ಉಳ್ಳಾಲ ಬೋಟ್ ದುರಂತ – ನಾಳೆ ಸಂಜೆಯೊಳಗೆ ಪರಿಹಾರ ಘೋಷಣೆ: ಕೋಟ
ಮಂಗಳೂರು, ಡಿ2: ಉಳ್ಳಾಲ ಬೋಟ್ ದುರಂತ ಬಗ್ಗೆ ಮುಖ್ಯಮಂತ್ರಿಗಳ ಗಮನಕ್ಕೆ ತರಲಾಗಿದ್ದು, ನಾಳೆ ಸಂಜೆಯೊಳಗೆ ಪರಿಹಾರ ಘೋಷಿಸಲಾಗುವುದು ಎಂದು ಬಂದರು ಮತ್ತು ಮೀನುಗಾರಿಕಾ ಸಚಿವ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ವೆನ್ಲಾಕ್ ಆಸ್ಪತ್ರೆಗೆ ಭೇಟಿ ನೀಡಿ, ದುರಂತದಲ್ಲಿ ಸಾವನ್ನಪ್ಪಿದವರ ಕುಟುಂಬಕ್ಕೆ ಸಾಂತ್ವ ಹೇಳಿದರು. ಬಳಿಕ ಮಾತನಾಡಿದ ಅವರು, ದುರಂತ ಹೇಗಾಯಿತು ಎನ್ನುವ ಬಗ್ಗೆ ತನಿಖೆಯಾಗುತ್ತಿದೆ. ಘಟನೆಯ ಕುರಿತು ಮುಖ್ಯಮಂತ್ರಿಗಳ ಗಮನಕ್ಕೆ ತಂದ್ದಿದ್ದು, ಸರ್ಕಾರ ನಿಮ್ಮ ಜೊತೆಯಿದೆ ಎಂದರು. ಇದೇ ವೇಳೆ ಪರಿಹಾರಕ್ಕೆ ಸಂಬಂದಿಸಿ ಮಾತನಾಡಿದ ಅವರು, ಇಲಾಖೆಯಿಂದ ತಲಾ 6 ಲಕ್ಷ ಪರಿಹಾರ ನೀಡಲು ಸಾಧ್ಯವಿದ್ದು, ನಾಳೆ ಸಂಜೆಯೊಳಗೆ ಪರಿಹಾರ ಘೋಷಣೆ ಮಾಡಲಾಗುವುದು ಎಂದು ಹೇಳಿದರು.