ಮಲ್ಪೆಯ ಏಳು ಮೀನುಗಾರರ ರಕ್ಷಣೆಗೆ ಸಹಕಾರಿಯಾದ ಬಿಎಸ್ಎನ್ಎಲ್-ಸ್ಕೈಲೊ 2- ವೇ ಸಂವಹನ ಸಾಧನ

ಉಡುಪಿ, ಡಿ.02, : ಮಹಾರಾಷ್ಟ್ರ ಕರಾವಳಿಯಲ್ಲಿ ನ. 26, ರಂದು ಮುಳುಗಿದ ‘ಮಥುರಾ’ ಬೋಟ್ನಲ್ಲಿ  ಮಲ್ಪೆಯ  ಮೀನುಗಾರರು ತಮ್ಮನ್ನು ತಾವು ರಕ್ಷಿಸಿಸಿಕೊಳ್ಳಲು ಬಿಎಸ್ಎನ್ಎಲ್-ಸ್ಕೈಲೊ 2- ವೇ ಸಂವಹನ ಸಾಧನಾ ಸಹಕರಿಯಾದ್ದರಿಂದ 7 ಮೀನುಗಾರರು ಪ್ರಾಣಾಪಾಯದಿಂದ ಪರಾಗಿದ್ದಾರೆ.

ತಾರಾನಾಥ್ ಕುಂದರ್ ಒಡೆತನದಲ್ಲಿದ್ದ ‘ಮಥುರಾ’  ಬೋಟ್ ನವೆಂಬರ್ 26ರಂದು ಮಹಾರಾಷ್ಟ್ರ ಕರಾವಳಿ ಭಾಗದಲ್ಲಿ ಮೀನುಗಾರಿಕೆ ನಡೆಸುತ್ತಿದ್ದಾಗ ಬೋಟ್ ಹಾನಿಗೊಳಗಾಗಿ ಮುಳುಗಲು ಪ್ರಾರಂಭಿಸುತ್ತಿದ್ದಂತೆ ಮೀನುಗಾರರಾದ ವಿನೋದ್ ಹರಿಕಂತ್ರ, ಮಹೇಶ್, ಲೋಕೇಶ್, ಶೇಖರ್, ಗಂಗಾಧರ್ ಜಟ್ಗಾ ಮೊಗೆರಾ, ನಾಗಪ್ಪ ನಾರಾಯಣ್ ಹರಿಕಾಂತ್ರ ಮತ್ತು ಅನಿಲ್ ಗತಬೀರ ಹರಿಕಾಂತ್ ಸಹಾಯಕ್ಕಾಗಿ ಬೊಬ್ಬೆ ಹೊಡೆಯುತ್ತ ಕಿರುಚುತ್ತಿದ್ದರು.

ಅದೃಷ್ಟವಶಾತ್  ಇದೆ ಸಂಧರ್ಭದಲ್ಲಿ  ಅವರ ಆಸುಪಾಸಿನಲ್ಲಿ ಬಿಎಸ್ಎನ್ಎಲ್-ಸ್ಕೈಲೊ 2-ವೇ ಸಂವಹನ ಸಾಧನವನ್ನು ಹೊಂದಿದ್ದ “ಮಹೂರ್” ಬೋಟ್ ನ ಸಿಬ್ಬಂದಿಗಳಿಗೆ ವಿಷಯ ತಿಳಿದು ಅವರನ್ನು ರಕ್ಷಿಸಲು ಸಹಾಯವಾಯಿತು. ಮಹಾರಾಷ್ಟ್ರ ಕರಾವಳಿಯಲ್ಲಿ ಮೀನುಗಾರಿಕೆ ನಡೆಸುತ್ತಿದ್ದ  “ಮಹೂರ್” ಎಂಬ ಹೆಸರಿನ ಬೋಟ್ ” ಉಪಗ್ರಹ ಆಧಾರಿತ ಬಿಎಸ್ಎನ್ಎಲ್-ಸ್ಕೈಲೊ 2-ವೇ ಸಂವಹನ  ತಂತ್ರಜ್ಞಾನ  ಉಪಕರಣವನ್ನು ಹೊಂದಿದ್ದು, ಈ  ವಿನೂತನ  ಉಪಕರಣದ ದ್ವಿಮುಖ ಸಂವಹನ ವ್ಯವಸ್ಥೆಯ ತಂತ್ರಜ್ಞಾನವನ್ನು ಬಳಸಿಕೊಂಡು ಅಪಾಯಕ್ಕೊಳಗಾದ ಮಥುರಾದ ಮಾಲೀಕರೊಂದಿಗೆ ಮತ್ತು  ಮಹಾರಾಷ್ಟ್ರ ಕರಾವಳಿ ಭದ್ರತೆ ಪಡೆಯವರೊಂದಿಗೆ ಸಂವಹನ ನಡೆಸಿ,ತೊಂದರೆಗೊಳಗಾಗಿ ಮುಳುಗುತ್ತಿರುವ  ದೋಣಿಯ ನಿಖರವಾದ ಸ್ಥಳವನ್ನು, ಗುರುತಿಸಿ ರಕ್ಷಣಾ ಕಾರ್ಯ  ನಡೆಸಲು  ಸಾಧ್ಯವಾಯಿತು.

