ವಾಹನಗಳಿಗೆ ಏಕರೂಪದ ಹೊಗೆ ತಪಾಸಣೆ: ತಪ್ಪಿತಸ್ಥರಿಗೆ ಜೈಲು, 10 ಸಾವಿರ ರೂ. ದಂಡ

ನವದೆಹಲಿ: ದೇಶಾದ್ಯಂತ ವಾಹನಗಳಿಗೆ ಏಕರೂಪದ ಹೊಗೆ ತಪಾಸಣೆ ಪ್ರಮಾಣ ಪತ್ರವನ್ನು ನೀಡಲು ಕೇಂದ್ರ ಸಾರಿಗೆ ಸಚಿವಾಲಯ ಮುಂದಾಗಿದೆ. ಈ ಏಕ ರೂಪದ ಹೊಗೆ ತಪಾಸಣಾ ಪ್ರಮಾಣ ಪತ್ರವು ಕ್ಯೂಆರ್ ಕೋಡ್ ಆಧಾರಿತ ಪ್ರಮಾಣಪತ್ರವಾಗಿದ್ದು, ಈ ಕ್ಯೂಆರ್ ಕೋಡ್ ಆಧಾರಿತ ಪಿಯುಸಿ -ಪೊಲ್ಯೂಷನ್ ಅಂಡರ್ ಕಂಟ್ರೋಲ್ ಪ್ರಮಾಣಪತ್ರದಲ್ಲಿ ಮಾಹನಗಳ ಸಂಪೂರ್ಣ ಮಾಹಿತಿ ಸಿಗಲಿದೆ.

ಈ ಪ್ರಮಾಣ ಪತ್ರದ ಕ್ಯೂ ಆರ್ ಸ್ಕ್ಯಾನ್ ಮಾಡಿದರೆ  ವಾಹನದ ಮಾಲೀಕ, ವಾಹನದ ಹೊಗೆಯುಗುಳುವ ಸ್ಥಿತಿ ಗತಿಗಳ ಬಗ್ಗೆ ಸಂಪೂರ್ಣ ಮಾಹಿತಿಗಳು ಸಿಗುತ್ತದೆ. ಇದರೊಂದಿಗೆ ಯಾರಾದರೂ ವಾಹನ ಕಳವು ಮಾಡಿ ಪಿಯುಸಿ ಸರ್ಟಿಫಿಕೇಟ್ ಪಡೆಯಲು ಹೋದರೆ ಪತ್ತೆ ಹಚ್ಚುವುದು ಇದರಿಂದ ಸುಲಭವಾಗುತ್ತದೆ.

ಈ ಕುರಿತಾಗಿ ಕೇಂದ್ರ ರಸ್ತೆ ಸಾರಿಗೆ ಸಚಿವಾಲಯ ಪ್ರಕಟಣೆ ಹೊರಡಿಸಿದ್ದು, ಜನಾಭಿಪ್ರಾಯ ಕೇಳಿದೆ. ವಾಹನ ಹೊಗೆ ತಪಾಸಣೆ ನಿಯಮಗಳಿಗೆ ಅನುಗುಣವಾಗಿ ಇಲ್ಲದಿದ್ದ ಸಂದರ್ಭದಲ್ಲಿ ವಾಹನವನ್ನು ಪರೀಕ್ಷೆಗೆ ಒಳಪಡಿಸಲು ಸೂಚನೆ ನೀಡಬಹುದು ಹಾಗೂ ತಪ್ಪಿತಸ್ಥರಿಗೆ ಮೂರು ತಿಂಗಳವರೆಗೆ ಜೈಲು  ಸಜೆ ಮತ್ತು 10 ಸಾವಿರ ರೂಪಾಯಿವರೆಗೆ ದಂಡ ವಿಧಿಸಲು ಅವಕಾಶವಿದೆ ಎಂದು ಪ್ರಕಟಣೆಯಲ್ಲಿ ಹೇಳಲಾಗಿದೆ.

