ಗ್ರಾ.ಪಂ.ಚುನಾವಣೆ ಘೋಷಣೆ – ಕಾಂಗ್ರೆಸ್ ನ ರಾಜಕೀಯ ದೊಂಬರಾಟ ಪ್ರಾರಂಭ: ಪೆರ್ಣಂಕಿಲ ಶ್ರೀಶ ನಾಯಕ್
ಉಡುಪಿ: ಕೊರೋನಾ ಸಂಕಷ್ಟದ ಸಂದರ್ಭದಲ್ಲಿ ಗಾಢ ನಿದ್ದೆಯಲ್ಲಿದ್ದ ಕಾಂಗ್ರೆಸ್ ನಾಯಕರು ಇದೀಗ ಗ್ರಾಮ ಪಂಚಾಯತ್ ಚುನಾವಣೆ ಘೋಷಣೆಯಿಂದ ಎಚ್ಚೆತ್ತು ರಾಜಕೀಯ ದೊಂಬರಾಟದಲ್ಲಿ ತೊಡಗಿರುವುದು ಹಾಸ್ಯಾಸ್ಪದ ಎಂದು ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಪೆರ್ಣಂಕಿಲ ಶ್ರೀಶ ನಾಯಕ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಕೇಂದ್ರ ಮತ್ತು ರಾಜ್ಯ ಸರಕಾರಗಳ ಜನಪರ ಆಡಳಿತ ಮತ್ತು ದಾಖಲೆಯ ಅಭಿವೃದ್ದಿ ಚಟುವಟಿಕೆಗಳಿಂದ ಕಂಗೆಟ್ಟಿರುವ ಕಾಂಗ್ರೆಸಿಗರು ದಿಕ್ಕುದೆಸೆ ಇಲ್ಲದ ಪ್ರತಿಭಟನೆಗಳ ಹೆಸರಲ್ಲಿ ಸರಕಾರದ ಸಾಧನೆಗಳು ಮತ್ತು ಐತಿಹಾಸಿಕ ನಿರ್ಣಯಗಳನ್ನು ವಿರೋಧಿಸುವ ಮೂಲಕ ಬಿಜೆಪಿಯ ಕ್ರಿಯಾಶೀಲ ಶಾಸಕರ ಮೇಲೆ ವ್ರಥಾ ಹುರುಳಿಲ್ಲದ ಆರೋಪವನ್ನು ಹೊರಿಸುತ್ತಿರುವುದು ಕಾಂಗ್ರೆಸ್ ನ ಭೌದ್ಧಿಕ ದಿವಾಳಿತನವನ್ನು ತೋರಿಸುತ್ತದೆ ಎಂದು ಅವರು ಹೇಳಿದ್ದಾರೆ. ಮಧ್ಯವರ್ತಿಗಳ ಹಾವಳಿ ತಪ್ಪಿಸಿ, ದೇಶದ ರೈತನ ಆದಾಯ ದ್ವಿಗುಣಗೊಳಿಸುವ ಜೊತೆಗೆ ಬೆಂಬಲ ಬೆಲೆಯೊಂದಿಗೆ ರೈತರಿಗೆ ಆರ್ಥಿಕ ಸ್ವಾತಂತ್ರ್ಯವನ್ನು ನೀಡಿದ ರೈತ ಮಸೂದೆ ದೇಶದ ಬೆನ್ನೆಲುಬಾಗಿರುವ ರೈತಾಪಿ ವರ್ಗಕ್ಕೆ ವರದಾನವೆನಿಸಿದೆ. ಕೃಷಿ ಕಾಯ್ದೆ, ಭೂಮಸೂದೆ ಕಾಯ್ದೆ, ಕಾರ್ಮಿಕ ಕಾಯ್ದೆ, ಬಿಪಿಎಲ್ ಕಾರ್ಡು, ನೆರೆ ಪರಿಹಾರ ವಿತರಣೆ, ಕೋವಿಡ್-19 ನಿರ್ವಹಣೆ ಮತ್ತು ಸಹಾಯಧನ ವಿತರಣೆ ಮುಂತಾದ ಸರಕಾರ ಜನಪರ ಕಾರ್ಯಕ್ರಮಗಳ ಬಗ್ಗೆ ಸದಾ ಅಪಪ್ರಚಾರದಲ್ಲಿ ತೊಡಗಿರುವ ಕಾಂಗ್ರೆಸ್, ಅಪಪ್ರಚಾರವೇ ಕಾಂಗ್ರೆಸ್ ಜೀವಾಳ ಎಂದು ಸಾಬೀತುಪಡಿಸಿದೆ ಎಂದು ನಾಯಕ್ ಹೇಳಿದ್ದಾರೆ. ಬ್ರಹ್ಮಾಂಡ ಭ್ರಷ್ಟಾಚಾರಕ್ಕೆ ಹೆಸರುವಾಸಿಯಾಗಿರುವ ಕಾಂಗ್ರೆಸ್ ನ ದೇಶ ವಿರೋಧಿ ನೀತಿಯನ್ನು ದೇಶದ ಜನತೆ ಚೆನ್ನಾಗಿ ಅರಿತಿದ್ದಾರೆ. ಸ್ವತಃ ನಾಯಕತ್ವದ ಗೊಂದಲಗಳಿಂದ ಸೊರಗಿರುವ ಕಾಂಗ್ರೆಸ್ ತನ್ನ ಆಂತರಿಕ ವಿಚಾರಗಳ ಬಗ್ಗೆ ಮೊದಲು ಆಲೋಚಿಸುವುದು ಉತ್ತಮ. ಕಾಂಗ್ರೆಸ್ ನ ಪರಮೋಚ್ಚ ನಾಯಕರೇ ಭ್ರಷ್ಟಾಚಾರದ ಆರೋಪದಲ್ಲಿ ಬೇಲ್ ಮೇಲೆ ತಿರುಗಾಡುತ್ತಿದ್ದು ಕೇವಲ ಬೊಗಳೆ ಬಿಡುವ ಕಾಂಗ್ರೆಸ್ ನಾಯಕರಿಗೆ ಕೇಂದ್ರ ಮತ್ತು ರಾಜ್ಯ ಸರಕಾರಗಳು ಮತ್ತು ಬಿಜೆಪಿ ನಾಯಕರುಗಳ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ ಎಂದು ಪೆರ್ಣಂಕಿಲ ಶ್ರೀಶ ನಾಯಕ್ ಹೇಳಿದ್ದಾರೆ. |
ದೇಶದ ಆರ್ಥಿಕ ಪರಿಸ್ಥಿತಿ ಎಷ್ಟು ಇದೆ? ಭೃಷ್ಟಾಚಾರದಲ್ಲಿ ನಿಮ್ಮ ಪ್ರಧಾನಿ ಯಾವ ಹಂತಕ್ಕೆ ತಂದ್ದಿದ್ದರು ವಿಶ್ವಮಟ್ಟದಲ್ಲಿ..
ರೈತರು ಈಗ ಯಾವ ಮಟ್ಟದಲ್ಲಿ ಹೋರಾಟ ಮಾಡುತ್ತಿದ್ದರು? ರಕ್ಷಣಾ ಇಲಾಖೆ ಅವರಿಗೆ ಯಾವ ಮಟ್ಟದಲ್ಲಿ ಹಿಂಸೆ ನೀಡುತ್ತಿದ್ದರು? ರಾಜ್ಯದಲ್ಲಿ ಸಿ.ಎಮ್ ಬದಲಾಯಿಸುವ ಇರಾದೆ ಎನು ಇತ್ತು?