ಜೊತೆಗೆ  ಕ್ಷಣ ಕ್ಷಣಕ್ಕೂ ತೊಂದರೆಗೊಳಗಾಗಿರುವ ಏಳು ಮೀನುಗಾರರ  ಸಂವಹನ ಮಾಡಿಕೊಂಡು  ಮೀನುಗಾರರ   ಪ್ರಾಣ ಉಳಿಸಲು ಸಹಾಯವಾಯಿತು.  ಈ ಸಂಧರ್ಭದಲ್ಲಿ ಮಾತನಾಡಿದ ತಾರನಾಥ್ ಕುಂದರ್  “ಮಥುರಾ  ಬೋಟ್” ಮಾಲೀಕರು, ತಮ್ಮ ಬೋಟಿನಲ್ಲಿದ್ದ ಸಿಬ್ಬಂದಿಗಳನ್ನು ರಕ್ಷಿಸಿದ್ದಕ್ಕಾಗಿ ಮಹಾರಾಷ್ಟ್ರ ಕರಾವಳಿ ಭದ್ರತೆ ಮತ್ತು “ಮಹೂರ್”  ಬೋಟಿನಲ್ಲಿದ್ದ ಸಿಬ್ಬಂದಿಗಳಿಗೆ  ”  ನನ್ನ ಹೃತ್ಪೂರ್ವಕ ಕೃತಜ್ಞತೆಗಳು ” “ಸಮುದ್ರದಲ್ಲಿ ಕೆಲವು  ಬೋಟ್ ಗಳು ಇಂತಹ ಆಧುನಿಕ ಸಂವಹನಗಳನ್ನು  ಹೊಂದಿದ್ದರಿಂದ ನನ್ನ ಸಿಬ್ಬಂದಿಯ ಕಿರುಚಾಟವನ್ನು ಕೇಳಲು ಸಾಧ್ಯವಾಯಿತು. ಮತ್ತು ಅವರು ನಮ್ಮ ಬೆಂಬಲಕ್ಕೆ ಬಂದಿದ್ದಕ್ಕಾಗಿ ಮತ್ತು ಮೀನುಗಾರರನ್ನು ಮಾತ್ರವಲ್ಲದೆ ಅವರ ಕುಟುಂಬವನ್ನೂ ಸಹ ವಿನಾಶದಿಂದ ರಕ್ಷಿಸಿದ್ದಕ್ಕಾಗಿ ಅವರಿಗೆ ನನ್ನಹೃತ್ಪೂರ್ವಕ ಕೃತಜ್ಞತೆಗಳು ”ಎಂದು ಹೇಳಿದರು, ಆದರೆ ಇಂತಹ ಆಧುನಿಕ ಸಂವಹನ ಸಾಧನಗಳು ಶೀಘ್ರದಲ್ಲೇ ಎಲ್ಲಾ ದೋಣಿಗಳಲ್ಲಿ ವ್ಯಾಪಕವಾಗಿ ಲಭ್ಯವಾಗಲಿ ಎಂದು ಅವರು ಆಶಿಸಿದರು. 

ಮುಂದೆಯೂ ಸಹ ಮೀನುಗಾರರರು ತುರ್ತು ಸಂಧರ್ಭಗಳಲ್ಲಿ  ಸಮಯೋಚಿತ  ಎಚ್ಚರಿಕೆಗಳನ್ನು  (sos) ಸಹಾಯಕ್ಕೆ ಕಳುಹಿಸಲು ಸಾದ್ಯವಾಗಲಿ ಎಂದರು. ಈ ಘಟನೆಯನ್ನು ದೃಡೀಕರಿಸಿದ, ಕರ್ನಾಟಕ ರಾಜ್ಯ ಸರ್ಕಾರದ ಮೀನುಗಾರಿಕಾ ಇಲಾಖೆಯ ಗಣೇಶ್ ಕೆ, ಅವರು  “ ದೇವರ ಅನುಗ್ರಹದಿಂದ ಮೀನುಗಾರರು ಸುರಕ್ಷಿತವಾಗಿದ್ದಾರೆ  ಮತ್ತು ಅವರ ಕುಟುಂಬಗಳಿಗೆ ಮರಳಿದ್ದಾರೆ ಎಂಬುದು ಸಂತೋಷದ ವಿಷಯ . ಬಿಎಸ್ಎನ್ಎಲ್-ಸ್ಕೈಲೊ. 2- ವೇ ತಂತ್ರಜ್ಞಾನವು ಅವರ ನೆರವಿಗೆ ಬಂದಿರುವುದು ನಿಜಕ್ಕೂ ಅದ್ಭುತವಾಗಿದೆ,  ಇಂದು ನಾವು     ಮೀನುಗಾರಿಕೆಯ ಸಂಧರ್ಭದಲ್ಲಿ ಪರಿಣಾಮಕಾರಿ ಸಂವಹನ ತಂತ್ರಜ್ಞಾನದ ಕೊರತೆಯಿಂದಾಗಿ ಅನೇಕ ಜೀವಗಳನ್ನು ಕಳೆದುಕೊಳ್ಳುತ್ತಿದ್ದೇವೆ ಎಂದು ನಾನು ಇಲ್ಲಿ ಒತ್ತಿ ಹೇಳಲು ಬಯಸುತ್ತೇನೆ.

