ಕರಾವಳಿಯನ್ನು ನಾವು ದತ್ತು ತಗೊಂಡಿದ್ದೇವೆ, ಅಭಿವೃದ್ಧಿನೂ ಮಾಡುತ್ತೇವೆ: ಶೋಭಾ ಕರಂದ್ಲಾಜೆ

ಉಡುಪಿ: ಹಿಂದೂ ಧರ್ಮ ಏನು ಬಿಜೆಪಿಗರ ಸ್ವತ್ತಾ? ಎಂದು ಉಡುಪಿಯಲ್ಲಿ ಡಿ.ಕೆ ಶಿವಕುಮಾರ್ ಹೇಳಿಕೆಗೆ ತಿರುಗೇಟು ನೀಡಿರುವ ಸಂಸದೆ ಶೋಭಾ ಕರಂದ್ಲಾಜೆ, ಹೌದು, ಖಂಡಿತವಾಗಿಯೂ ಕರಾವಳಿಯನ್ನು ನಾವು ದತ್ತು ತಗೊಂಡಿದ್ದೇವೆ. ಕರ್ನಾಟಕ ಕರಾವಳಿ ನಮ್ಮದೇ. ಉಡುಪಿಯ ಐವರು ಶಾಸಕರು ಬಿಜೆಪಿಯವರೇ” ಎಂದು ಹೇಳಿದ್ದಾರೆ.

ಉಡುಪಿಯಲ್ಲಿ ಮಾತನಾಡಿದ ಸಂಸದೆ, ಈ ಭಾಗವನ್ನು ದತ್ತು ತೆಗೆದುಕೊಳ್ಳುತ್ತೇವೆ, ಅಭಿವೃದ್ಧಿನೂ ಮಾಡುತ್ತೇವೆ. ಕಾಂಗ್ರೆಸ್ ಜನವಿರೋಧಿ ನೀತಿಗೆ ಕರಾವಳಿ ಜನ ತಕ್ಕ ಪಾಠ ಕಲಿಸುತ್ತಾರೆ. ದೇವರ ವಿಚಾರದಲ್ಲಿ ನಾವು ರಾಜಕೀಯ ಮಾಡುತ್ತಿಲ್ಲ. ನಾವು ದೇವರ ಪರ ನಿಂತವರು, ಡಿಕೆಶಿ ಚುನಾವಣೆ ಬಂದಾಗ ಮಾತ್ರ ದೇವಸ್ಥಾನ ತಿರುಗುತ್ತಾರೆ” ಎಂದು ಆರೋಪಿಸಿದರು.

ಸಂತೋಷ್ ಆತ್ಮಹತ್ಯೆ ಯತ್ನ: ಆ ಸಚಿವ ಯಾರು? ಆ ಪರಿಷತ್ ಸದಸ್ಯ ಯಾರು?
ಸಿಎಂ ರಾಜಕೀಯ ಕಾರ್ಯದರ್ಶಿ ಸಂತೋಷ್ ಆತ್ಮಹತ್ಯೆ ಯತ್ನ ವಿಚಾರವಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರಿಗೆ ತಿರುಗೇಟು ನೀಡಿದ ಸಂಸದೆ ಶೋಭಾ ಕರಂದ್ಲಾಜೆ, “”ನಿಮಗೆ ಗೊತ್ತಿರುವ ಮಾಹಿತಿಯನ್ನು ಮೊದಲು ಬಹಿರಂಗಪಡಿಸಿ. ಬುಟ್ಟಿಯಲ್ಲಿ ಹಾವಿದೆ, ಹಾವಿದೆ ಎಂದು ಹೆದರಿಸುವುದನ್ನು ಬಿಡಿ” ಎಂದರು   ಸಾಧ್ಯವಿದ್ದರೆ ಆ ಹಾವನ್ನು ಹೊರಗೆ ಬಿಡಿ. ಈ ಪ್ರಕರಣದಲ್ಲಿ ನಿಮ್ಮ ಷಡ್ಯಂತ್ರ ಏನಾದರೂ ಇದೆಯಾ? ನಮ್ಮ ನಾಯಕರ ವಿರುದ್ಧ ಏನು ಷಡ್ಯಂತ್ರ ಮಾಡಿದ್ದೀರಿ ಮೊದಲು ಸ್ಪಷ್ಟಪಡಿಸಿ. ಯಾವ ಹಾವನ್ನು ಬಿಡ್ತೀರೋ ಕಾದು ನೋಡೋಣ ಎಂದು ಹೇಳಿದರು.

