ಜೆಡಿಎಸ್ ಉಡುಪಿ ವಿಧಾನಸಭಾ ಕ್ಷೇತ್ರದ ನೂತನ ಅಧ್ಯಕ್ಷರಾಗಿ ಬಾಲಕೃಷ್ಣ ಕಪ್ಪೆಟ್ಟು
ಉಡುಪಿ: ಜನತಾದಳ (ಜಾತ್ಯತೀತ) ಪಕ್ಷದ ಉಡುಪಿ ವಿಧಾನಸಭಾ ಕ್ಷೇತ್ರದ ನೂತನ ಅಧ್ಯಕ್ಷರಾಗಿ ಬಾಲಕೃಷ್ಣ ಆಚಾರ್ಯ ಕಪ್ಪೆಟ್ಟುರನ್ನು ರಾಜ್ಯಾಧ್ಯಕ್ಷರಾದ ಎಚ್ .ಕೆ. ಕುಮಾರಸ್ವಾಮಿಯವರ ಅನುಮೋದನೆಯೊಂದಿಗೆ ಜಿಲ್ಲಾಧ್ಯಕ್ಷರಾದ ಯೋಗೀಶ್ ವಿ. ಶೆಟ್ಟಿ ನೇಮಕಾತಿಯ ಆದೇಶ ಹೊರಡಿಸಿರುತ್ತಾರೆ. ಬಾಲಕೃಷ್ಣ ಆಚಾರ್ಯ ಉಡುಪಿ ಜಿಲ್ಲೆಯ ಚಿನ್ನ ಬೆಳ್ಳಿ ಕೆಲಸಗಾರರ ಅಧ್ಯಕ್ಷರಾಗಿ ಸೇವೆ ಸಲ್ಲಿಸಿರುತ್ತಾರೆ.