ಹೆಬ್ರಿ: ಐದು ದಿನಗಳ ಹಿಂದೆ ನಾಪತ್ತೆಯಾದ ಯುವಕನ ಮೃತ ದೇಹ ಪತ್ತೆ, ಕೊಲೆ ಶಂಕೆ?
ಹೆಬ್ರಿ: ಕಳೆದ ಐದು ದಿಗಳ ಹಿಂದೆ ನಾಪತ್ತೆಯಾದ ಯುವಕನೊರ್ವನ ಮೃತ ದೇಹ ಕೊಲೆಯಾದ ರೀತಿಯಲ್ಲಿ ಹೆಬ್ರಿಯ ಅರಣ್ಯ ಪ್ರದೇಶದಲ್ಲಿ ಪತ್ತೆಯಾಗಿದೆ.
ಮುದ್ರಾಡಿ ಗ್ರಾಮದ ಜಕ್ಕನಾಡಿ ನಿವಾಸಿ ಶಿವ ಕುಮಾರ್ (28 ) ಎಂಬಾತನ ಮೃತ ದೇಹ ಹೆಬ್ರಿ ಗ್ರಾಮದ ಜರವತ್ತು ಅರಣ್ಯ ಪ್ರದೇಶದ ನಡುವೆ ಶನಿವಾರ ಪತ್ತೆಯಾಗಿದೆ.
ಶಿವಕುಮಾರ್ ಧ್ವನಿವರ್ಧಕ ಸಂಸ್ಥೆಯಲ್ಲಿ ಕೆಲಸ ಮಾಡಿಕೊಂಡಿದ್ದು, ಇತ್ತೀಚೆಗೆ ಲಾಕ್ ಡೌನ್ ನಿಂದಾಗಿ ಉದ್ಯೋಗವಿಲ್ಲದೆ, ಮನೆಯ ಬಳಿಯ ಹೊಲೋ ಬ್ಲಾಕ್ ಫ್ಯಾಕ್ಟರಿಯಲ್ಲಿ ಕೆಲಸಕ್ಕೆ ಸೇರಿದ್ದ. ಮೇ 13 ರಂದು ಬೆಳಿಗ್ಗೆ ಕೆಲಸದ ಸ್ಥಳದಿಂದ ಹೊಟೇಲ್ಗೆ ತಿಂಡಿ ತಿನ್ನಲು ಹೋದ ಶಿವಕುಮಾರ್ ನಾಪತ್ತೆಯಾಗಿದ್ದ.
ಶನಿವಾರ ಸಂಜೆ ನಾಲ್ಕು ಗಂಟೆಗೆ ಶಿವಕುಮಾರ್ ಮೃತದೇಹ ಅಂಗಾತನೆ ಮಲಗಿದ, ಹಾಗೂ ಕುತ್ತಿಗೆಯಲ್ಲಿ ಬೈರಾಸು ಸುತ್ತಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಮೃತರ ಸಾವಿನಲ್ಲಿ ಸ0ಶಯ ಇರುವುದಾಗಿ ಮೃತನ ಸಹೋದರ ಹೆಬ್ರಿ ಠಾಣೆಯಲ್ಲಿ ದೂರು ನೀಡಿದ್ದಾರೆ.