂಕುದ್ರು ನಿವಾಸಿ ಸ್ಥಳದಲ್ಲೇ ಮೃತ ಪಟ್ಟ ಘಟನೆ ಬುಧವಾರ ರಾತ್ರಿ ನಡೆದಿದೆ.
ಉದ್ಯಾವರ ಅಂಕುದ್ರು ರಾಜು ಪೂಜಾರಿಯವರ ಮಗ ಸುನಿಲ್ (38) ಎಂಬವರು ರಾಷ್ಟೀಯಾ ಹೆದ್ದಾರಿ ಬಳಿ ನಿಂತಿದ್ದಾಗ ಮಂಗಳೂರಿನಿಂದ ಉಡುಪಿ ಕಡೆ ಬರುತ್ತಿದ್ದ ಪಿಟಿಸಿ ಬಸ್ ಡಿಕ್ಕಿ ಹೊಡೆದಿದೆ.
ಸುನಿಲ್ ಸೀಟ್ ಕುಶನ್ ಕೆಲಸ ಮಾಡುತ್ತಿದ್ದು, ಅವಿವಾಹಿತರಾಗಿದ್ದರೆಂದು ಕಾಪು ಪೊಲೀಸರು ತಿಳಿಸಿದ್ದಾರೆ.