2 thoughts on “ವಾಹನಗಳಿಗೆ ಏಕರೂಪದ ಹೊಗೆ ತಪಾಸಣೆ: ತಪ್ಪಿತಸ್ಥರಿಗೆ ಜೈಲು, 10 ಸಾವಿರ ರೂ. ದಂಡ

  1. ಹೀಗೆ ಪತ್ತೆ ಹಚ್ಚಲು ಹೇಗೆ ಸರಿ ಬರುವುದು!? ನಾನು ರ್ವ ಆಟೋಮೋಬೈಲ್ ಮೆಕೇನಿಕ್ ಆಗಿದ್ದೂ ನನ್ನ ಪ್ರಕಾರ Emission Test ಮುಖಾಂತರ ವಾಹನದ ಸ್ತಥಿತಿಗತಿಯನ್ನು ಕಂಡು ಹಿಡಿಯುವುದು ತಿಳುವಳಿಕೆ ಇಲ್ಲದ ಮೂರ್ಖತನವೆಂದು ಭಾವಿಸುವೆ. ವಾಹನದ DOCUMENTS ಗಳೇ ಮೂಲ ಆದಾರಿತವಾದದ್ದು. RC ಗಳನ್ನು ವಾಹನದ ಪ್ರಸ್ತುತ ಸ್ಥಿತಿಖತಿಗಳ ಛಾಯಚಿತ್ರಣಗಳನ್ನು ಅಪ್ಡೇಟ್ ಮಾಡಿ INSURE & Emission Report ಖಳನ್ನು ಏಕರೂಪವಾಗಿ ಕಂಟ್ರೋಲ್ ಮಾಡಬಹುದಲ್ಲಾ!? ಅಕಸ್ಮಾತ್ ವಾಹನಗಳಲ್ಲಿ spark plug, Injector ಅಥವ Carborator, Aur Filter ಗಳನ್ನೇ ಬದಲಿಸಿಬಿಟ್ಟರೆ ಆ ವಾಹನದಿಂದ ಹೊಗೆ ಉಗುಳುವಿಕೆಯಲ್ಲಿ ವ್ಯತ್ಯಾಸ ಕಂಡು ಬರುತ್ತದಲ್ಲ, ಆಗ ಹೇಗೆ ಕಂಡು ಹಿಡಿಯುವಿರೀ!?

  2. ಹೆಸರಿಗೊಂದು ಕಾನೂನು ಅಷ್ಟೇ ಇದರ ಹಿಂದೆ ಇರುವ ಉದ್ದೇಶ ವಾಹನ‌ಸವಾರರಿಂದ ಹಣ ವಸೂಲಿ ಮಾಡುವ ಮಾರ್ಗ ಒಂದೇ. ಕಾನೂನಿನ ಹೆಸರಲ್ಲಿ ಲಂಚ ಪಡೆಯುವ ಅಧಿಕಾರಿಗಳಿಗೆ ಒಂದು ಸುವರ್ಣ ಯುಗ. ಈ ಕಾನೂನು ಯಾವ ಮಾದರಿ ಅಂದರೆ ಮನೆ ಅಥವಾ ಕಟ್ಟಡ ಕಟ್ಟುವವರು 9&11 ಅನುಸರಿಸಬೇಕು ಅಂತ ಇದೇ. ಆದರೆ ಅದು ಮನೆ ಅಥವಾ ಕಟ್ಟಡಕ್ಕ ಅಥವಾ ಮನೆ ಕಟ್ಟಿ ಸುತ್ತಾ ಪಾಗರ ಮಾಡುವುದಕ್ಕ ಅಂತ ಇನ್ನೂ ಕೆಲವು ಸರಕಾರಿ ಅದಿಕಾರಿ ಮತ್ತು ಪಿ.ಡಿ.ಯೋ ಅವರಿಗೆ ಗೊತ್ತಿಲ್ಲ. ಲಂಚ ಮಂದೆ ಇದ್ದರೆ ಈ ಯಾವ ಕಾನೂನು ಪಾಲನೆ ಆಗೊಲ್ಲ. ಸರಕಾರದ ಕಾನೂನಿನ ಹಣ ಇಲ್ಲದೆ ಇರುವ ಬಡ ವರ್ಗದವರಿಗೆ ಮಾತ್ರ.

Leave a Reply

Your email address will not be published. Required fields are marked *

error: Content is protected !!