ನಮ್ಮ ಜೀವನಾಡಿಯಾದ ಮೀನುಗಾರರಿಗೆ  ತಮ್ಮ ಜೀವಗಳನ್ನು ಉಳಿಸಲು ಕೊಳ್ಳಲು ಮಾತ್ರವಲ್ಲದೆ ಅವರ ಉತ್ಪಾದಕತೆಯನ್ನು ಸುಧಾರಿಸಲು ಸಹಕಾರಿಯಾಗಬಲ್ಲ ಇಂತಹ ಆಧುನಿಕ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳುವುದು  ಇಂದಿನ ಕಾಲಘಟ್ಟದಲ್ಲಿ ಬಹಳ  ಮುಖ್ಯವಾಗಿದೆ. ಅಂತಿಮವಾಗಿ ಅವರ ಜೀವನ ಶೈಲಿಯನ್ನು ಪರಿವರ್ತಿಸಿಕೊಳ್ಳಲು ಸಹಕಾರಿಯಾಗು ತ್ತದೆ  ಮತ್ತು ವಿಶ್ವಮಟ್ಟದಲ್ಲಿ ಸ್ಪರ್ಧಿಸಲು ಅವಕಾಶ ನೀಡಲಿದೆ. ಇಷ್ಟೇ ಅಲ್ಲದೆ  ಸಮುದ್ರಗಳಲ್ಲಿ ರಾಜ್ಯದ ಮೀನುಗಾರರ ಸುರಕ್ಷತೆ, ರಕ್ಷಣೆ ,ತಕ್ಷಣದ ಮತ್ತು ತುರ್ತು ಸವಾಲನ್ನು ಎದುರಿಸಲು ಸಹಾಯ  ಮಾಡಲಿದೆ. ಎಂದರು.

ಬಿಎಸ್ಎನ್ಎಲ್-ಸ್ಕೈಲೊ  2- ವೇ ಸಂವಹನ ಸಾಧನ: ಇಂದಿನ  ನೂತನ  ಸಂಪರ್ಕ ತಂತ್ರಜ್ಞಾನ ಹೊಂದಿರುವ ಈ ಉಪಕರಣವು ಸಮುದ್ರದಲ್ಲಿ ಕಾರ್ಯ ನಿರ್ವಹಿಸುತ್ತಿರುವ  ಮೀನುಗಾರರಿಗೆ  ಮೊಬೈಲ್ ಸಾಧನಗಳೊಂದಿಗೆ ಸಮಯೋಚಿತ (SOS) ಎಚ್ಚರಿಕೆಗಳನ್ನು ನೀಡುತ್ತದೆ ಮತ್ತು  ಮೀನುಗಾರಿಕಾ ಸಂಧರ್ಭದಲ್ಲಿ ಉತ್ತಮ ಮೀನುಗಳ ಲಭ್ಯತೆಯ ಮಾಹಿತಿ  ಮತ್ತು ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಮುನ್ಸೂಚನೆಗಳನ್ನು ನೀಡುತ್ತದೆ. ಚಂಡಮಾರುತಗಳು ಅಥವಾ ಇತರ ನೈಸರ್ಗಿಕ ವಿಪತ್ತುಗಳ ಸಮಯದಲ್ಲಿ ಸಹ ಮುನ್ಸೂಚನೆ ನೀಡಲು ಸಹಕಾರಿಯಾಗುತ್ತದೆ.ಹೆಚ್ಚಿನ   ಸಂಧರ್ಭದಲ್ಲಿ ಆಳ ಮೀನುಗಾರಿಕೆಯ ಸಮಯದಲ್ಲಿ ಮೀನುಗಾರರ ಸುರಕ್ಷತೆ, ರಕ್ಷಣೆ ,ತಕ್ಷಣದ ಮತ್ತು ತುರ್ತು ಸವಾಲನ್ನು ಎದುರಿಸಲು ಸಹಾಯ  ಮಾಡಲಿದೆ. . ಭಾರತದಲ್ಲಿ ಇಂದು  ಸರ್ವ ವ್ಯಾಪಿ ಇಂತಹ  ಉಪಗ್ರಹ ಆಧಾರಿತ ಹೊಸ ತಂತ್ರಜ್ಞಾನದ  ಲಭ್ಯತೆಯು  ಇದ್ದು,ಇದು ಮೀನುಗಾರ ರಿಗೆ ಸುರಕ್ಷತೆಯ ಭರವಸೆಯನ್ನು ನೀಡುತ್ತದೆ.

Leave a Reply

Your email address will not be published. Required fields are marked *

error: Content is protected !!