ಸುಳ್ಳು ಹೇಳುವುದರಲ್ಲಿ ಯಡಿಯೂರಪ್ಪ ಮಿನಿ ಮೋದಿ ಇದ್ದಂತೆ ಎಂಬ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಗರಂ ಆದ ಸಂಸದೆ ಶೋಭಾ ಕರಂದ್ಲಾಜೆ, “”ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಹೇಗೆ ಆಡಳಿತ ಮಾಡಿದ್ದಾರೆ ಎಂಬುದನ್ನು ನೋಡಿದ್ದೇವೆ. ಕೋಮುಗಳನ್ನು ಒಡೆದು ಆಳುವ ನೀತಿ ಮಾಡಿದ್ದರು. ಜಾತಿ ಜಾತಿಯನ್ನು ಒಡೆಯುವ ನೀತಿ ಮಾಡಿದ್ದರು. ಅಭಿವೃದ್ಧಿಗಿಂತ ಹೆಚ್ಚಾಗಿ ಜಾತಿ ಒಡೆಯುವುದರಲ್ಲಿ ಮಗ್ನರಾಗಿದ್ದರು ಎಂದು ತಿರುಗೇಟು ನೀಡಿದರು.

ನರೇಂದ್ರ ಮೋದಿ ಕೊಟ್ಟ ಅಕ್ಕಿ, ಗೋಧಿ ಬಳಕೆ ಮಾಡಿಕೊಂಡಿರಿ. ನಾನೇ ಅನ್ನಭಾಗ್ಯ ಯೋಜನೆ ಕೊಟ್ಟೆ ಎಂದು ಸುಳ್ಳು ಹೇಳಿದೀರಿ. ಸುಳ್ಳು ಹೇಳುವುದರಲ್ಲಿ ಯಾರಾದರೂ ನಿಪುಣರು ಇದ್ದರೆ ಅದು ಕಾಂಗ್ರೆಸ್ಸಿನವರು. ಸಿದ್ದರಾಮಯ್ಯನವರಿಗೆ ಕಾಂಗ್ರೆಸ್ ಅಥವಾ ಬೇರೆಲ್ಲೂ ಭವಿಷ್ಯವಿಲ್ಲ. ಹಾಗಾಗಿ ಸಿದ್ದರಾಮಯ್ಯ ಮಾತಿಗೆ ಯಾರೂ ಬೆಲೆ ಕೊಡುವುದಿಲ್ಲ ಎಂದು ಸಂಸದೆ ಶೋಭಾ ಕರಂದ್ಲಾಜೆ ಉಡುಪಿಯಲ್ಲಿ ಆರೋಪಿಸಿದರು.  

1 thought on “ಕರಾವಳಿಯನ್ನು ನಾವು ದತ್ತು ತಗೊಂಡಿದ್ದೇವೆ, ಅಭಿವೃದ್ಧಿನೂ ಮಾಡುತ್ತೇವೆ: ಶೋಭಾ ಕರಂದ್ಲಾಜೆ

  1. ದತ್ತು ತಗೊಳ್ಳಿ!ಮೊದಲು ಕುಂದಾಪುರ ಫ್ಲೈಓವರ್ ಪೂರ್ಣಗೊಳಿಸಿ

Leave a Reply

Your email address will not be published. Required fields are marked *

error: Content is protected !!