ಉಡುಪಿ ಜಿಲ್ಲಾ ಹೋಟೆಲ್ ಉದ್ದಿಮೆದಾರರ ಸಹಕಾರ ಸಂಘದ ಮಹಾ ಸಭೆ
ಉಡುಪಿ: ಉಡುಪಿ ಜಿಲ್ಲಾ ಹೋಟೆಲ್ ಉದ್ದಿಮೆದಾರರ ಸಹಕಾರ ಸಂಘದ2019-20ನೇ ಸಾಲಿನ ವಾರ್ಷಿಕ ಮಹಾ ಸಭೆಯು ಉಡುಪಿಯ ಡಯಾನ ಹೊಟೇಲ್‌ನ ಸುನಂದಾ ಸಭಾಂಗಣದಲ್ಲಿ ರವಿವಾರ ನಡೆಯಿತು.
ಸಂಘದ ಅಧ್ಯಕ್ಷ ಡಾ. ತಲ್ಲೂರು ಶಿವರಾಮ ಶೆಟ್ಟಿ ನೇತೃತ್ವದಲ್ಲಿ ಮಹಾ ಸಭೆ ನಡೆಯಿತು. ಈ ಸಂದರ್ಭ ಸಂಘದ ಉಪಾಧ್ಯಕ್ಷ ಕೆ ನಾಗೇಶ್ ಭಟ್, ನಿರ್ದೇಶಕರುಗಳಾದ ಹರೀಶ್ ಹೆಗ್ಡೆ, ಲಕ್ಷ್ಮಣ್ ಜಿ. ನಾಯಕ್, ಎಂ ವಿಠಲ ಪೈ, ಬಿ ಅಶೋಕ ಪೈ, ಸುನೀಲ್ ಶೆಟ್ಟಿ, ತಲ್ಲೂರು ಶಿವ ಪ್ರಸಾದ್ ಎಸ್. ಶೆಟ್ಟಿ , ಸುಧೀರ್, ಗಿರಿಜಾ ಎಸ್ ಶೆಟ್ಟಿ, ಪ್ರಫುಲ್ಲ ಎಸ್ ಹೆಗ್ಡೆ ಮೊದಲಾದವರು ಉಪಸ್ಥಿತರಿದ್ದರು.
ಸಭೆಯಲ್ಲಿ ನೂತನಾಗಿ ಉಡುಪಿ ಜಿಲ್ಲಾ ರೆಡ್ ಕ್ರಾಸ್ ಸೊಸೈಟಿಗೆ ಆಯ್ಕೆಯಾದ ಸಂಘದ ಅಧ್ಯಕ್ಷರಾದ ಡಾ.ತಲ್ಲೂರು ಶಿವರಾಮ್ ಶೆಟ್ಟಿ, ಮಾಜಿ ಕಾರ್ಯದರ್ಶಿ ಮುರಲೀಧರ ರಾವ್, ಸೊಸೈಟಿಯ ಉತ್ತಮ ಗ್ರಾಹಕ ರಾಮಚಂದ್ರ ಚಡಗ ಮತ್ತು ಎಂ. ವಿಠ್ಠಲ್ ಪೈರನ್ನು ಸನ್ಮಾನಿಸಲಾಯಿತು.