ಉದ್ಯಾವರ ಬಿಲ್ಲವ ಮಹಾಜನ ಸಂಘ – ಅಧ್ಯಕ್ಷರಾಗಿ ಸಂತೋಷ್ ಕುಮಾರ್ ಆಯ್ಕೆ
ಉದ್ಯಾವರ: ಎಪ್ಪತ್ತೈದು ವರ್ಷಗಳ ಇತಿಹಾಸ ಇರುವ ಉದ್ಯಾವರ ಬಿಲ್ಲವ ಮಹಾಜನ ಸಂಘ ಇದರ ನೂತನ ಅಧ್ಯಕ್ಷರಾಗಿ ಸಂತೋಷ್ ಕುಮಾರ್ ಸಾಲ್ಮರ ಇವರು ಆಯ್ಕೆಯಾಗಿರುತ್ತಾರೆ.
ಉಪಾಧ್ಯಕ್ಷರಾಗಿ ಹರಿಶ್ಚಂದ್ರ ಯು., ಪ್ರಧಾನ ಕಾರ್ಯದರ್ಶಿಯಾಗಿ ವಿಶ್ವನಾಥ್ ಗಜನೆ ಪಿತ್ರೋಡಿ, ಕೋಶಾಧಿಕಾರಿಯಾಗಿ ಅನುಪ್ ಕುಮಾರ್, ಜೊತೆ ಕಾರ್ಯದರ್ಶಿಗಳಾಗಿ ವಿಜಯೇಂದ್ರ ಕುಮಾರ್ ಮೇಲ್ಪೇಟೆ ಹಾಗೂ ಸದಾನಂದ ಅಂಚನ್ ಆಯ್ಕೆಗೊಂಡರು ಹಾಗೂ 25 ಮಂದಿ ಕಮಿಟಿ ಸದಸ್ಯರು ಹಾಗೂ 19 ಮಂದಿ ಗುರಿಕಾರರನ್ನು ಒಳಗೊಂಡ ಆಡಳಿತ ಸಮಿತಿಯನ್ನು ರಚಿಸಲಾಯಿತು.